ಕಲಬುರಗಿ.29.ಆಗಸ್ಟ್.26: ನಗರದ ಪ್ರತಿಷ್ಠಿತ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗದ ವತಿಯಿಂದ ಹೊಸ ದೆಹಲಿಯ ಕೇಂದ್ರೀಯ ಹಿಂದಿ ನಿರ್ದೇಶಾಲಯದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್ಟಿಫಿಕೇಟ್ ಕೋರ್ಸ್ ಪರೀಕ್ಷೆಯ ಫಲಿತಾಂಶ ಅತ್ಯಂತ ಹೆಮ್ಮೆಯೊಂದಿಗೆ ಪ್ರಕಟಗೊಂಡಿದೆ.
ಕಾಲೇಜಿನ ಕೇಂದ್ರದಿಂದ ಪರೀಕ್ಷೆ ಬರೆದ ಒಟ್ಟು 102 ವಿದ್ಯಾರ್ಥಿಗಳಲ್ಲಿ 101 ವಿದ್ಯಾರ್ಥಿಗಳು ಯಶಸ್ವಿಯಾಗಿ ಉತ್ತೀರ್ಣರಾಗುವ ಮೂಲಕ ಶೇಕಡ 99ರಷ್ಟು ಅತ್ಯುತ್ಕೃಷ್ಟ ಫಲಿತಾಂಶವನ್ನು ದಾಖಲಿಸಿದ್ದಾರೆ. ಈ ಸಾಧನೆಯು ಮಹಾವಿದ್ಯಾಲಯದ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೇರಿಸಿದೆ.
ಫಲಿತಾಂಶದ ವಿಶೇಷತೆಗಳು:
- ಪ್ರಥಮ ದರ್ಜೆ (ಡಿಸ್ಟಿಂಕ್ಷನ್): 53 ವಿದ್ಯಾರ್ಥಿಗಳು
- ಪ್ರಥಮ ಶ್ರೇಣಿ: 43 ವಿದ್ಯಾರ್ಥಿಗಳು
- ದ್ವಿತೀಯ ಶ್ರೇಣಿ: 4 ವಿದ್ಯಾರ್ಥಿಗಳು
- ತೃತೀಯ ಶ್ರೇಣಿ: 1 ವಿದ್ಯಾರ್ಥಿ
- ಒಟ್ಟು ಉತ್ತೀರ್ಣರಾದವರು: 101
ಪಾಲ್ಗೊಂಡ ಸಂಸ್ಥೆಗಳು:
ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ನಡೆದ ಈ ಪರೀಕ್ಷೆಯಲ್ಲಿ ಸ್ಥಳೀಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ, ಕೆ.ಬಿ.ಎನ್. ವಿಶ್ವವಿದ್ಯಾಲಯ ಹಾಗೂ ಎನ್.ವಿ. ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ವಿದ್ಯಾರ್ಥಿಗಳ ಈ ಅದ್ಭುತ ಯಶಸ್ಸಿಗೆ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಶಿಲ್ ಜಿ. ನಮೋಶಿ, ಉಪಾಧ್ಯಕ್ಷರಾದ ಶ್ರೀ ರಾಜಾ ಬಿ. ಭೀಮಳ್ಳಿ, ಕಾರ್ಯದರ್ಶಿಗಳಾದ ಶ್ರೀ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ. ಕೈಲಾಸ್ ಪಾಟೀಲ್, ಕಾಲೇಜು ಅಭಿವೃದ್ಧಿ ಸಮಿತಿಯ ಸಂಚಾಲಕರಾದ ಶ್ರೀ ನಾಗಣ್ಣ ಘಂಟಿ, ಸದಸ್ಯರಾದ ಶ್ರೀ ಅರುಣ್ ಕುಮಾರ ಪಾಟೀಲ್, ಅನಿಲಕುಮಾರ ಮರಗೋಳ, ಆಡಳಿತ ಮಂಡಳಿಯ ಸದಸ್ಯರು, ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ ಆರ್. ಬಿ. ಕೊಂಡಾ, ಮಹಾವಿದ್ಯಾಲಯದ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಸಂಪೂರ್ಣ ದೇಶದಲ್ಲಿ ಕಳೆದ ಮೇ 31, 2026 ರಂದು ಯಶಸ್ವಿಯಾಗಿ ಜರುಗಿದ ಈ ಪರೀಕ್ಷೆಯ ಫಲಿತಾಂಶದ ವಿವರಗಳನ್ನು ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರೇಮಚಂದ ಚವ್ಹಾಣ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಹಂಚಿಕೊಂಡಿದ್ದು,






Any questions related to ಕೇಂದ್ರೀಯ ಹಿಂದಿ ನಿರ್ದೇಶಾಲಯದ ಸರ್ಟಿಫಿಕೇಟ್ ಕೋರ್ಸ್ ಫಲಿತಾಂಶ ಪ್ರಕಟ: ಶ್ರೀಮತಿ ವೀರಮ್ಮ ಗಂಗಸಿರಿ ಕಾಲೇಜಿನ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ?