ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ -2026!
ಕಲಬುರಗಿ.09.ಸೆಪ್ಟೆಂಬರ್.26:- ಶ್ರೀಮತಿ ವೀರಮ್ಮ ಮಹಿಳಾ ಮಹಾವಿದ್ಯಾಲಯದ ಶಿಕ್ಷಣ ಶಾಸ್ತ್ರ ವಿಭಾಗದ ವತಿಯಿಂದ ಸೆಪ್ಟೆಂಬರ್ 8, 2026ರಂದು “ಜನರು, ಭೂಮಿ ಮತ್ತು ಸಮೃದ್ಧಿಗಾಗಿ ಸಾಕ್ಷರತೆ” ಎಂಬ ಆಶಯದೊಂದಿಗೆ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಚಾಂದ್ ಬೀಬಿ ಬಿ.ಎಡ್. ಕಾಲೇಜು, ಕಲಬುರಗಿಯ ಸಹಾಯಕ ಪ್ರಾಧ್ಯಾಪಕರಾದ ಡಾ. ಶರಬಯ್ಯ ಸ್ವಾಮಿ ಅವರು ತಮ್ಮ ಉಪನ್ಯಾಸದಲ್ಲಿ ಮಹಿಳಾ ಶಿಕ್ಷಣದ ಮಹತ್ವವನ್ನು ಒತ್ತಿಹೇಳಿದರು. “ಒಬ್ಬ ಮಹಿಳೆಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬ ಹಾಗೂ ರಾಷ್ಟ್ರವೇ ಶಿಕ್ಷಣ ಪಡೆದಂತಾಗುತ್ತದೆ”…
Any questions related to Day: 09.09.2026?