Home » ಲೈವ್ ನ್ಯೂಸ್ » ಸ್ವಾವಲಂಬಿ ಸಾರಥಿ ಯೋಜನೆಯಡಿ 400.000 ಸಹಾಯಧನಕೆ ಅರ್ಜಿ ಆಹ್ವಾನ.

ಸ್ವಾವಲಂಬಿ ಸಾರಥಿ ಯೋಜನೆಯಡಿ 400.000 ಸಹಾಯಧನಕೆ ಅರ್ಜಿ ಆಹ್ವಾನ.

Facebook
X
WhatsApp
Telegram

ಬೆಂಗಳೂರು.09.ಜನವರಿ.26: ರಾಜ್ಯದ ಪರಿಶಿಷ್ಟ ಪಂಗಡದ ಯುವಕರು ಮತ್ತು ಯುವತಿಯರಿಗೆ ರಾಜ್ಯ ಸರ್ಕಾರ ವತಿಯಿಂದ ಸ್ವ-ಉದ್ಯೋಗವನ್ನು ಉತ್ತೇಜಿಸಲು ಸ್ವಾವಲಂಬಿ ಸಾರಥಿ ಯೋಜನೆ ಆರಂಭಿಸಿದ್ದು, ಈ ಯೋಜನೆ ಮೂಲಕ ಟ್ರ್ಯಾಕ್ಟರ್, ಸರಕು, ಸಾರಿಗೆ ವಾಹನ ಖರೀದಿಗೆ 4 ಲಕ್ಷ ರೂ.ಗಳ ಸಹಾಯಧನಕೆ ಅರ್ಜಿ ಆಹ್ವಾನಿಸಲಾಗಿದೆ.

ಸರಕು ಸಾಗಾಣಿಕೆ ವಾಹನ, ಸಾರಿಗೆ ವಾಹನ, ಟ್ರಾಕ್ಟರ್ ಹಾಗೂ ಇತರೆ ವ್ಯಾಪಾರ ಉದ್ದೇಶಗಳಿಗೆ ನೆರವು ಸಿಗಲಿದ್ದು, ಘಟಕ ವೆಚ್ಚದ 70% ರಷ್ಟು ಅಥವಾ ಗರಿಷ್ಠ ರೂ.4.00 ಲಕ್ಷ ಸಹಾಯಧನ ನೀಡಲಿದೆ. ಉಳಿದ ಮೊತ್ತವನ್ನು ಬ್ಯಾಂಕ್ ಸಾಲದ ಮೂಲಕ ಭರಿಸಲಾಗುತ್ತದೆ ಸ್ವಂತ ವಾಹನ ಖರೀದಿ ಮೂಲಕ ಸ್ವಂತ ಉದ್ಯಮ ಆರಂಭಿಸುವ ಅವಕಾಶ. ಯುವಕರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ನೆರವಾಗುವ ಯೋಜನೆ ಇದಾಗಿದೆ.

ಸ್ವಾವಲಂಬಿ ಸಾರಥಿ ಯೋಜನೆ

ಈ ಯೋಜನೆ ಅಡಿಯಲ್ಲಿ ಒಬ್ಬ ವ್ಯಕ್ತಿಯು ಕಾರು ಅಥವಾ ಗೂಡ್ ವಾಹನಗಳಂತಹ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸುವ ಮೂಲಕಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು.

ಯೋಜನೆಗೆ ಸಬ್ಸಿಡಿ ಪಡೆಯಲು ಅರ್ಹತೆಗಳು

ಈ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರನು ಕನಿಷ್ಠ 21ರಿಂದ 45 ವರ್ಷದೊಳಗಿನ ನಿರುದ್ಯೋಗಿ ಆಗಿರಬೇಕು.

ಕುಟುಂಬಸ್ಥನ ವಾರ್ಷಿಕ ಆದಾಯವು 1.5 ಲಕ್ಷಕ್ಕಿಂತ ಮೇಲ್ಪಟ್ಟಿರಬಾರದು,.

ಕುಟುಂಬದ ಯಾವುದೇ ಸದಸ್ಯನೋ ಸರ್ಕಾರಿ ಉದ್ಯೋಗಿಯಾಗಿರಬಾರದು.

ಅರ್ಜಿ ಸಲ್ಲಿಸುವ ಕುಟುಂಬಸ್ಥರು ಭಾರತದ ಬಡತನ ರೇಖೆಗಿಂತ ಕೆಳಗಿರುವವರು ಮತ್ತು ಪರಿಶಿಷ್ಟ ಪಂಗಡದವರಾಗಿರಬೇಕು.

1) ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

2) ಆಧಾರ್ ಕಾರ್ಡ್

3) ಬ್ಯಾಂಕ್ ಪಾಸ್ ಬುಕ್

4) ಆದಾಯ ದೃಡೀಕರಣ ಪತ್ರ / ಜಾತಿ ದೃಢೀಕರಣ ಪತ್ರ

5) (DL) ಡ್ರೈವಿಂಗ್ ಲೈಸೆನ್ಸ್

6) ಫೋಟೋ

7) ಮೊಬೈಲ್ ನಂಬರ್

ವಿಶೇಷ ಸೂಚನೆ….

         ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅಜ ಸಲ್ಲಿಸಲು ಅರ್ಹರಿರುವುದಿಲ್ಲ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology