ಬೆಂಗಳೂರು.28.ಸೆಪ್ಟೆಂಬರ್.26:ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಶೈಕ್ಷಣಿಕ ವರ್ಷ ಆರಂಭವಾಗಿ ಮೂರು ತಿಂಗಳು ಕಳೆದರೂ 5,068 ಅತಿಥಿ ಉಪನ್ಯಾಸಕರಿಗೆ ಭರವಸೆ ನೀಡಿದ್ದ ಶೈಕ್ಷಣಿಕ ಸಂಯೋಜಕ ಹುದ್ದೆಗಳ ನೇಮಕಾತಿ ಇನ್ನೂ ಮಾಡಿಲ್ಲ. ಆದೇಶ ಹೊರಡಿಸಿ ತಿಂಗಳುಗಳು ಕಳೆದರೂ ನೇಮಕಾತಿ ಪ್ರಕ್ರಿಯೆ ತಡ ಮಾಡುತ್ತಿರುವುದು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಹಿಡಿದ ಕೈಗನ್ನಡಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಸರ್ಕಾರಕೆ ಕೈಗನ್ನಡಿ ತೋರಿದ್ದಾರೆ.
ಸತತ ಎರಡು ದಶಕದಿಂದ ಸೇವೆ ಸಲ್ಲಿಸಿ ಇಂದು UGC ಯುಜಿಸಿ ಅರ್ಹತೆ ಅತರದಲ್ಲಿ ನೇಮಕಾತಿ ನಡೆಸಿ ಎಂದು 5000 ಕಿಂತಲೂ ಜಾಸ್ತಿ ಮನೆಯೆಲ್ಲಿ ಕೆಲಸ ಇಲ್ಲದ ಕಾರಣಕೆ ಮನೆಯಲ್ಲಿ ಕುಳಿತು ಇದ್ದಾರೆ
ಶಕ್ಷಣಿಕ ಸಂಯೋಜಕರಾಗಿ ಸೇವೆಗೆ ಶೇರಿಸ್ಕುತಿವಿ ಅಂದು ನೀಡಿದ ಭರವಸೆಗೆ ಸರ್ಕಾರಿಕೆ ನೆನಪು ಬರುತ್ತಿಲ್ಲ ಅತಿಥಿಗಳಿಗೆ ಸಿಗದ ಹುದ್ದೆ’ ವಿಶೇಷ ವರದಿಯನ್ನು ಉಲ್ಲೇಖಿಸಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಸಾವಿರಾರು ಅತಿಥಿ ಉಪನ್ಯಾಸಕರು ಮತ್ತು ಅವರ ಕುಟುಂಬಗಳು ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿವೆ. ಅವರ ಜೀವನ ಮತ್ತು ಭವಿಷ್ಯದೊಂದಿಗೆ ಸರ್ಕಾರ ಆಟವಾಡಬಾರದು. ರಾಜ್ಯ ಸರ್ಕಾರ ಈ ವಿಚಾರದಲ್ಲಿ ಇನ್ನು ವಿಳಂಬ ಮಾಡದೆ ಸ್ಪಷ್ಟ ಹಾಗೂ ಅಂತಿಮ ನಿರ್ಧಾರ ಕೈಗೊಳ್ಳಬೇಕು’ ಎಂದು ಹೇಳಿದ್ದಾರೆ.
ಶೈಕ್ಷಣಿಕ ಸಂಯೋಜಕರ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಪೂರ್ಣಗೊಳಿಸಿ, ಅತಿಥಿ ಉಪನ್ಯಾಸಕರಿಗೆ ನ್ಯಾಯ ಒದಗಿಸಬೇಕು. ಅತಿಥಿ ಉಪನ್ಯಾಸಕರ ಬದುಕಿನ ಅನಿಶ್ಚಿತತೆಯನ್ನು ಹೆಚ್ಚಿಸುವ ನಿರ್ಲಕ್ಷ್ಯ ಧೋರಣೆ ಸಲ್ಲದು. ಅವರ ಜೀವನದೊಂದಿಗೆ ಆಟವಾಡುವುದನ್ನು ರಾಜ್ಯ ಸರ್ಕಾರ ಕೂಡಲೇ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.





Any questions related to 5,068 ಅತಿಥಿ ಉಪನ್ಯಾಸಕರಿಗೆ ಭರವಸೆ ನೀಡಿದ್ದ ಸರ್ಕಾರ !?