Home » ಲೈವ್ ನ್ಯೂಸ್ » ಜಾತಿ ಪ್ರಮಾಣ ಪತ್ರಗಳನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಖಾಯಂ ನಿವಾಸಿ ಪತ್ರವನ್ನೂ ಜನರಿಗೆ ತಲುಪಿಸಬೇಕು. ಸಿಎಂ ಡಿಕೆಶಿ

ಜಾತಿ ಪ್ರಮಾಣ ಪತ್ರಗಳನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಖಾಯಂ ನಿವಾಸಿ ಪತ್ರವನ್ನೂ ಜನರಿಗೆ ತಲುಪಿಸಬೇಕು. ಸಿಎಂ ಡಿಕೆಶಿ

Facebook
X
WhatsApp
Telegram

ಬೆಂಗಳೂರು.26.ಜುಲೈ.26: ಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಿಎಂ ಡಿ.ಕೆ. ಶಿವಕುಮಾರ್, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ನೀಡಿದ ಪ್ರಮುಖ ಸೂಚನೆಗಳು:

ರಾಜ್ಯದಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುವ ನೇಮಕಾತಿ ಪರ್ವ ನಡೆಯುತ್ತಿದೆ.

ನೀಟ್ ಹಗರಣವನ್ನು ಗಮನದಲ್ಲಿಟ್ಟುಕೊಂಡು ನೇಮಕಾತಿ ಪರೀಕ್ಷೆ ನಡೆಯುವ ಕಡೆ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಪ್ರಶ್ನೆ ಪತ್ರಿಕೆಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಹಾಗೂ ಪರೀಕ್ಷೆಯ ತಯಾರಿಕೆ, ಹಂಚಿಕೆಯ ಪ್ರತಿಯೊಂದು ಹಂತವೂ ದಾಖಲಾಗಬೇಕು ಎಂದು ಸೂಚಿಸಿದ್ದಾರೆ..

* ಹೊಸ ಬೋರ್‌ವೆಲ್ ಆಳದ ಬಗ್ಗೆಯೂ ದಾಖಲಿಸಬೇಕು; 150 ಅಡಿ ಕೊರೆದು 500-600 ಅಡಿ ಕೊರೆಯಲಾಗಿದೆ ಎಂದು ತೋರಿಸಿಕೊಳ್ಳುವ ಅಕ್ರಮಕ್ಕೆ ಆಸ್ಪದ ನೀಡಬಾರದು.

* ಹೊಸದಾಗಿ ಬೋರ್‌ವೆಲ್ ಕೊರೆದರೆ, ದುರಸ್ತಿಗೊಳಿಸಿದರೆ ಹಾಗೂ ವಿದ್ಯುತ್ ಸಂಪರ್ಕ ಸೇರಿದಂತೆ ಪ್ರತಿ ತೀರ್ಮಾನದ ಮಾಹಿತಿಯೂ ಪಾರದರ್ಶಕವಾಗಿರಬೇಕು.

* ಎಲ್ ನೀನೋ ಪ್ರಭಾವದಿಂದ ರಾಜ್ಯದ ಬಹುತೇಕ ಎಲ್ಲಾ ಅಣೆಕಟ್ಟುಗಳಲ್ಲಿ ನೀರಿನ ಶೇಖರಣೆ ಕಡಿಮೆಯಾಗಿದ್ದು, ಈ ಬಾರಿಯ ಬರ ಪರಿಸ್ಥಿತಿಯನ್ನು ‘ಟೀಮ್ ಕರ್ನಾಟಕ’ವಾಗಿ ಎದುರಿಸಬೇಕು. .

* ಮುಂದಿನ ವಾರ ಸಚಿವ ಸಂಪುಟ ವಿಸ್ತರಣೆ ಆಗಬಹುದು; ಆಗ ಎಲ್ಲಾ ಮಂತ್ರಿಗಳು ಒಟ್ಟಾಗಿ ರಾಜ್ಯದ ಬರ ಪರಿಸ್ಥಿತಿ ಅವಲೋಕಿಸಿ ರೈತರಿಗೆ ತೊಂದರೆ ಆಗದಂತೆ ಕೆಲಸ ಮಾಡಬೇಕು.

* ಜಿಲ್ಲಾಡಳಿತವು ಗ್ರಾಮೀಣ ಭಾಗದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರು ಪೂರೈಕೆಗೆ ₹1 ಕೋಟಿವರೆಗೆ ಖರ್ಚು ಮಾಡಬಹುದು ಎಂದು ಬೆಳಗಾವಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು.

* ರೈತರು ಯಾವುದೇ ಕಾರಣಕ್ಕೂ ಮುಂಬರುವ ಮಳೆ ಅಥವಾ ಅಣೆಕಟ್ಟು ನೀರನ್ನು ನೆಚ್ಚಿಕೊಂಡು ಸ್ವಯಂ ನಿರ್ಧಾರದಿಂದ ಬೆಳೆ ಹಾಕಬಾರದು. ನೀರಾವರಿ ಸಮಿತಿ, ಅಧಿಕಾರಿಗಳು ಹಾಗೂ ಸರ್ಕಾರದ ಮಾರ್ಗದರ್ಶನದ ಆಧಾರದ ಮೇಲೆಯೇ ರೈತರು ಬೆಳೆ ಹಾಕಬೇಕು ಎಂದು ಮನವಿ ಮಾಡಲಾಗಿದೆ.

* 1 ಕೋಟಿ ಕುಟುಂಬಗಳಿಗೆ 1 ವರ್ಷದಲ್ಲಿ ಇ-ಖಾತಾ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.

* ಪ್ರತಿಯೊಬ್ಬರೂ ಸ್ವಂತ ಸೂರು ಹೊಂದಲು ಪ್ರತಿ ತಾಲೂಕಿನಲ್ಲಿ ವಸತಿ ರಹಿತರಿಗೆ ನಿವೇಶನ ನೀಡಲು ಜಿಲ್ಲಾಧಿಕಾರಿಗಳು ‘ಭೂ ಬ್ಯಾಂಕ್’ ರಚಿಸಬೇಕು.

* ವಿಬಿಜಿ ರಾಮ್ ಜೀ ಕಾಮಗಾರಿಗಳನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕು.

* ಬರ ಪರಿಸ್ಥಿತಿ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರದ ಬಳಿಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗುವ ಬಗ್ಗೆ ಆಲೋಚಿಸಲಾಗುತ್ತಿದ್ದು, ದೆಹಲಿಯಲ್ಲಿ ಸಂಸದರ ಸಭೆ ನಡೆಸಲಾಗುವುದು.

* ಪ್ರಸ್ತುತ ಪರಿಸ್ಥಿತಿಯಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲು ಸಾಧ್ಯವಿಲ್ಲ ಎಂದು ಕಾವೇರಿ ಸಮಿತಿಯ ಮುಂದೆ ಸ್ಪಷ್ಟಪಡಿಸಲಾಗಿದೆ.

* ಪ್ರಧಾನಿ ನರೇಂದ್ರ ಮೋದಿ ಅವರಿಗೂ ರಾಜ್ಯದ ಬರ ಪರಿಸ್ಥಿತಿ ಹಾಗೂ ಎಲ್ ನೀನೋ ಪರಿಣಾಮದ ಬಗ್ಗೆ ಮಾಹಿತಿ ನೀಡಲಾಗಿದೆ.

* ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌ಗಳನ್ನು ಸರಿಯಾಗಿ ಹಂಚಿಕೆ ಮಾಡಲಾಗುತ್ತಿದೆಯೇ ಎಂದು ಶಾಸಕರು ಮತ್ತು ಜನಪ್ರತಿನಿಧಿಗಳು ಶಾಲೆಗಳಿಗೆ ತೆರಳಿ ಪರಿಶೀಲಿಸಬೇಕು.

* ಜನರ ಸಮಸ್ಯೆಗಳನ್ನು ಪರಿಹರಿಸಲು ಎಐ ಆಧಾರಿತ ಏಕೀಕೃತ ಸಮಗ್ರ ದೂರು ಪರಿಹಾರ ವ್ಯವಸ್ಥೆಯನ್ನು ಬಳಸಬೇಕು.

* ಸಿಎಸ್‌ಆರ್ ಅನುದಾನವನ್ನು ಬಳಸಿ ಗ್ರಾಮೀಣ ಭಾಗದ ಶಾಲೆಗಳನ್ನು ಮಾದರಿ ಶಾಲೆಗಳಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ.

* ಗೃಹಲಕ್ಷ್ಮಿ ಹಣ ಒಂದಷ್ಟು ನಕಲಿ ಖಾತೆಗಳಿಗೆ ಹೋಗಿರುವುದು ಕಂಡುಬಂದಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ.

* ಎಸ್‌ಐಆರ್ ನಡೆಯುತ್ತಿರುವುದರಿಂದ ಜನರು ದಾಖಲೆಗಳಿಗೆ ಪರದಾಡಬಾರದು. ಜಾತಿ ಪ್ರಮಾಣ ಪತ್ರಗಳನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಖಾಯಂ ನಿವಾಸಿ ಪತ್ರವನ್ನೂ ಜನರಿಗೆ ತಲುಪಿಸಬೇಕು.

* ಪ್ರತಿ ಕ್ಷೇತ್ರದ ಬಿತ್ತನೆ ಬೀಜ ಮತ್ತು ಗೊಬ್ಬರದ ದಾಸ್ತಾನಿನ ಮಾಹಿತಿ ಶಾಸಕರಿಗೆ ಇರಲೇಬೇಕು.

* ನಗರ ಪ್ರದೇಶಗಳಲ್ಲಿ ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲಿ ವಿಶೇಷ ಗಮನಹರಿಸಬೇಕು; ಇದಕ್ಕಾಗಿ ಜಿಲ್ಲಾಧಿಕಾರಿಗಳ ಬಳಿ ಹಣವಿದ್ದು, ಅಗತ್ಯವಿದ್ದರೆ ಇನ್ನಷ್ಟು ಹಣ ನೀಡಲಾಗುವುದು.

* ಅಧಿಕಾರಿಗಳು ಸಾರ್ವಜನಿಕರು ಬಂದಾಗ ಗೌರವದಿಂದ ಕಂಡು, ಕೆಲಸಗಳನ್ನು ತಳ್ಳಿಹಾಕದೆ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು. ಜನರ ಮನೆಬಾಗಿಲಿಗೆ ಸರ್ಕಾರವು ತಲುಪಬೇಕು.

* ಅಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳನ್ನಷ್ಟೇ ಅವಲಂಬಿತರಾಗದೇ, ಖುದ್ದಾಗಿ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಬೇಕು.

* ಅಧಿಕಾರಿಗಳ ಸಭೆ ಹಾಗೂ ಜನಜಾಗೃತಿಯ ಸುದ್ದಿಗಳು ಸ್ಥಳೀಯ ಪತ್ರಿಕೆ ಮತ್ತು ಚಾನೆಲ್‌ಗಳಲ್ಲಿ ವರದಿಯಾಗಬೇಕು (ಅಧಿಕಾರಿಗಳ ವಾಹನಗಳಿಗೆ ಜಿಪಿಎಸ್ ಹಾಕುವ ಪರಿಸ್ಥಿತಿ ತರಬಾರದು).

* ವಿಬಿ ಜಿ ರಾಮ್‌ ಜಿ ಯೋಜನೆಗೆ ರಾಜ್ಯ ಸರ್ಕಾರ 40% ಹಾಗೂ ಕೇಂದ್ರ ಸರ್ಕಾರ 60% ಹಣ ಹಾಕಿ ಜಾರಿಗೊಳಿಸುತ್ತಿದ್ದು, ಇದರ ರೂಪುರೇಷೆ ಸಿದ್ಧವಾಗುತ್ತಿದೆ.

* ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಕೊರತೆಯಾಗಬಾರದು ಮತ್ತು ಆರ್‌ಒ ಪ್ಲಾಂಟ್‌ಗಳ ದುರಸ್ತಿಗೆ ಗಮನಹರಿಸಬೇಕು.

* ಸರ್ಕಾರ ಮತ್ತು ಆಡಳಿತಕ್ಕೆ ಹೊಸ ರೂಪ ನೀಡಲು ‘ಪ್ರಜಾಸೇವಾ ಇಲಾಖೆ’ಯನ್ನು ಪ್ರಾರಂಭಿಸಲಾಗಿದೆ.

* ಮೊದಲನೇ ಮತ್ತು ಮೂರನೇ ಶನಿವಾರ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳ ನೇತೃತ್ವದಲ್ಲಿ ‘ಪ್ರಜಾಸೇವಾ ಇಲಾಖೆ’ ಮೂಲಕ ಜನರ ಅಹವಾಲು ಆಲಿಸಿ ಬಗೆಹರಿಸಲಾಗುವುದು.

* ಪ್ರಜಾಸೇವಾ ಸಭೆಗಳನ್ನು ಮುಂದೆ ಹೋಬಳಿ ಮಟ್ಟದಲ್ಲೂ ನಡೆಸಲಾಗುವುದು ಮತ್ತು ಸಚಿವರು ಎಲ್ಲಾ ಕ್ಷೇತ್ರಗಳಿಗೂ ಪ್ರವಾಸ ಮಾಡಿ ಎಲ್ಲಾ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology