Home » ಲೈವ್ ನ್ಯೂಸ್ » ಸರ್ಕಾರಿ ಶಾಲೆಗಳಲ್ಲಿ ಎಐ ಮುಖಚರ್ಯೆ ಹಾಜರಾತಿ ಜಾರಿ

ಸರ್ಕಾರಿ ಶಾಲೆಗಳಲ್ಲಿ ಎಐ ಮುಖಚರ್ಯೆ ಹಾಜರಾತಿ ಜಾರಿ

Facebook
X
WhatsApp
Telegram

ಚಿಂತಾಮಣಿ.15.ಜೂನ್.26: 2026-27ನೇ ಸಾಲಿನಿಂದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲಾ-ಕಾಲೇಜುಗಳಲ್ಲಿ ನಿರಂತರ AI ಆಪ್ ಮೂಲಕ ಮುಖಚರ್ಯೆ ಹಾಜರಾತಿ ಜಾರಿ ಪಡೆಯಬೇಕೆಂದು ಇಲಾಖೆ ವತಿಯಿಂದ ಸೋಚಿಸಲಾಗಿದೆ

ರಾಜ್ಯದಲ್ಲಿ ಪ್ರಥಮ ಬಾರಿಗೆ ಚಿಂತಾಮಣಿ ತಾಲ್ಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಮತ್ತು ಪಿಯು ಕಾಲೇಜುಗಳಲ್ಲಿ AI ಎ.ಐ (ಕೃತಕ ಬುದ್ಧಿಮತ್ತೆ) ಸಹಾಯದ ಮುಖಚರ್ಯೆ (ಫೇಸ್ ರೆಕಗ್ನಿಶನ್) ಮೂಲಕ ಹಾಜರಾತಿ ಪಡೆಯುವ ವ್ಯವಸ್ಥೆಯನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಜಾರಿಗೊಳಿಸಲಾಗಿದೆ.

ರಾಜ್ಯದಲ್ಲಿ ಈಗ ಶಾಲಾ ಶಿಕ್ಷಣ ಹಾಗೂ ಪಿಯು ಶಿಕ್ಷಣ ಇಲಾಖೆ ಮನವಿ ಮೇರೆಗೆ ಸಿಇಜಿ (ಸೆಂಟರ್ ಫಾರ್ ಇ-ಗವರ್ನೆನ್ಸ್) ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ನಿರಂತರ ಆಯಪ್’ ಎಂಬ ಮೊಬೈಲ್ ಅಪ್ಲಿಕೇಶನ್ ಮೂಲಕ ಈ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದೆ..

ಪದ್ಧತಿ ವಿವರ: ಆರಂಭದಲ್ಲಿ ವಿದ್ಯಾರ್ಥಿಗಳ ಮುಖವನ್ನು ಎಡ, ಬಲ ಮತ್ತು ಮುಂದುಗಡೆಯಿಂದ ಮೂರು ವಿಧವಾಗಿ ಆಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನಿಗದಿತ ಸಮಯದಲ್ಲಿ ವಿದ್ಯಾರ್ಥಿಗಳು ಒಟ್ಟಿಗಿರುವಂತೆ ಫೋಟೊ ಕ್ಲಿಕ್ ಮಾಡಿದರೆ ಸಾಕು AI  ಎ.ಐ ತಂತ್ರಜ್ಞಾನ ಮುಖ ಗುರುತಿಸಿ ಹಾಜರಾತಿಯನ್ನು ಇಲಾಖೆಯ ಸರ್ವರ್‌ಗೆ ಕಳುಹಿಸುತ್ತದೆ.

ಪ್ರಯೋಜನ: ಮುಖಚರ್ಯೆ ಹಾಜರಾತಿ ಜಾರಿ ವಿದ್ಯಾರ್ಥಿಯ ನಂಬರ್ ಕರೆದು ಹಾಜರಾತಿ ತೆಗೆದುಕೊಳ್ಳುವ ಶಿಕ್ಷಕರ ಸಮಯ ಉಳಿತಾಯವಾಗುತ್ತದೆ. ಖಾಸಗಿ ಕೋಚಿಂಗ್‌ಗೆ ತೆರಳಿ ಕಾಲೇಜಿಗೆ ಗೈರುಹಾಜರಾಗುವುದು, ಶೇ75 ಹಾಜರಾತಿ ಕಡ್ಡಾಯವಿದ್ದರೂ ನಕಲಿ ಹಾಜರಾತಿ ನೀಡುವುದಕ್ಕೆ ತಡೆಯಾಗುತ್ತದೆ.

ತರಬೇತಿ ಮತ್ತು ಅನುಷ್ಠಾನ: ಸಿಇಜಿ ತಂಡದವರು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ನೀಡಿದ್ದಾರೆ. ಪ್ರತಿ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಮತ್ತು ಪ್ರತಿ ಪಿಯು ಕಾಲೇಜಿನಲ್ಲಿ ಇಬ್ಬರು ಉಪನ್ಯಾಸಕರು ಮಾಸ್ಟರ್ ಟ್ರೈನರ್‌ಗಳಾಗಿ ತರಬೇತಿ ಪಡೆದು ಇತರರಿಗೆ ತರಬೇತಿ ನೀಡುತ್ತಾರೆ.

ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆ ಅನುಷ್ಠಾನಗೊಂಡಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರವೇಶಾತಿ ಮುಗಿದ ಬಳಿಕ ಈ ತಿಂಗಳ ಅಂತ್ಯದೊಳಗೆ ಅಳವಡಿಸಲಾಗುವುದು ಎಂದು ಬಟ್ಲಹಳ್ಳಿ ಪಿಯು ಕಾಲೇಜಿನ ಪ್ರಾಂಶುಪಾಲ ಮುನಿರೆಡ್ಡಿ ತಿಳಿಸಿದ್ದಾರೆ. ಜೂನ್ ಅಂತ್ಯದೊಳಗೆ ಎಲ್ಲರೂ ಹೊಸ ಪದ್ಧತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಇಲಾಖೆ ಸೂಚಿಸಿದೆ.

ಮೂಲತಃ ಪ್ರಜಾ ಪ್ರಭಾತ24 ಸುಧಿ ವೆಬ್ ಪೋರ್ಟಲ್ ವತಿಯಿಂದ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology