ಕೊಪ್ಪಳ.23.ಸೆಪ್ಟೆಂಬರ್.26: ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತಂತೆ ಪ್ರಚಾರ ಕೈಗೊಳ್ಳಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2026-27ನೇ ಸಾಲಿನಲ್ಲಿ ‘ರಂಗಚೇತನ ಸಾಂಸ್ಕೃತಿಕ ಕಲಾ ಸಂಸ್ಥೆ (ರಿ) ಚಿಕ್ಕಮ್ಯಾಗೇರಿ’ ಕಲಾತಂಡದ ಮೂಲಕ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 02ರವರೆಗೆ ಕುಷ್ಟಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೀದಿನಾಟಕ ಪ್ರದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸೆ. 23ರಂದು ಬೆಳಿಗ್ಗೆ ಹಿರೇಬನ್ನಿಗೋಳ ಹಾಗೂ ಸಂಜೆ ಕನಕೊಪ್ಪ ಗ್ರಾಮದಲ್ಲಿ, ಸೆ. 24ರಂದು ಬೆಳಿಗ್ಗೆ ಹಿರೇ ನಂದಿಹಾಳ ಹಾಗೂ ಸಂಜೆ ಚಿಕ್ಕ ನಂದಿಹಾಳದಲ್ಲಿ, ಸೆ. 25ರಂದು ಬೆಳಿಗ್ಗೆ ಕೊರಡಕೇರಾ ಹಾಗೂ ಸಂಜೆ ಯಲಬುರ್ತಿಯಲ್ಲಿ, ಸೆ. 26 ಬೆಳಿಗ್ಗೆ ಕಂದಕೂರ ಹಾಗೂ ಸಂಜೆ ಗುಮಗೇರಾದಲ್ಲಿ, ಸೆ. 27 ರಂದು ಬೆಳಿಗ್ಗೆ ಹಿರೇ ಮನ್ನಾಪುರ ಹಾಗೂ ಸಂಜೆ ನೀರಲೂಟಿಯಲ್ಲಿ,
ಸೆ. 28ರಂದು ಬೆಳಿಗ್ಗೆ ಬಚನಾಳ ಹಾಗೂ ಸಂಜೆ ಮೇಣೇದಾಳದಲ್ಲಿ, ಸೆ. 29ರಂದು ಬೆಳಿಗ್ಗೆ ಜುಮಾಲಾಪುರ ಹಾಗೂ ಸಂಜೆ ಫರ್ಜನಾಳದಲ್ಲಿ, ಸೆ. 30ರಂದು ಬೆಳಿಗ್ಗೆ ಮುದೇನೂರ ಹಾಗೂ ಸಾಯಂಕಾಲ ಕುಡ್ಲೂರದಲ್ಲಿ, ಅದೇ ರೀತಿ ಅಕ್ಟೋಬರ್ 01ರಂದು ಬೆಳಿಗ್ಗೆ ಸಿರಗುಂಪಿ ಹಾಗೂ ಸಂಜೆ ಜಾಲಿಹಾಳದಲ್ಲಿ ಮತ್ತು
ಅ. 02ರಂದು ಬೆಳಿಗ್ಗೆ ದೋಟಿಹಾಳ ಹಾಗೂ ಸಂಜೆ ಕೇಸೂರ ಗ್ರಾಮದಲ್ಲಿ ಬೀದಿ ನಾಟಕ ಕಾರ್ಯಕ್ರಮಗಳು ಜರುಗಲಿದೆ.
ಕಲಾವಿದರು ಆಯಾ ಗ್ರಾಮದ ಜನ ಸಂದನಿ ಸ್ಥಳದಲ್ಲಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಪ್ರಚುರಪಡಿಸಲು ಬೀದಿ ನಾಟಕ ಪ್ರದರ್ಶನ ನಡೆಸುವರು. ಆಯಾ ಗ್ರಾಮಸ್ಥರು ಬೀದಿನಾಟಕ ಪ್ರದರ್ಶನ ವೀಕ್ಷಿಸಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿಗಳಾದ ಗವಿಸಿದ್ದಪ್ಪ ಹೊಸಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ಕುಷ್ಟಗಿ: ಸೆ. 23 ರಿಂದ ವಿವಿಧ ಗ್ರಾಮಗಳಲ್ಲಿ ವಾರ್ತಾ ಇಲಾಖೆಯಿಂದ ಬೀದಿನಾಟಕ ಪ್ರದರ್ಶನ?