Home » ಲೈವ್ ನ್ಯೂಸ್ » ಕೊಪ್ಪಳದ ನವನಗರದ ಯುವಕ ಕಾಣೆ: ಪತ್ತೆಗಾಗಿ ಪೊಲೀಸರ ಮನವಿ

ಕೊಪ್ಪಳದ ನವನಗರದ ಯುವಕ ಕಾಣೆ: ಪತ್ತೆಗಾಗಿ ಪೊಲೀಸರ ಮನವಿ

ಕೊಪ್ಪಳ.23.ಸೆಪ್ಟೆಂಬರ್.26: ಕೊಪ್ಪಳದ ನವನಗರದ ಶಿವಕುಮಾರ ತಂ. ಬಾಲಸ್ವಾಮಿ ಚಿತ್ರಗಾರ ಎಂಬ 26 ವರ್ಷದ ಯುವಕನು ಕಾಣೆಯಾಗಿದ್ದು, ಯುವಕನ ಪತ್ತೆಗಾಗಿ ಕೊಪ್ಪಳ ಗ್ರಾಮೀಣ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಶಿವಕುಮಾರ್ ಎಂಬ ಯುವಕನು ಸೆಪ್ಟೆಂಬರ್ 3 ರಂದು ಸಂಜೆ 6.30 ಗಂಟೆಗೆ ತನ್ನ ಅಣ್ಣನ ಹತ್ತಿರ ಹೊರಗಡೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ತಡ ರಾತ್ರಿಯಾದರೂ ಮನೆಗೆ ವಾಪಸ್ ಬರದೇ ಇದ್ದುದ್ದರಿಂದ ಕೊಪ್ಪಳದ ಗವಿಮಠ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಇತರೆ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಈ ಬಗ್ಗೆ ಕೊಪ್ಪಳ ಗ್ರಾಮೀಣ ಠಾಣಾ ಗುನ್ನೆ ನಂ.190/2026 ಕಲಂ ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕನ ಚಹರೆ ಪಟ್ಟಿ:
ಯುವಕನು ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲಗೈ ಮತ್ತು ಎದೆಯ ಮೇಲೆ ಶಿವು ಹೆಸರಿನ ಟ್ಯಾಟೂ ಹಾಕಿಸಿಕೊಂಡಿರುತ್ತಾನೆ. ಯುವಕನು ಮನೆಯಿಂದ ಹೊರಡುವಾಗ ಬಿಳಿ ಮತ್ತು ಹಸಿರು ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ ಹಾಗೂ ಯುವಕನು ಕನ್ನಡ ಭಾಷೆ ಮಾತನಾಡುತ್ತಾನೆ.

ಮೇಲ್ಕಂಡ ಚಹರೆಯ ಯುವಕನ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ಮಾಹಿತಿ ದೊರೆತಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ನಂ.08539-221333 ಹಾಗೂ 9480803746 ಅಥವಾ ಕೊಪ್ಪಳ ಸಿಪಿಐ ನಂ.9480803731, ಕೊಪ್ಪಳ ಡಿವೈಎಸ್ಪಿ ನಂ.08539-230342, 9480803720, ಹಾಗೂ ಕೊಪ್ಪಳ ಎಸ್ಪಿ ನಂ.08539-230111 ಅಥವಾ ಕೊಪ್ಪಳ ಕಂಟ್ರೋಲ್ ರೂಂ ನಂ.08539-230222-100 ಗೆ ಸಂಪರ್ಕಿಸಲು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಪ್ರಕಟಣೆ ಕೋರಿದೆ.

Author

ಪ್ರಮುಖ ಸುದ್ದಿ

Stock market

Astrology