ಕಲಬುರಗಿ: ನಮ್ಮ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದ ವತಿಯಿಂದ ವ್ಯಾಲ್ಯೂ ಆಡೆಡ್ ಕೋರ್ಸ್ ಅಂದರೆ ಮೌಲ್ಯ ವರ್ದಿತ ತರಭೇತಿಯ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು ಈ ಸಮಾರಂಭಕ್ಕೆ ಉದ್ಘಾಟಕರಾಗಿ ಶ್ರೀ ಬಾಬುರಾವ ಯಡ್ರಾಮಿ ಅವರು ಆಗಮಿಸಿ ಸಮೂಹ ಸಂವಹನ ಮಾಧ್ಯಮದ ಕುರಿತಾಗಿ ಮಾತನಾಡಿದದರು.
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಇಂತಹ ಕೋರ್ಸುಗಳನ್ನು ಸಹಿತ ಆಯ್ದುಕೊಂಡು ಹೆಚ್ಚಿನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಮತ್ತು ತಂತ್ರಜ್ಞಾನಗಳ ಬಳಕೆ ಕುರಿತು ಮಾತನಾಡುತ್ತಾ ತಂತ್ರಜ್ಞಾನವನ್ನು ಬಳಸಿಕೊಳ್ಳಿ ಆದರೆ ಸಂಪೂರ್ಣವಾಗಿ ಅದಕ್ಕೆ ಅವಲಂಬಿತಾರಾಗಬೇಡಿ ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು.
ನಮ್ಮ ಮಹಾವಿದ್ಯಾಲಯದ ಪ್ರಾಂಶುಪಾಲರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ವಿದ್ಯಾರ್ಥಿನಿಯರು ಈ ವ್ಯಾಲ್ಯೂ ಆಡೆಡ್ ಕೋರ್ಸಿನ ಸದುಪಯೋಗ ವಿದ್ಯಾರ್ಥಿನಿಯರು ಪಡೆದುಕೊಳ್ಳಿ, ಪತ್ರಿಕೆಗಳನ್ನು ಓದುವುದು ರೂಢಿಸಿಕೊಳ್ಳಿ, ಇದರಿಂದ ಪತ್ರಿಕೆಯ ವರದಿಗಳ ತಯಾರಿಕೆಯ ಅರಿವು ಮೂಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಬಿ. ಎ. 5th ಸೆಮ್ ನ ವಿದ್ಯಾರ್ಥಿನಿಯರಾದ ಅಂಬಮ್ಮಾ, ದಿವ್ಯಾ ಭವಾನಿ ಪ್ರಾರ್ಥನೆ ಗೀತೆಯನ್ನು ಹಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಕವಿತಾ ಎ ಎಮ್ ಆವರು ಸ್ವಾಗತ ಮತ್ತು ಪ್ರಸ್ತಾವನೆ ನುಡಿಗಳನ್ನಾಡಿದರು. ಕನ್ನಡ ವಿಭಾಗದ
ಇನ್ನೋರ್ವ ಉಪನ್ಯಾಸಕರಾದ ಶ್ರೀಮತಿ ಬಸಮ್ಮ ಗೊಬ್ಬುರ ಆವರು ಕಾರ್ಯಕ್ರಮವನ್ನು ನಿರೂಪಿಸಿ ಎಲ್ಲರನ್ನು ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಶಿವಲೀಲಾ ದೋತ್ರೆ ಮೇಡಂ ಡಾ.ಶ್ರೀದೇವಿ ಸರಡಗಿ ಮೇಡಂ, ಶ್ರೀಮತಿ ಗೀತಾ ಪಾಟೀಲ್ ಅವರು ಹಾಗೂ ವಿದ್ಯಾರ್ಥಿನಿಯರು ಕೂಡಾ ಹಾಜರಿದ್ದರು ಎಂದು ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ ಪತ್ತಾರ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.





Any questions related to ಪಠ್ಯದ ಜೊತೆಗೆ ಮೌಲ್ಯವರ್ಧಿತ ಕೋರ್ಸಗಳ ಆಯ್ಕೆ ಬಹುಮುಖ್ಯ-ಯಡ್ರಾಮಿ*?