Home » ಲೈವ್ ನ್ಯೂಸ್ » ಅರೆಕಾಲಿಕ ಉಪನ್ಯಾಸಕರ ಕಾಯಂಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಅರೆಕಾಲಿಕ ಉಪನ್ಯಾಸಕರ ಕಾಯಂಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಹೊಸ ದೆಹಲಿ.27.ಆಗಸ್ಟ್.26: ಅರೆಕಾಲಿಕ ಉಪನ್ಯಾಸಕರಾಗಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 745 ಮಂದಿ ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಹಾಗೂ ಕರ್ನಾಟಕದ ಹಿರಿಯ ವಕೀಲರಾದ ಎಚ್.ಬಿ. ಶಿವರಾಜು ಅವರು ಸುಪ್ರೀಂ ಕೋರ್ಟ್‌ನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ವಾದ ಮಂಡಿಸಿದರು.

ನ್ಯೂಡೆಲ್ಲಿ: ಕಳೆದ 15 ವರ್ಷಗಳಿಂದ ಸೇವೆಯಲ್ಲಿರುವ ಆಂಧ್ರಪ್ರದೇಶದ ಅರೆಕಾಲಿಕ ಉಪನ್ಯಾಸಕರಿಗೆ ಸಂಬಂಧಿಸಿದಂತೆ ಭಾರತದ ಸರ್ವೋಚ್ಚ ನ್ಯಾಯಾಲಯವು ಅತ್ಯಂತ ಮಹತ್ವದ ತೀರ್ಪು ನೀಡಿದೆ.

ಅರೆಕಾಲಿಕ ಉಪನ್ಯಾಸಕರ ಕಾಯಂಗೊಳಿಸಲು ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಪೀಠವು, ಆರ್ಹತೆ ಹೊಂದಿರುವ ಉಪನ್ಯಾಸಕರನ್ನು ತಕ್ಷಣವೇ ಕಾಯಂಗೊಳಿಸುವಂತೆ ಆಂಧ್ರಪ್ರದೇಶ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ.

ಕಾಯಂಗೊಳಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2025ರಲ್ಲಿ ಸಲ್ಲಿಕೆಯಾಗಿದ್ದ ಈ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಪೀಠವು, ಸೇವೆಯಲ್ಲಿರುವ ಉಪನ್ಯಾಸಕರ ಅರ್ಹತೆ ಹಾಗೂ ಯುಜಿಸಿ (UGC) ನಿಯಮಾವಳಿಗಳ ಪಾಲನೆ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಹಾಗೂ ಕರ್ನಾಟಕದ ಹಿರಿಯ ವಕೀಲರಾದ ಎಚ್.ಬಿ. ಶಿವರಾಜು ಅವರು ಸುಪ್ರೀಂ ಕೋರ್ಟ್‌ನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ವಾದ ಮಂಡಿಸಿದರು. ಉಪನ್ಯಾಸಕರು 15 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದು, ಅವರ ಭವಿಷ್ಯ ಮತ್ತು ಸೇವೆಯನ್ನು ಪರಿಗಣಿಸಿ ಕಾಯಂ ಮಾಡುವುದು ನ್ಯಾಯಸಮ್ಮತ ಎಂದು ವಾದಿಸಿದರು.

ಈ ವಾದದ ಸಂದರ್ಭದಲ್ಲಿ ಕರ್ನಾಟಕದ ಉದಾಹರಣೆಯನ್ನು ನ್ಯಾಯಪೀಠದ ಗಮನಕ್ಕೆ ತರಲಾಯಿತು. 1993 ಮತ್ತು 2002ರ ಅವಧಿಯಲ್ಲಿ ಕರ್ನಾಟಕ ಸರ್ಕಾರವು ಅರೆಕಾಲಿಕ ಉಪನ್ಯಾಸಕರ ಸೇವೆಯನ್ನು ಯಾವ ರೀತಿಯಲ್ಲಿ ಕಾಯಂಗೊಳಿಸಿ ಅವರಿಗೆ ನ್ಯಾಯ ಒದಗಿಸಿತ್ತೋ, ಅದೇ ಮಾದರಿಯನ್ನು ಅಂಧ್ರಪ್ರದೇಶದಲ್ಲೂ ಅಳವಡಿಸಿಕೊಂಡು ಈ ಉಪನ್ಯಾಸಕರಿಗೂ ಕಾಯಂ ಸೇವಾ ಸೌಲಭ್ಯ ನೀಡಬೇಕು ಎಂದು ವಕೀಲರು ಪ್ರತಿಪಾದಿಸಿದರು

ವಿಚಾರಣೆ ವೇಳೆ ಯುಜಿಸಿ ನಿಯಮಾವಳಿ ಪಾಲನೆ ಮತ್ತು ಪಿಎಚ್‌ಡಿ ಪದವಿ ಹೊಂದಿರುವವರ ವಿವರವನ್ನು ಪರಿಶೀಲಿಸಿದ ನ್ಯಾಯಪೀಠಕ್ಕೆ, ಒಟ್ಟು 1,453 ಉಪನ್ಯಾಸಕರಲ್ಲಿ 745 ಉಪನ್ಯಾಸಕರು ಯುಜಿಸಿ ನಿಯಮದಂತೆ ಪಿಎಚ್‌ಡಿ ಪದವಿ ಸೇರಿದಂತೆ ಅಗತ್ಯ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿದ್ದಾರೆ ಎಂಬ ಮಾಹಿತಿಯನ್ನು ಸ್ಪಷ್ಟಪಡಿಸಲಾಯಿತು.

ಈ ಎಲ್ಲ ಅಂಶಗಳನ್ನು ಆಲಿಸಿದ ನ್ಯಾಯಪೀಠವು, ಅಗತ್ಯ ಶೈಕ್ಷಣಿಕ ಅರ್ಹತೆ ಹಾಗೂ ಪಿಎಚ್‌ಡಿ ಹೊಂದಿರುವ 745 ಅರೆಕಾಲಿಕ ಉಪನ್ಯಾಸಕರನ್ನು ತಕ್ಷಣವೇ ಖಾಲಿ ಇರುವ (Degree College) ಕಾಯಂಗೊಳಿಸಬೇಕೆಂದು ಆದೇಶಿಸಿದೆ.

ಇನ್ನುಳಿದಂತೆ ಯುಜಿಸಿ ನಿಯಮ ಪಾಲನೆಯಾಗದ ಹಾಗೂ ಪಿಎಚ್‌ಡಿ ಹೊಂದಿರದ ಉಪನ್ಯಾಸಕರ ವಿಷಯದಲ್ಲೂ ಸುಪ್ರೀಂ ಕೋರ್ಟ್ ಸಕಾರಾತ್ಮಕ ಹಾದಿ ಸೂಚಿಸಿದೆ. ಇವರನ್ನು ಪಿಯು ಕಾಲೇಜುಗಳಿಗೆ (PUC) ನೇಮಕ ಮಾಡುವಂತೆ ಮತ್ತು ಹಂತ ಹಂತವಾಗಿ ಅವರ ಸೇವೆಯನ್ನು ಸಕ್ರಮಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಯುಜಿಸಿ (UGC) ನಿಯಮಾವಳಿಗಳು ಏನು ಹೇಳುತ್ತವೆ?: ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರು (Assistant Professor) are eved ಮಾನದಂಡಗಳನ್ನು ವಿಧಿಸಿದೆ. ಯುಜಿಸಿ ನಿಯಮಾವಳಿಗಳ ಪ್ರಕಾರ, ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ನೇಮಕಗೊಳ್ಳಲು ಸ್ನಾತಕೋತ್ತರ (Master’s Degree) ಪದವಿಯಲ್ಲಿ ಕನಿಷ್ಠ ಶೇ. 55 ರಷ್ಟು ಅಂಕಗಳನ್ನು ಗಳಿಸಿರುವುದು ಕಡ್ಡಾಯವಾಗಿದೆ.

ಇದರೊಂದಿಗೆ, ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) ಅಥವಾ ರಾಜ್ಯ ಮಟ್ಟದ ಅರ್ಹತಾ (SLET/SET) Beri, 2009 5 20160 ಯುಜಿಸಿ ನಿಯಮಾವಳಿಗಳ ಪ್ರಕಾರ ಪಿಎಚ್‌ಡಿ (Ph.D.) ಪದವಿ ಪಡೆದ ಅಭ್ಯರ್ಥಿಗಳಿಗೆ ನೆಟ್ ಅಥವಾ ಪ್ಲೆಟ್ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ. ಉನ್ನತ ಶಿಕ್ಷಣದ గుణచుట్ట బాజీలు ఓఎజోడ్ అథవా నేటో అయితే రదాయ ఎంబుడు ಯುಜಿಸಿಯ ಮುಖ್ಯ ನಿಯಮವಾಗಿದೆ.

Author

ಪ್ರಮುಖ ಸುದ್ದಿ

Stock market

Astrology