ಕೊಪ್ಪಳ.11.ಜುಲೈ 26: ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗ ವ್ಯಾಪ್ತಿಯ 110ಕೆವಿ ಕೊಪ್ಪಳ ಉಪಕೇಂದ್ರಕ್ಕೆ ಸಂಬoಧಿಸಿದAತೆ 11 ಕೆವಿ ಮಾರ್ಗಗಳ ಕಾಮಗಾರಿಯ ನಿಮಿತ್ತ ಜುಲೈ 12 ರಂದು ಎಫ್-10 ಗವಿಮಠ ಫೀಡರ್ ವ್ಯಾಪ್ತಿಯಲ್ಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಎಫ್-10 ಗವಿಮಠ ಫೀಡರ್‌ಗೆ ಒಳಪಡುವ ಕುವೆಂಪುನಗರ, ಜಿಲ್ಲಾ ಜೈಲುಖಾನೆ, ಶಫಿ ಗಾರ್ಮೆಂಟ್ಸ್, ಹೂವಿನಾಳ ರಸ್ತೆ ಹಾಗೂ ಹಾಲವರ್ತಿ ರಸ್ತೆಯ ಎಲ್ಲಾ ಶೇಂಗಾ ಮಿಲ್ ಗಳು ಮತ್ತು ಗವಿಮಠ ಯಾತ್ರಿನಿವಾಸ ಸೇರಿದಂತೆ ಎಲ್ಲಾ ಮಾರ್ಗಗಳಲ್ಲಿ ಜುಲೈ 12 ರಂದು ಬೆಳಿಗ್ಗೆ 10 ಗಂಟೆಯಿoದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ಕಾಮಗಾರಿ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಸೂಚಿಸಲಾಗಿದೆ. ಒಂದು ವೇಳೆ ವಿದ್ಯುತ್ ಅಫಘಾತ ಸಂಭವಿಸಿದಲ್ಲಿ ಕಂಪನಿಯು ಜವಬ್ದಾರರಾಗಿರುವುದಿಲ್ಲ ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ಕೊಪ್ಪಳ ಗವಿಮಠ ಫೀಡರ್ ವ್ಯಾಪ್ತಿಯಲ್ಲಿ ಜುಲೈ 12 ರಂದು ವಿದ್ಯುತ್ ವ್ಯತ್ಯಯ?