Home » ಲೈವ್ ನ್ಯೂಸ್ » ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 15 ಸಾವಿರ ಶಿಕ್ಷಕರ ಹುದ್ದೆಗಳು ನೇಮಕಾತಿಗೆ ಆದೇಶ!

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 15 ಸಾವಿರ ಶಿಕ್ಷಕರ ಹುದ್ದೆಗಳು ನೇಮಕಾತಿಗೆ ಆದೇಶ!

Facebook
X
WhatsApp
Telegram

ಬೆಂಗಳೂರು.17.ಜುಲೈ.26:ರಾಜ್ಯಾದ ಯುವಕ ಯುವತಿಯರಿಗೆ ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ಸರ್ಕಾರ ಘೋಷಣೆ ಮಾಡಲಾಗಿದೆ.

2026-27ನೇ ಸಾಲಿನ ಆಯವ್ಯಯ ಘೋಷಣೆಯಂತೆ, ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ವೃಂದದ ಒಟ್ಟು 15,000 ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿಲಾಗಿದೆ.

ಜುಲೈ 14, 2026 ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ) ಬಿ.ಕೆ. ಮಮತಾ ರಾಣಿ ಅವರು ಈ ಮಹತ್ವದ ಆದೇಶವನ್ನು (ಆದೇಶ ಸಂಖ್ಯೆ: ಇಪಿ 53 ಡಿಪಿಇ 2026) ಹೊರಡಿಸಿದ್ದಾರೆ. ಆರ್ಥಿಕ ಇಲಾಖೆಯ ಸಹಮತಿಯ ಮೇರೆಗೆ ಈ ನೇಮಕಾತಿಗೆ ಹಸಿರು ನಿಶಾನೆ ಸಿಕ್ಕಿದೆ.

ಕಲ್ಯಾಣ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕೇತರ ಜಿಲ್ಲೆಗಳ ಹುದ್ದೆಗಳ ವರ್ಗೀಕರಣದ ಸಂಪೂರ್ಣ ವಿವರ ಈ ಕೆಳಗಿನಂತಿದೆ:

1. ಕಲ್ಯಾಣ ಕರ್ನಾಟಕ ಪ್ರದೇಶ (Kalyana Karnataka) – ಒಟ್ಟು 6,967 ಹುದ್ದೆಗಳು
ಪದವೀಧರ ಪ್ರಾಥಮಿಕ ಶಿಕ್ಷಕರು (GPT): 3,228

ಸಹ ಶಿಕ್ಷಕರು (Assistant Master – AM): 2,214

ಪ್ರಾಥಮಿಕ ಶಾಲಾ ಶಿಕ್ಷಕರು (PST): 800

ದೈಹಿಕ ಶಿಕ್ಷಣ ಶಿಕ್ಷಕರು (PET): 425

ಗಣಕವಿಜ್ಞಾನ ಶಿಕ್ಷಕರು (Computer Science Teacher): 300

2. ಕಲ್ಯಾಣ ಕರ್ನಾಟಕೇತರ ಪ್ರದೇಶ (Non-Kalyana Karnataka) – ಒಟ್ಟು 8,033 ಹುದ್ದೆಗಳು
ಪದವೀಧರ ಪ್ರಾಥಮಿಕ ಶಿಕ್ಷಕರು (GPT): 5,272

ಸಹ ಶಿಕ್ಷಕರು (Assistant Master – AM): 2,286

ಪ್ರಾಥಮಿಕ ಶಾಲಾ ಶಿಕ್ಷಕರು (PST): 100

ದೈಹಿಕ ಶಿಕ್ಷಣ ಶಿಕ್ಷಕರು (PET): 175

ಗಣಕವಿಜ್ಞಾನ ಶಿಕ್ಷಕರು (Computer Science Teacher): 200

ಹುದ್ದೆಗಳ ಒಟ್ಟು ಮೊತ್ತ:
ರಾಜ್ಯಾದ್ಯಂತ ಒಟ್ಟು 15,000 ಶಿಕ್ಷಕರ ನೇಮಕಾತಿ ನಡೆಯಲಿದ್ದು, ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಂಹಪಾಲು (6,967 ಹುದ್ದೆಗಳು) ಸಿಕ್ಕಿದೆ. ಶಾಲಾ-ಕಾಲೇಜುಗಳಲ್ಲಿನ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಈ ಖಾಲಿ ಹುದ್ದೆಗಳನ್ನು ಶೀಘ್ರದಲ್ಲೇ ನೇರ ನೇಮಕಾತಿ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇಲಾಖೆಯು ಶೀಘ್ರದಲ್ಲೇ ಇದಕ್ಕೆ ಸಂಬಂಧಿಸಿದ ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಕೆಯ ದಿನಾಂಕಗಳನ್ನು ಪ್ರಕಟಿಸಲಿದೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology