Home » ಕೊಪ್ಪಳ » ತಾವರಗೇರಾ ಪಟ್ಟಣ ಪಂಚಾಯತಿ: ಆಕ್ಷೇಪಣೆ ಆಹ್ವಾನ

ತಾವರಗೇರಾ ಪಟ್ಟಣ ಪಂಚಾಯತಿ: ಆಕ್ಷೇಪಣೆ ಆಹ್ವಾನ

ಕೊಪ್ಪಳ.23.ಸೆಪ್ಟೆಂಬರ್.26: ತಾವರಗೇರಾ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಾರ್ಡ್ ನಂ.14 ರ ವಿರುಪಣ್ಣ ಲೇಔಟ್ ನಲ್ಲಿನ ಸರ್ವೇ ನಂ.207/2/3 ರ ಜಾಗೆಯನ್ನು ನೇಕಾರರ ಟ್ರಸ್ಟಿನ ಕೆಲಸ ಕಾರ್ಯಕ್ರಮಗಳ ನಿರ್ವಹಣೆಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಬಡಾವಣೆಗಳ ನಾಗರಿಕ ಸೌಲಭ್ಯಕ್ಕಾಗಿ ಕಾಯ್ದಿರಿಸಿದ ನಿವೇಶನಗಳನ್ನು ಒದಗಿಸಲು ಮನವಿ ಬಂದಿದ್ದು, ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

ತಾವರಗೇರಾ ಪಟ್ಟಣ ವ್ಯಾಪ್ತಿಯ ಅಧ್ಯಕ್ಷರು, ತಿಪ್ಪಣ್ಣ ಶ್ರೀ ಶಿವಸಮಸಾಲಿ ನೇಕಾರ ಸೇವಾ ಟ್ರಸ್ಟ್(ರಿ) ತಾವರಗೇರಾ ಅವರು ತಮ್ಮ ಟ್ರಸ್ಟಿನ ಎಲ್ಲ ಸದಸ್ಯರೊಂದಿಗೆ ಮೇ 18, 2026 ರಂದು ತಾವರಗೇರಾ ಪಟ್ಟಣದ ವಿರುಪಣ್ಣ ಲೇಔಟ್ ನಲ್ಲಿನ ಸರ್ವೇ ನಂ.207/2/3 ರ ಜಾಗೆಯನ್ನು ನೇಕಾರರ ಟ್ರಸ್ಟಿನ ಕೆಲಸ ಕಾಯ್ಗಳಿಗೆ ಉಪಯೋಗವಾಗುವಂತೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು, ಬಡಾವಣೆಗಳ ನಾಗರಿಕ ಸೌಲಭ್ಯಕ್ಕಾಗಿ ಕಾಯ್ದಿರಿಸಿದ ನಿವೇಶನಗಳನ್ನು ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ.

ಆದ್ದರಿಂದ ಈ ಕುರಿತು ಸಾರ್ವಜನಿಕರಿಗೆ ಏನಾದರೂ ಆಕ್ಷೇಪಣೆ, ತಕಾರರುಗಳಿದ್ದಲ್ಲಿ, ಅಕ್ಟೋಬರ್ 7 ರೊಳಗೆ ನಿವೇಶನಕ್ಕೆ ಸಂಬAಧಿಸಿದ ಮೂಲ ದಾಖಲೆಗಳೊಂದಿಗೆ ಲಿಖಿತವಾಗಿ ಆಕ್ಷೇಪಣೆಗಳನ್ನು ಕಚೇರಿ ವೇಳೆಯಲ್ಲಿ  ಕಾರ್ಯಾಲಯಕ್ಕೆ ಸಲ್ಲಿಸಬಹುದು ಎಂದು ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಹಾಗೂ ಅಧ್ಯಕ್ಷರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology