ರಾಯಚೂರು.11.ಜುಲೈ26: ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಾಲನ್ಯಾಯ ಕಾಯ್ದೆ-2015ರ ಸೆಕ್ಷನ್ (44)ರನ್ವಯ ಪೋಷಕತ್ವ ಯೋಜನೆಯಲ್ಲಿ ಗುರುತಿಸಲ್ಪಟ್ಟ ಮಕ್ಕಳು ಕುಟುಂಬದ ವಾತವರಣದಲ್ಲಿ ಬೆಳೆಯಲು ತಾತ್ಕಾಲಿಕವಾಗಿ ಅಥವಾ ವಿಸ್ತರಿಸಲ್ಪಟ್ಟ ಅವಧಿಗೆ ಮಕ್ಕಳನ್ನು ಪೋಷಕತ್ವ ಯೋಜನೆಯಡಿಯಲ್ಲಿ ಫಾಸ್ಟರ್ ಕೇರ್‌ಗೆ ಅರ್ಜಿ ಆಹ್ವಾನಿಸಲಾಗಿದೆ.
ಮಕ್ಕಳ ರಕ್ಷಣಾ ಘಟಕ ರಾಯಚೂರು ವತಿಯಿಂದ 0-18 ವರ್ಷದೊಳಗಿನ ಮಕ್ಕಳ ಪೋಷಣೆ ಮತ್ತು ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತದೆ. ಫಾಸ್ಟರ್ ಕೇರ್ (ಪೋಷಕತ್ವ) ಎಂದರೆ ಮಕ್ಕಳ ಕಲ್ಯಾಣ ಸಮಿತಿಯು ಮಗುವಿನ ರಕ್ಷಣೆಯನ್ನು ಜೈವಿಕ ಕುಟುಂಬವನ್ನು ಹೊರತುಪಡಿಸಿ, ಮತ್ತೊಂದು ಕೌಟುಂಬಿಕ ವಾತಾವರಣ ಹೊಂದಿರುವ ಪರ್ಯಾಯ ವ್ಯವಸ್ಥೆಯಲ್ಲಿ ಇರಿಸುವುದನ್ನು ಪೋಷಕತ್ವ ಎನ್ನಬಹುದು. ಈ ಪರ್ಯಾಯ ವ್ಯವಸ್ಥೆಯ ಮಕ್ಕಳ ಕಲ್ಯಾಣ ಸಮಿತಿಯಿಂದ ಆಯ್ಕೆ ಮಾಡಿ, ಅರ್ಹತೆ ಹೊಂದಿರುವ, ಅಂಗೀಕಾರ ಪಡೆದಿರುವ ಹಾಗೂ ಮಕ್ಕಳ ರಕ್ಷಣೆಯನ್ನು ಮೇಲ್ವಿಚಾರಣೆಗೆ ಒಳಪಡುವ ವ್ಯವಸ್ಥೆಯಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಮಕ್ಕಳಿಲ್ಲದ ದಂಪತಿಗಳು, ಏಕ ಪೋಷಕ ಕುಟುಂಬಸ್ಥರು, ಮಕ್ಕಳಿಗೆ ಪೋಷಣೆ ಮತ್ತು ರಕ್ಷಣೆ ನೀಡಲು ಆಸಕ್ತಿ ಇರುವವರು ಈ ಕಚೇರಿಯ ವಿಳಾಸ: ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮನೆ ಸಂಖ್ಯೆ: 1-9-138, ಪಶ್ಚಿಮ ಪೊಲೀಸ್ ಠಾಣೆ ಹಿಂದೆ, ಮಾರಮ್ಮಗುಡಿ ಎದುರುಗಡೆ, ಗೋಲ್ ಮಾರ್ಕೆಟ್, ಆಜಾದ್ ನಗರ, ರಾಯಚೂರು-584101ಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಥವಾ ದೂರವಾಣಿ ಸಂಖ್ಯೆ-08532-226226, 8618362385, 9731603295, 8660627793ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





Any questions related to ಫಾಸ್ಟರ್ ಕೇರ್‌ಗೆ ಅರ್ಜಿ ಆಹ್ವಾನ?