|

ರೈತರ ಆತ್ಮ ಸ್ಥೈರ್ಯಕ್ಕೆ ನಾವೆಲ್ಲ ತಲೆಬಾಗಲೆ ಬೇಕು. ರೈತರ ಈ ನಾಡಿನ ನಿಜವಾದ ಯೋಗಿಗಳು.

ಬೀದರ.01.ಸೆಪ್ಟೆಂಬರ್.25:- ರೈತರ ಆತ್ಮ ಸ್ಥೈರ್ಯಕ್ಕೆ ನಾವೆಲ್ಲ ತಲೆಬಾಗಲೆ ಬೇಕು. ರೈತರ ಈ ನಾಡಿನ ನಿಜವಾದ ಯೋಗಿಗಳು. ಅನೇಕ ವಿಪರೀತ ಪರಿಸ್ಥಿತಿಗಳಿದ್ದರು ಕೂಡ ಅವರ ಧೈರ್ಯ ಎಂದಿಗೂ ಕುಗ್ಗಲ್ಲ.

ಇಂದು ಸಂಪೂರ್ಣವಾಗಿ ಬೀದರ ಜಿಲ್ಲೆ ಜಲಾವೃತವಾಗಿದೆ. ರೈತರ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಮೊದಲಿಗೆ ಮುಂಗಾರು ವಿಳಂಬವಾಗಿ ನಮ್ಮ ರೈತರು ಬೆಳೆದಂತೆ ಬೆಳೆ ಸುಟ್ಟುಹೋಗಿದ್ದವು , ಈಗ ಉಳಿದಿರುವ ಬೆಳೆಗೆ ಅತಿವೃಷ್ಷಿಯ ಪ್ರಭಾವದಿಂದ ಸಂಪೂರ್ಣವಾಗಿ ಗದ್ದೆಗಳು, ಹೊಲಗಳು ಜಲಾವೃತವಾಗಿದೆ.

ಹೀಗಾಗಿ ಪರಿಸ್ಥಿತಿಯನ್ನು ಮನಗಂಡು ನಮ್ಮ ಬೀದರ ಜಿಲ್ಲೆಯ ಹೆಮ್ಮೆಯ ಸಂಸದರು, ರಾಜ್ಯದ ಮಾದರಿ ಸಂಸದರಾದ ಸಾಗರ ಖಂಡ್ರೆಯವರು ರೈತರಿಗೆ ಬೆನ್ನೆಲುಬಾಗಿ ಜಿಲ್ಲಾದ್ಯಂತ ಸಂಚರಿಸಿ ರೈತಪರ ಕಾಳಜಿಯುಳ್ಳವರಾಗಿ, ಅಧಿಕಾರಿಗಳಿಗೆ ಗ್ರಾಮದಲ್ಲಿ ಬೀಡು ಬಿಟ್ಟು ನಿಖರವಾದ ಮಾಹಿತಿ ಸಲ್ಲಿಸಲು ನಿರ್ದೇಶಿಸಿದ್ದಾರೆ.

ಮಾನ್ಯ ಸಂಸದರು ಬೀದರ ದಕ್ಷಿಣ ಕ್ಷೇತ್ರದ ಸಿಂಧೋಲ್, ರಾಜಗೀರಾ, ಯಾಕತಪುರಾ, ಭಾಲ್ಕಿ ತಾಲುಕಿನ ಭಾಟಸಾಂಗವಿ, ಕಾಸರತುಂಗಾವ್, ಶಿವಣಿ, ಲಖಣಗಾಂವ್, ಸೋಮಪುರ, ತಳವಾಡ್ (m), ತೆಲಗಾಂವ್, ಮೇಥಿ, ಮೆಳಗುಂದಾ, ವಾಡಿ ಗ್ರಾಮಗಳಿಗೆ ಭೇಟಿ ನೀಡಿ ಅತಿವೃಷ್ಷಿಯಿಂದಾದ ಹಾನಿಗೊಳಗಾದ ಮನೆ ಕುಸಿತ, ಬೆಳೆ ಹಾನಿಗೊಳಗಾದ ಪೀಡಿತರಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದ್ದಾರೆ.
ಇನ್ನಿತ್ತರ ಸ್ಥಳಿಯ ಸಮಸ್ಯೆಗಳನ್ನು ಆಲಿಸಿ, ಶ್ರೀ ಸಾಗರ ಖಂಡ್ರೆಯವರು , ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ.

Similar Posts

Leave a Reply

Your email address will not be published. Required fields are marked *