ಆತ್ಮ ಯೋಜನೆಯಡಿ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ.
prajaprabhat.com
prajaprabhat.com
ಕೊಪ್ಪಳ.20.ಆಗಸ್ಟ್.26: ಕುಕನೂರು ತಾಲೂಕಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಗುಡ್ನೆಪ್ಪನ ಮಠದಲ್ಲಿ ಆಗಸ್ಟ್ 21 ರಂದು ಬೆಳಿಗ್ಗೆ 9 ಗಂಟೆಗೆ ಉದ್ಯೋಗಾಕಾಂಕ್ಷಿಗಳಿಗಾಗಿ ‘ಅಪ್ರೆಂಟಿಶಿಪ್ ಕ್ಯಾಂಪಸ್ ಸಂದರ್ಶನ ಮೇಳ’ವನ್ನು ಆಯೋಜಿಸಲಾಗಿದೆ. ಕೊಪ್ಪಳ ಜಿಲ್ಲೆಯ ಬೇವಿನಹಳ್ಳಿಯ ಪ್ರಮುಖ ಸಂಸ್ಥೆಯಾದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಯಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಈ ಸಂದರ್ಶನವನ್ನು ನಡೆಸಲಿದ್ದು,ಇಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ಡೀಸೆಲ್ ಮೆಕ್ಯಾನಿಕ್ ಹಾಗೂ ಇಲೆಕ್ಟ್ರಾನಿಕ್ ಮೆಕ್ಯಾನಿಕ್ ವೃತ್ತಿಗಳಲ್ಲಿ ಉತ್ತೀರ್ಣರಾದ 18 ರಿಂದ 24 ವರ್ಷದ ಅರ್ಹ ಪುರುಷ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳನ್ನು…
ಕೊಪ್ಪಳ.20.ಆಗಸ್ಟ್.26: ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿರುವ ಕಾರ್ಯನಿರತ ಪತ್ರಕರ್ತರನ್ನು ಪ್ರೋತ್ಸಾಹಿಸುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾಧ್ಯಮ ಮಾನ್ಯತೆ ಕಾರ್ಡ್ ಹೊಂದಿರುವ ಕಾರ್ಯನಿರತ ಪತ್ರಕರ್ತರಿಗೆ “2026-27ನೇ ಸಾಲಿಗೆ ಮೀಡಿಯಾ ಕಿಟ್” ವಿತರಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಆಯುಕ್ತರಾದ ಎಂ.ಎನ್. ಅನುಚೇತ್, ಐ.ಪಿ.ಎಸ್ ಅವರು ತಿಳಿಸಿದ್ದಾರೆ. ಇಲಾಖೆಯ ಹವ್ಯಾಸಿ ಮಾನ್ಯತೆ ಕಾರ್ಡ್ ಹೊಂದಿರುವ ಪತ್ರಕರ್ತರು ಹಾಗೂ ಈ ಹಿಂದೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹಾಗೂ ಸರ್ಕಾರದ ವ್ಯಾಪ್ತಿಗೆ ಒಳಪಡುವ ಅಕಾಡೆಮಿ/ನಿಗಮ/ಮಂಡಳಿ/ಇತ್ಯಾದಿ…
ಕೊಪ್ಪಳ.20.ಆಗಸ್ಟ್.26: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಪ್ಪಳ ಜಿಲ್ಲೆಯಲ್ಲಿ 2026ನೇ ಸಾಲಿನ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಚಾಲ್ತಿಯಲ್ಲಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಜಿಲ್ಲಾಡಳಿತ ಪ್ರಕಟಿಸಿದೆ. ಪರಿಷ್ಕೃತ ವೇಳಾಪಟ್ಟಿ ಇಂತಿದೆ: ಆಗಸ್ಟ್ 24 ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಆ. 24 ರಿಂದ ಸೆಪ್ಟೆಂಬರ್ 23ರವರೆಗೆ ಅವಕಾಶ, ಆ. 24 ರಿಂದ ಅಕ್ಟೋಬರ್ 22ರವರೆಗೆ ನೋಟಿಸ್ ಹಂತ ಹಾಗೂ ಆಕ್ಷೇಪಣೆಗಳ ವಿಲೇವಾರಿ ನಡೆಯಲಿದ್ದು, ಅಕ್ಟೋಬರ್ 27ಕ್ಕೆ ಅಂತಿಮ ಮತದಾರರ…
ಕೊಪ್ಪಳ.20.ಆಗಸ್ಟ್.26: ಕೊಪ್ಪಳ ತಾಲ್ಲೂಕಿನಲ್ಲಿ ಆಗಸ್ಟ್-2026ರ ಮಾಹೆಯಲ್ಲಿ ಆಗಸ್ಟ್ ಹಾಗೂ ಸೆಪ್ಟೆಂಬರ್-2026ರ ಎರಡು ತಿಂಗಳ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಕಾರ್ಡುದಾರರಿಗೆ ಒಟ್ಟಿಗೆ ವಿತರಿಸಲಾಗುತ್ತಿದೆ ಎಂದು ಕೊಪ್ಪಳ ತಹಶೀಲ್ದಾರರು ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಆಗಸ್ಟ್-2026ರ ಮಾಹೆಯಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್-2026ರ ಮಾಹೆಗಳ ಎನ್.ಎಫ್.ಎಸ್.ಎ ಅಕ್ಕಿ ದಾಸ್ತಾನನ್ನು ಒಟ್ಟಿಗೆ ಆಗಸ್ಟ್ ಮಾಹೆಯಲ್ಲಿ ಹಂಚಿಕೆ ನೀಡಿ ವಿತರಣೆ ಮಾಡಲು ಸೂಚಿಸಿದ್ದು, ಅದರಂತೆ ಕ್ರಮವಹಿಸಲು ಸರ್ಕಾರದ ನಿರ್ದೇಶನವಿರುತ್ತದೆ. ಎರಡೂ ತಿಂಗಳುಗಳ ಹಂಚಿಕೆಯನ್ನು ಆಗಸ್ಟ್ ಮಾಹೆಯಲ್ಲಿಯೇ ನ್ಯಾಯಬೆಲೆ ಅಂಗಡಿಗಳ ಮೂಲಕ ಕಾರ್ಡುದಾರರಿಗೆ ವಿತರಿಸಲಾಗುತ್ತಿದೆ….
ಮನುಷ್ಯನಿಗೆ ತನ್ನ ಆರೋಗ್ಯವೇ ನಿಜವಾದ ಐಶ್ವರ್ಯ. ಆರೋಗ್ಯವೇ ಭಾಗ್ಯವೆಂದು ಗಾದೆಯು ಇದೆ. ಮನುಷ್ಯನು ಕಾಯಿಲೆ ಪೀಡಿತನಾದರೆ , ಆ ಕಾಯಿಲೆಯನ್ನು ಗುಣಪಡಿಸಲು ವೈದ್ಯರು ಚಿಕಿತ್ಸೆಯನ್ನು ನೀಡುವ ಜೊತೆಗೆ ಉತ್ತಮ ಸಲಹೆ ಗಳನ್ನು ಸಹ ನೀಡುವರು. ಆ ಕ್ರಮಗಳನ್ನು ಪಾಲಿಸಿದರೆ ಮನುಷ್ಯನು ಗುಣಮುಖನಾಗುವನು. ಕೆಲವು ಬಾರಿ ಮನುಷ್ಯನಿಗೆ ನಿರ್ದಿಷ್ಟ ಕಾಯಿಲೆ ಇದ್ದರೂ ಸರಿಯಾಗಿ ಕಾಳಜಿ ವಹಿಸುವುದಿಲ್ಲ ಹಾಗೂ ವೈದ್ಯರ ಸಲಹೆಗಳನ್ನು ಪಾಲಿಸುವುದಿಲ್ಲ ಪರಿಣಾಮವಾಗಿ ಮುಂದೆ ಅನೇಕ ಗಂಡಾತರಕ್ಕೆ ಒಳಗಾಗುವನು. ಉದಾಹರಣೆ 1: ದಾವಣಗೆರೆ ನಗರದ ಒಂದು ಸರಕಾರಿ ಆಸ್ಪತ್ರೆಗೆ …
ಕಲಬುರಗಿ, ಆಗಸ್ಟ್ 19: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ, ಕಲಬುರಗಿಯ ಹಿಂದಿ ವಿಭಾಗ ಹಾಗೂ ಅಖಿಲ ಭಾರತೀಯ ಹಿಂದಿ ಮಹಾಸಭಾ, ನವದೆಹಲಿ ಇವರ ಸಹಯೋಗದಲ್ಲಿ ಸಂತ ಗೋಸ್ವಾಮಿ ತುಳಸೀದಾಸರ 529ನೇ ಜಯಂತಿಯನ್ನು ಇಂದು ಮಹಾವಿದ್ಯಾಲಯದ ಸಭಾಂಗಣದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ನಿಕಟಪೂರ್ವ ಉಪನ್ಯಾಸಕಿ ಡಾ. ಅನುರಾಧಾ ಕುಲಕರ್ಣಿ ಮಾತನಾಡಿ, “ತುಳಸೀದಾಸರ ಸಾಹಿತ್ಯದಲ್ಲಿ ಭಾರತೀಯ ಸಂಸ್ಕೃತಿಯ ಜೀವಂತ ದರ್ಶನವಿದೆ” ಎಂದು ಹೇಳಿದರು….
ಬೀದರ್ 1,406 ಕಲಾವಿದರಿಗೆ ಗುರುತಿನ ಚೀಟಿ ವಿತರಣೆ, ಬೀದರ್ನಲ್ಲಿ ವಚನ ಸಂಗೀತ ಉತ್ಸವಕ್ಕೆ ಚಿಂತನೆ ಬೀದರ್ ಅಗಸ್ಟ್ 16 ಃ ನಮ್ಮ ನಾಡಿನ ಕಲೆ, ಸಂಸ್ಕೃತಿ ಹಾಗೂ ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಕಲಾವಿದರಿಗೆ ಆರ್ಥಿಕ ಭದ್ರತೆ ಕಲ್ಪಿಸುವುದರ ಜೊತೆಗೆ ಅವರ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು. ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು…
ಸರ್ಕಾರಿ ನೌಕರರೊಂದಿಗೆ ಮುಖ್ಯಮಂತ್ರಿಗಳ ಸಂವಾದ ಕಾರ್ಯಕ್ರಮ ರಾಯಚೂರು.11 ಆಗಸ್ಟ್ 26: ರಾಜ್ಯ ಸರ್ಕಾರದ ಜನಕಲ್ಯಾಣ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಲು ಮುಖ್ಯಮಂತ್ರಿಗಳು ರಾಜ್ಯದ ಸಮಸ್ತ ಸರ್ಕಾರಿ ನೌಕರರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬೃಹತ್ ನೇರ ಸಂವಾದ ಕಾರ್ಯಕ್ರಮವನ್ನು ಆಗಸ್ಟ್ 11ರ ಮಂಗಳವಾರ ದಂದು ಯಶಸ್ವಿಯಾಗಿ ನಡೆಸಲಾಯಿತು. ವಿಧಾನಸೌಧದಿಂದ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದ ನೂರಾರು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿಡಿಯೋ ಸಂವಾದದ ಮೂಲಕ ಭಾಗವಹಿಸಿದ್ದರು.ಈ ವೇಳೆ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು…
ನಶಾ ಮುಕ್ತ ಭಾರತ ಜನಜಾಗೃತಿ ಬೀದರ್: ಯುವಜನತೆ ಉತ್ತಮ ಸಂಸ್ಕಾರ, ಶಿಸ್ತು, ಸೇವಾ ಮನೋಭಾವ ಹಾಗೂ ಆರೋಗ್ಯ ಕರ ಜೀವನಶೈಲಿಯನ್ನು ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜರು ತಮ್ಮ ದಿವ್ಯ ಸಾನಿಧ್ಯದಲ್ಲಿ ಆಶೀರ್ವಾದ ಸಂದೇಶ ನೀಡಿ ಭಕ್ತರಿಗೆ ಕರೆ ನೀಡಿದರು. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಸಂಸ್ಥಾಪ ಕರಾದ ಸರ್ ಸೊರಾಬ್ಜಿ ಪೋಚ್ಖನಾವಾಲಾ ಅವರ ಜನ್ಮದಿನದ ಸ್ಮರಣಾರ್ಥ ಹಾಗೂ ನಶಾ ಮುಕ್ತ ಭಾರತ ಅಭಿಯಾನದ ಅಂಗವಾಗಿ ಬೀದರ್ ನಗರದ…
Email : prajaprabhat24@Gmail.com
© 2024 Praja Prabhate News – All rights reserved. | News Website Development Services | New Traffictail
prajaprabhat.com
ಪ್ರಜಾ ಪ್ರಭಾತ
Any questions related to prajaprabhat.com?
WhatsApp Us
🟢 Online | Privacy policy
WhatsApp us