Home » ಲೈವ್ ನ್ಯೂಸ್ » ಯುಜಿಸಿ ಮತ್ತು ನಾನ್ ಯುಜಿಸಿ ಎಂಬ ಕಾರಣಕ್ಕೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸುವುದು ಅಧ್ಯಕ್ಷ ವಿಶ್ವನಾಥ ಪಾಟೀಲ್

ಯುಜಿಸಿ ಮತ್ತು ನಾನ್ ಯುಜಿಸಿ ಎಂಬ ಕಾರಣಕ್ಕೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸುವುದು ಅಧ್ಯಕ್ಷ ವಿಶ್ವನಾಥ ಪಾಟೀಲ್

Facebook
X
WhatsApp
Telegram

ಸಿಂಧನೂರು.08.ಜು.25:- ಯುಜಿಸಿ ಮತ್ತು ನಾನ್ ಯುಜಿಸಿ ಎಂಬ ಗೊಂದ ಸೃಷ್ಟಿಸದೆ ಎಲ್ಲ ಅತಿಥಿ ಉಪನ್ಯಾಸಕರನ್ನು ಆಯ್ಕೆಗೆ ಪರಿಗಣಿ ಸಲು ಜುಲೈ 10 ರವರೆಗೆ ರಾಜ್ಯ ಸರ್ಕಾರಕ್ಕೆ ಗಡುವು ನೀಡಲಾಗಿದೆ. ನಿರ್ಲಕ್ಷ್ಯ ವಹಿಸಿದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಅತಿಥಿ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಪಾಟೀಲ್ ಗೋನಾಳ, ಉಪಾಧ್ಯಕ್ಷ ಡಾ.ಮದಗಪ್ಪ ಭಂಡಾರಿ, ಪ್ರಧಾನ ಕಾರ್ಯದರ್ಶಿ ರಾಮಣ್ಣ ಹಿರೇಬೇರಿಗಿ, ಖಜಾಂಚಿ ನರಸಪ್ಪ ಬೆಳಗುರ್ಕಿ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಹೇಳಿಕೆ ನೀಡಿರುವ ಅವರು, ಕಾಲೇಜು ಶಿಕ್ಷಣ ಇಲಾಖೆಯು ಜೂನ್ 25, 2025 ರಂದು 2025-26ನೇ ಸಾಲಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಅಧಿ ಸೂಚನೆ ಹೊರಡಿಸಿದೆ. ಇದರಲ್ಲಿ ಕೇವಲ ಯುಜಿಸಿ ಅರ್ಹತೆ ಹೊಂದಿರುವ ಅಂದರೆ ನೆಟ್, ಪ್ಲೆಟ್, ಪಿಎಚ್‌ಡಿ ಹೊಂದಿರುವವರನ್ನು ಮಾತ್ರ ಪರಿಗಣಿ

ಸುವಂತೆ ಸೂಚಿಸಲಾಗಿದೆ. ಸುಮಾರು 15-20 ವರ್ಷಗಳಿಂದ ಇದೇ ವೃತ್ತಿ ಯನ್ನು ನಂಬಿ ಅತ್ಯಂತ ಕನಿಷ್ಠ ವೇತನಕ್ಕೆ ದುಡಿಯುತ್ತಾ ಬಂದಿರುವ 11 ಸಾವಿರ ಕ್ಕೂ ಹೆಚ್ಚು ಉಪನ್ಯಾಸಕರ ಪೈಕಿ 5500 ಕ್ಕೂ ಹೆಚ್ಚು ಉಪನ್ಯಾಸಕರು ಯುಜಿಸಿ ಅರ್ಹತೆ ಹೊಂದಿಲ್ಲ ಎನ್ನುವ ಕಾರಣಕ್ಕೆ ಅವರನ್ನು ಇಷ್ಟು ವರ್ಷ ಕಡಿಮೆ ವೇತ ನಕ್ಕೆ ದುಡಿಸಿಕೊಂಡು ಶೋಷಣೆ ಮಾಡಿ ಕೈ ಬಿಡುತ್ತಿರುವುದು ನಿಜಕ್ಕೂ ದುರಂತದ ಸಂಗತಿ ಎಂದು ದೂರಿದ್ದಾರೆ.

ಈ ವೃತ್ತಿಯನ್ನು ನಂಬಿ ಬದು ಕುತ್ತಿರುವ ಉಪನ್ಯಾಸಕರನ್ನು ಮತ್ತು ಅವರ ಕುಟುಂಬವನ್ನು ಸ್ವತಃ ಸರ್ಕಾ ರವೇ ಬೀದಿಪಾಲು ಮಾಡಲು ಹೊರ ಟಿದೆ. ಉದ್ಯೋಗ ನೀಡುವ ಸರ್ಕಾರವೇ ಉದ್ಯೋಗ ಕಸಿಯುತ್ತಿದೆ. ಕಾರಣ ಸರ್ಕಾರವು ಕೂಡಲೇ ಈ ಅಧಿಸೂಚನೆ ಯನ್ನು ಹಿಂಪಡೆದು ಯುಜಿಸಿ ಮತ್ತು ನಾನ್ ಯುಜಿಸಿ ಎಂಬ ಗೊಂದಲ ಸೃಷ್ಟಿಸದೆ ಎಲ್ಲ ಅತಿಥಿ ಉಪನ್ಯಾಸಕರನ್ನು ಆಯ್ಕೆಗೆ ಪರಿಗಣಿಸಬೇಕು. ಜು.10 ಸರ್ಕಾರಕ್ಕೆ ಕೊನೆಯ ಗಡುವು ಆಗಿದೆ ಎಂದು ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology