ಬೀದರ, ಮೇ.18:- ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮಗಳಾದ ಪಂಚ ಗ್ಯಾರಂಟಿ ಯೋಜನೆಗಳಿಂದ ಜಿಲ್ಲೆಯ ಯಾವೊಬ್ಬ ಫಲಾನುಭವಿಯೂ ಹೊರಗುಳಿಯದಂತೆ ಎಚ್ಚರ ವಹಿಸಬೇಕು, ಅರ್ಹರಿರುವ ಪ್ರತಿಯೊಬ್ಬ ಫಲಾನುಭವಿಗೂ ಸಕಾರದ ಸೌಲಭ್ಯಗಳು ತಲುಪಿಸುವ ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ ಅವರು ಸೂಚಿಸಿದರು.
ಅವರು ಸೋಮವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲ ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರು ಮತ್ತು ಸ್ವಚ್ಛತೆ ಬಗ್ಗೆ ಅನೇಕ ದೂರುಗಳು ಬರುತ್ತಿದ್ದು, ವಿಭಾಗೀಯ ನಿಯಂತ್ರಣಾಧಿಕಾರಿ ಕ್ರಮವಹಿಸಬೇಕು. ಆಹಾರ ಇಲಾಖೆಯಲ್ಲಿ ಪಡಿತರ ವಿತರಿಸುವ ಅಂಗಡಿಗಳಲ್ಲಿ ಬೇಸಿಗೆ ಕಾಲ ಇರುವುದರಿಂದ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಮಾಡಿ ಸಾಧ್ಯವಾದರೆ ಪಡಿತರ ವಿತರಿಸುವ ವೇಳೆ ಬದಲಾಯಿಸಿಕೊಳ್ಳುವಂತೆ ನೊಡಿಕೊಳ್ಳುವಂತೆ ಸಂಬoಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಸದಸ್ಯರು ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಿದರು.
ಗೃಹಲಕ್ಷಿö್ಮÃ ಯೋಜನೆ¬ಡಿ ಜಿಲ್ಲೆಯಲ್ಲಿ 345132 ಫಲಾನುಭವಿಗಳು ಸದರಿ ಯೋಜನೆಯ ಲಾಭ ಪಡೆಯುತ್ತಿದ್ದು, ಜನವರಿಗೆ 18925778000 ಕೋಟಿ ಡಿಬಿಟಿ ಮುಖಾಂತರ ಅವರ ಖಾತೆಗೆ ಜಮೆ ಮಾಡಲಾಗಿದೆ. ಮಾರ್ಚ.2026 ರ ಹಣ ಒಂದು ವಾರದೊಳಗೆ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ. ಜಿಲ್ಲೆಯಲ್ಲಿ ಮರಣ ಹೊಂದಿರುವ ಫಲಾನುಭವಿಗಳ ಸಂಖ್ಯೆ; 5339 ಇದ್ದು, 4917 ಮರಣ ಹೊಂದಿರುವ ಫಲಾನುಭವಿಗಳ ಸೇವಾ ಸಿಂಧೂ ಲಾಗಿನಲ್ಲಿ ಅಪಡೆಟ್ ಮಾಡಲಾಗಿದೆ. ಬಾಕಿ 422 ಫಲಾನುಭವಿಗಳು ಸೇವ ಲಾಗಿನಲ್ಲಿ ಅಪಡೆಟ್ ಮಾಡಬೇಕಾಗಿದೆ.
ಗೃಹಕ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 375344 ಗ್ರಾಹಕರಿದ್ದು, 3.59301 ಫಲಾನುಭವಿಗಳು ಗೃಹಜ್ಯೋತಿ ಯೋಜನೆ ಲಾಭ ಪಡೆಯುತ್ತಿದ್ದು 513 ಕೋಟಿ ಸಂದಾಯವಾಗಿದೆ.
ಶಕ್ತಿಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ದಿನಾಂಕ: 11-06-2023 ರಿಂದ 08-05-2025 ರವರೆಗೆ ಮಹಿಳೆಯರು ಮತ್ತು ಬಾಲಕಿಯರು ಒಟ್ಟು ಸೇರಿ 12.36 ಕೋಟಿ ಜನರು ಸೌಲಭ್ಯವನ್ನು ಪಡೆದಿರುತ್ತಾರೆ. ಪ್ರತಿದಿನ ಸರಾಸರಿ 1.16 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದು ಇಲ್ಲಿಯವರೆಗೂ 367.99 ಕೋಟಿ ರೂ. ಸಂದಾಯವಾಗಿರುತ್ತದೆ.
ಅನ್ನಭಾಗ್ಯ ಯೋಜನೆಯಡಿ 3.57.286 ಪಡಿತರ ಚೀಟಿಗಳಿದ್ದು ಇಲ್ಲಿಯವರೆಗೆ 333.28 ಕೋಟಿ ಅನುದಾನ ಮಾರ್ಚ ವರೆಗೆ ಸಂದಾಯವಾಗಿರುತ್ತದೆ.
ಯುವನಿಧಿ ಯೋಜನೆಯಡಿ ದಿನಾಂಕ: 11-05-2026 ರವರೆಗೆ ಡಿಗ್ರಿ, ಡಿಪ್ಲೋಮಾ ಸೇರಿ 17202 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 37 ಕೋಟಿ 81 ಲಕ್ಷ ರೂ. ಸಂದಾಯವಾಗಿರುತ್ತದೆ.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳಾದ ಶರಣಬಸಪ್ಪಾ ಕೋಟೆಪ್ಪಗೊಳ, ಮುಖ್ಯ ಯೋಜನಾಧಿಕಾರಿ ಕಿಶೋರ ದುಭೆ, ಆಹಾರ ಇಲಾಖೆಯ ಉಪನಿರ್ದೇಶಕ ಪ್ರವೀನ ಬರಗಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಧರ, ಜೇಸ್ಕಾಂ ಕಾರ್ಯಪಾಲಕ ಅಭಿಯಂತರರಾದ ರಮೇಶ ಪಾಟೀಲ, ಗ್ಯಾರಂಟಿ ಯೋಜನೆಯ ತಾಲ್ಲೂಕಾ ಅಧ್ಯಕ್ಷರು ಹಾಗೂ ಸದಸ್ಯರು ಸೆರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.





Any questions related to ಗ್ಯಾರಂಟಿ ಯೋಜನೆಗಳಿಂದ ಯಾವೊಬ್ಬ ಫಲಾನುಭವಿಯೂ ಹೊರಗುಳಿಯಬಾರದು-ಅಮೃತರಾವ ಚಿಮಕೋಡೆ?