ರಾಯಚೂರು.18.ಸೆಪ್ಟಂಬರ್.26: ರಾಯಚೂರಿನ ಯಾಪಲದಿನ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಚಂದ್ರಬoಡ ಗ್ರಾಮದ ಅಶ್ವಿನಿ ತಂದೆ ಮಲ್ಲೇಶ (19) ಎಂಬ ಯುವತಿ 2026ರ ಸೆಪ್ಟಂಬರ್ 01ರ ಬೆಳಿಗ್ಗೆ 3ಗಂಟೆ ಸುಮಾರಿಗೆ ಮನೆಯಿಂದ ಕಾಣೆಯಾಗಿದ್ದು, ಈ ಕುರಿತು ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂ 67/2026 ಕಲಂ ಮಹಿಳೆ ಕಾಣೆ ಪ್ರಕರಣ ದಾಖಲಾಗಿದೆ.
ಕಾಣೆಯಾದ ಯುವತಿಯ ತಾಯಿ ತಾಯಮ್ಮ ಗಂಡ ಮಲ್ಲೇಶ ಅವರು ಎಂದಿನoತೆ ದಿನಾಂಕ 31.08.2026 ರಂದು ರಾತ್ರಿ 8.30 ಸುಮಾರಿಗೆ ಚಂದ್ರಬoಡಾ ಗ್ರಾಮದ ತಮ್ಮ ಮನೆಯಲ್ಲಿ ಊಟ ಮಾಡಿದ ನಂತರ, ಮನೆoಯಲ್ಲಿ ಮಲಗಿಕೊಂಡಿದ್ದು, ದಿನಾಂಕ-01.09.2026 ರಂದು ಬೆಳಗಿನ ಜಾವ 03.00 ಗಂಟೆ ಸುಮಾರಿಗೆ ಮೂತ್ರ ವಿರ್ಸಜನೆ ಮಾಡಲು ಎದ್ದು ತಮ್ಮ ಮಗಳನ್ನು ನೋಡಿದಾಗ ಅಶ್ವಿನಿ ಕಾಣದೆ ಇದ್ದಾದ ತಮ್ಮ ಮಗನನ್ನು ಎಬ್ಬಿಸಿಕೊಂಡು ಮನೆಯ ಹೊರಗಡೆ ಬಂದು ಮನೆಯ ಸುತ್ತಾಮುತ್ತಾ ಎಲ್ಲಾಕಡೆ ನೋಡಲಾಗಿದೆ.
ಎಲ್ಲಿಯೂ ಸಿಕ್ಕಿರುವುದಿಲ್ಲ. ಅದೇ ದಿನದಂದು ಚಂದ್ರಬoಡ ಗ್ರಾಮದ ವೀರೇಶ ತಂದೆ ಈರಪ್ಪ ಜಾ-ಕುರುಬರು ಊರಲ್ಲಿ ಕಾಣುತ್ತಿರುವುದಿಲ್ಲ್ಲಾ ಅಂತಾ ಗೊತ್ತಾಗಿದ್ದು, ಆಗಾಗಿ ವೀರೇಶ ತಂದೆ ಈರಪ್ಪನು ಅಶ್ವಿನಿಯನ್ನು ಕರೆದುಕೊಂಡು ಹೋಗಿರಬಹುದೆಂದು ಅನುಮಾನ ಇರುತ್ತದೆ.
ಕಾರಣ ಕಾಣೆಯಾದ ಮಹಿಳೆ ಚಹರೆ ಪಟ್ಟಿ: ವಯಸ್ಸು 19 ವರ್ಷ, ಕೆಂಪು ಮೈಬಣ್ಣ, ದುಂಡನೆಯ ಮುಖ, ಕಪ್ಪು ಕೂದಲು, ಕಪ್ಪು ಬಣ್ಣದ ಪ್ಯಾಂಟ್, ತಿಳಿನೀಲಿ ಬಣ್ಣದ ಟಾಪ್ ಧರಿಸಿದ್ದು, ಕನ್ನಡ, ತೆಲುಗು ಭಾಷೆ ಮಾತನಾಡುತ್ತಾಳೆ.
ಈ ಚಹರೆಯುಳ್ಳ ಯುವತಿ ಪತ್ತೆಯಾದಲ್ಲಿ ಪಿಎಸ್ಐ ಯಾಪಲದಿನ್ನಿ ಠಾಣೆ 9480803851, ಸಿ.ಪಿ.ಐ ಗ್ರಾಮೀಣ ವೃತ್ತ 9480803832, ಕಂಟ್ರೋಲ ರೂಂ ರಾಯಚೂರು 94808083800, 08532-235635, ಗ್ರಾಮಿಣ ವೃತ್ತ ರಾಯಚೂರು 9480803832, ಯಾಪಲದಿನ್ನಿ ಠಾಣೆ ಆರಕ್ಷಕ ಉಪ ನಿರೀಕ್ಷಕರು 9480803851ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ಚಂದ್ರಬoಡ ಗ್ರಾಮದ ಅಶ್ವಿನಿ ಕಾಣೆ: ಪತ್ತೆಗೆ ಪೊಲೀಸರ ಮನವಿ.<br>?