ಮನುಷ್ಯನಿಗೆ ತನ್ನ ಆರೋಗ್ಯವೇ ನಿಜವಾದ ಐಶ್ವರ್ಯ. ಆರೋಗ್ಯವೇ ಭಾಗ್ಯವೆಂದು ಗಾದೆಯು ಇದೆ. ಮನುಷ್ಯನು ಕಾಯಿಲೆ ಪೀಡಿತನಾದರೆ , ಆ ಕಾಯಿಲೆಯನ್ನು ಗುಣಪಡಿಸಲು ವೈದ್ಯರು ಚಿಕಿತ್ಸೆಯನ್ನು ನೀಡುವ ಜೊತೆಗೆ ಉತ್ತಮ ಸಲಹೆ ಗಳನ್ನು ಸಹ ನೀಡುವರು. ಆ ಕ್ರಮಗಳನ್ನು ಪಾಲಿಸಿದರೆ ಮನುಷ್ಯನು ಗುಣಮುಖನಾಗುವನು. ಕೆಲವು ಬಾರಿ ಮನುಷ್ಯನಿಗೆ ನಿರ್ದಿಷ್ಟ ಕಾಯಿಲೆ ಇದ್ದರೂ ಸರಿಯಾಗಿ ಕಾಳಜಿ ವಹಿಸುವುದಿಲ್ಲ ಹಾಗೂ ವೈದ್ಯರ ಸಲಹೆಗಳನ್ನು ಪಾಲಿಸುವುದಿಲ್ಲ ಪರಿಣಾಮವಾಗಿ ಮುಂದೆ ಅನೇಕ ಗಂಡಾತರಕ್ಕೆ ಒಳಗಾಗುವನು.
ಉದಾಹರಣೆ 1: ದಾವಣಗೆರೆ ನಗರದ ಒಂದು ಸರಕಾರಿ ಆಸ್ಪತ್ರೆಗೆ ಅಧಿಕ ರಕ್ತದೊತ್ತಡ ಇರುವ ರೋಗಿಯು ನಿಯಮಿತ ಚೆಕ್ ಅಪ್ ಗೆ ಭೇಟಿ ನೀಡಿದ್ದಳು. ರೋಗಿಯ ರಕ್ತದೊತ್ತಡವನ್ನು ಪರೀಕ್ಷಿಸಿದಾಗ ರಕ್ತದೊತ್ತದ ಅಧಿಕವಿತ್ತು. ಆಗ ರೋಗಿಯೂ ನೀವೂ ಕೊಡುವ ಮಾತ್ರೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಆದುದರಿಂದ ನನ್ನ ಬಿ. ಪಿ ಕಂಟ್ರೋಲ್ ಅಲ್ಲಿ ಇಲ್ಲ ಎಂದು ಹೇಳಿದಳು. ವೈದ್ಯರು ರೋಗಿಯ ಮಾತ್ರೆ ಸೇವನೆಯ ಬಗ್ಗೆ ಕೇಳಿದಾಗ , ರೋಗಿಯ ಮಾತ್ರೆಗಳು ಕೆಲವು ದಿನಗಳ ಹಿಂದೆ ಖಾಲಿಯಾಯಿತು. ಆ ಸಮಯದಲ್ಲಿ ರೋಗಿಯೂ ಬೇರೆ ಊರಿಗೆ ಹೋಗಿದ್ದಳು ಹಾಗೂ ಆಸ್ಪತ್ರೆ ಗೆ ಭೇಟಿ ನೀಡಿರಲಿಲ್ಲ, ಮಾತ್ರೆ ಗಳನ್ನು ಪಡೆದಿರಲಿಲ್ಲ ಹಾಗೂ ಸೇವಿಸಲಿಲ್ಲ. ಮಾತ್ರೆಗಳು ಸೇವಿಸದೇ ಇದ್ದಲ್ಲಿ ಅಧಿಕ ರಕ್ತದೊತ್ತಡ ಹೇಗೆ ನಿಯಂತ್ರಣ ದಲ್ಲಿ ಬರಲು ಸಾಧ್ಯ? . ರೋಗಿಗೆ ಪ್ರತಿ ನಿತ್ಯ ಮಾತ್ರೆಗಳನ್ನು ಚಾಚುತಪ್ಪದೆ ಮಾತ್ರೆ ಗಳನ್ನು ಸೇವಿಸುವ ಹಾಗೂ ಸರಿಯಾದ ಜೀವನ ಶೈಲಿಯ ಕ್ರಮಗಳನ್ನು ಅಳವಳಿಸಿಕೊಳ್ಳುವ ಕ್ರಮಗಳನ್ನು ವೈದ್ಯರು ವಿವರಿಸಿದರು.
ಅಧಿಕ ರಕ್ತದೊತ್ತದ ಹಾಗೂ ಮಧುಮೇಹ ಅಸಂಕ್ರಾಮಿಕ ಕಾಯಿಲೆಗಳು. ಈ ಕಾಯಿಲೆಗಳನ್ನು ನಿಯಂತ್ರಣದಲ್ಲಿಡಲು ಮಾತ್ರೆಗಳನ್ನು ಸರಿಯಾದ ಸಮಯಕ್ಕೆ, ಚಾಚುತಪ್ಪದೆ ಸೇವಿಸಬೇಕು. ಅದರ ಜೊತೆಗೆ ಊಟದಲ್ಲಿ ಪಥ್ಯ , ನಿತ್ಯ ದೈಹಿಕ ಚಟುವಟಿಕೆಗಳು, ಕೆಟ್ಟ ಅಭ್ಯಾಸಗಳಿಂದ ದೂರ, ಮಾನಸಿಕ ಒತ್ತಡದಿಂದ ದೂರವಿರುವುದು, ಇಂತಹ ಕ್ರಮಗಳನ್ನು ಅಳವಡಿಸಿ ಕೊಂಡರೆ ಕಾಯಿಲೆಗಳು ನಿಯಂತ್ರಣದಲ್ಲಿರುವುದು.
ಉದಾಹರಣೆ 2
ಕೋವಿಡ್ 19 ಕಾಯಿಲೆಯು ವಿಶ್ವದಲ್ಲಿ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಕಾಯಿಲೆ. ಇದರ ತಡೆಗೆ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿತು. ಆದರೂ ಅಂಥ ಸಮಯದಲ್ಲೂ ಕೆಲವರು ಮಾಸ್ಕ್ ಧರಿಸಲು ಹಾಗೂ ಇತರ ನಿಯಮಗಳನ್ನು ಪಾಲಿಸಲು ಅಸಡ್ಡೆಯನ್ನು ತೋರಿಸಿದರು.
ಕೋವಿಡ್ 19 ಕಾಯಿಲೆಯ ಮೂರು ಅಲೆಗಳನ್ನು ಜನರು ನೋಡಿದರು ಅದರಲ್ಲಿ ಅನೇಕರು ಈ ಕಾಯಿಲೆಯಿಂದ ಇನ್ನು ಪಾಠವನ್ನು ಕಲಿತಿಲ್ಲ. ಇಂದು ಅನೇಕರು ಶೀತ, ಕೆಮ್ಮು, ಜ್ವರ ಹಾಗೂ ಗಂಟಲು ನೋವಿನಿಂದ ಬಳಲಿದರೆ ಅದರಲ್ಲಿ ಕೆಲವರು ಮಾತ್ರ ಮಾಸ್ಕ್ ಧರಿಸುತ್ತಾರೆ. ಉಳಿದವರು ಧರಿಸುವುದಿಲ್ಲ ಇದರ ಪರಿಣಾಮವಾಗಿ ಇತರರಿಗೆ ಕಾಯಿಲೆಯು ಹರಡುವುದು. ಮನೆಯಲ್ಲಿ ಮಕ್ಕಳು, ವಯಸಾದ ತಂದೆ ತಾಯಿ ಬಗ್ಗೆ ಸಹಿತ ಯೋಚನೆ ಮಾಡುವುದಿಲ್ಲ. ಮಕ್ಕಳಿಗೆ ಈ ಉಸಿರಾಟಕ್ಕೆ ಸಭಂಧಿಸಿದ ಕಾಯಿಲೆಗಳ ಸೋಂಕಿಗೆ ಒಳಗಾದರೆ ಬೇಗ ಚಿಕೆತ್ಸೆಗೆ ಸ್ಪಂದಿಸಲು ಬಹುದು ಅಥವ ಸೋಂಕು ತೀವ್ರ ಸ್ವರೂಪ ಪಡೆದರೆ ಆಸ್ಪತ್ರೆಗು ದಾಖಲಾಗುವ ಅನಿವಾರ್ಯ ಉಂಟಾಗಬಹುದು.
ಆದುದರಿಂದ ತಮಗೆ ತಗುಲಿದ ಸೋಂಕಿನ ಬಗ್ಗೆ ಜಾಗರೂಕತೆ ವಹಿಸಿದರೆ ಬೇರೆಯವರಿಗೂ ಈ ಅಪಾಯದಲ್ಲಿ ಸಿಲಿಕುವುದನ್ನು ತಪ್ಪಿಸಬಹುದಾಗಿದೆ.
ಉದಾಹರಣೆ 3
ಸ್ವಂತ ಇಷ್ಟದಿಂದ ಮಾತ್ರೆಗಳ ಸೇವನೆ
ಅನೇಕರು ತಮ್ಮ ಆರೋಗ್ಯದಲ್ಲಿ ಏರು ಪೇರಾದರೆ ಸ್ವತಃ ಮಾತ್ರೆಗಳನ್ನು ತಗೆದು ಕೊಳ್ಳುವುದು ಅಥವ ಮೆಡಿಕಲ್ ಶಾಪ್ ಗೆ ಹೋಗಿ ಮಾತ್ರೆಗಳನ್ನು ಖರೀದಿ ಸುವುದು ಮಾಡುತ್ತಿದ್ದಾರೆ. ಇದರಲ್ಲಿ ನೋವು ನಿವಾರಣೆ ಮಾತ್ರೆಗಳು ಇರಬಹುದು, ಆಂಟಿಬಯೋಟಿಕ್ , ಶೀತ ಮಾತ್ರೆಗಳು ಇತ್ಯಾದಿ. ಇದರಿಂದ ಕೆಲವೊಮ್ಮೆ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟಾಗುವುದು. ವೈದ್ಯರ ಸಲಹೆ ವಿಲ್ಲದೆ, ವೈದ್ಯರನ್ನು ಭೇಟಿಮಾಡದೆ , ವೈದ್ಯರಿಂದ ಲಿಖಿತ ರೂಪದಲ್ಲಿ ಇಲ್ಲದೇ ಮಾತ್ರೆಗಳನ್ನು ಸೇವಿಸ ಬಾರದು. ವಿನಾಕಾರಣ ಆಂಟಿಬಯೋಟಿಕ್ ಮಾತ್ರೆಗಳ ಸೇವನೆಯನ್ನು ಮಾಡಿದರೆ, ಮುಂದೆ ಆಂಟಿ ಬಯೋಟಿಕ್ ಆ ನಿರ್ದಿಷ್ಟ ಕಾಯಿಲೆಯನ್ನು ತಡೆಯಲು ವಿಫಲ ವಾಗುವುದು ಇದಕ್ಕ್ ಕಾರಣ ನಿರ್ದಿಷ್ಟ ಬ್ಯಾಕ್ಟೀರಿಯಾ ಆಂಟಿಬಯೋಟಿಕ್ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಪಡೆದು ಕೊಳ್ಳುತ್ತದೆ.
ಉದಾಹರಣೆ 4
ಇಂದು ಜನರು ಆರೋಗ್ಯದ ವಿಷಯದಲ್ಲಿ ಯಾವುದೇ ಮಾಹಿತಿಗಾಗಿ ಸಾಮಾಜಿಕ ಜಾಲಾತಾಣಗಳ ಮೇಲೆ ಅವಲಂಬಿತರಾಗಿದ್ದಾರೆ. ವಿಶೇಷವಾಗಿ ಯೂ ಟ್ಯೂಬ್ ( You tube), ಫೇಸ್ಬುಕ್ ಇತ್ಯಾದಿ. ಜನರು ಯು ಟ್ಯೂಬ್ influencer, ಗಳ ವಿಡಿಯೋ ನೋಡುವುದು ಅದನ್ನು ಪಾಲಿಸಲು ಇಷ್ಟ ಪಡುತ್ತಿದ್ದಾರೆ. ಹಾಗೂ ವೈದ್ಯರ ಸಲಹೆಯು ಪ್ರಮುಖ ಎಂಬುದನ್ನೇ ಮರೆತುಬಿಟ್ಟಿದ್ದಾರೆ.
ಜನರಿಗೆ ಆರೋಗ್ಯದ ಬಗ್ಗೆ ಯಾವುದೇ ವಿಷಯ ದ ಬಗ್ಗೆ ಮಾಹಿತಿ ಬೇಕೆಂದರೆ ವೈದ್ಯರರನ್ನು ಭೇಟಿ ಮಾಡಿ. ಯಾವುದೇ ಕಾಯಿಲೆಯು ಖಚಿತ ವಾದರೆ ಆ ಕಾಯಿಲೆಯನ್ನು ಗುಣಪಡಿಸಲು ಹಾಗೂ ನಿಯಂತ್ರಣದಲ್ಲಿದಲ್ಲಿ ವೈದ್ಯರು ಚಿಕಿತ್ಸೆ ಯನ್ನು ನೀಡುವರು ಅದರ ಜೊತೆಗೆ ಸಲಹೆಗಳನ್ನು ನೀಡುವರು. ಜನರು ಆ ಸಲಹೆಗಳನ್ನು ಪಾಲಿಸಬೇಕು. ಇದರ ಹೊರತು ವೈದ್ಯರ ನೀಡಿರುವ ಚಿಕಿತ್ಸೆಯನ್ನು ಕಡೆಗೆಣಸಿ ತಮಗೆ ಹೇಗೆ ಇಷ್ಟ ಹಾಗೆ ವರ್ತಿಸಿದರೆ ಕಾಯಿಲೆಯು ಗುಣ ಮುಖವಾಗುವುದಿಲ್ಲ ಅಥವ ನಿಯಂತ್ರಣದ ಒಳಗೆ ಇರುವುದಿಲ್ಲ ಇದರಿಂದ ರೋಗಿಯೂ ಅನೇಕ ಗಂಡಾತರಗಳಿಗೆ ಒಳಗಾಗುವನು. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ವಿಷಯ ದ ಬಗ್ಗೆ ಮಾಹಿತಿ ಬೇಕಾಗಿದ್ದಲ್ಲಿ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಿ, ವೈದ್ಯರನ್ನು ಸಂಪರ್ಕಿಸಿ. ವಿಶ್ವ ಆರೋಗ್ಯ ಸಂಸ್ಥೆಯ ವೆಬ್ ಸೈಟ್ ಹಾಗೂ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಯ ವೆಬ್ ಸೈಟ್ ಗಳಲ್ಲೂ ಕಾಯಿಲೆಗಳ ಬಗ್ಗೆ ಮಾಹಿತಿ ಉಂಟು, ಇದರಿಂದಲೂ ಆರೋಗ್ಯದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬಹುದು. ಮನುಷ್ಯ ನು ತನ್ನ ಆರೋಗ್ಯ ಕಾಪಾಡಿಕೊಳ್ಳುವ ಜವಾಬ್ದಾರಿಯ ಹೊಣೆ ತಾನೇ ಆಗಿರುತ್ತಾನೆ. . ವೈದ್ಯರು ಕಾಯಿಲೆಯು ಗುಣವಾಗಲಿ ಎಂದು ಚಿಕಿತ್ಸೆಯನ್ನು ನೀಡುವರು. ಇದರ ನಂತರ ಆರೋಗ್ಯ ದ ಎಲ್ಲ ಹೊಣೆ ಮನುಷ್ಯರ ಮೇಲೆ ಇರುವುದು. ಸರಿಯಾದ ಜೀವನ ಕ್ರಮ ಹಾಗೂ ವೈದ್ಯರ ಸಲಹೆಯನ್ನು ಸರಿಯಾಗಿ ಪಾಲಿಸಿದರೆ ಆರೋಗ್ಯ ಕರ ಜೀವನವನ್ನು ಬಾಳಬಹುದು ಹಾಗೂ ಕೆಲವು ಕಾಯಿಲೆಗಳನ್ನು ನಿಯಂತ್ರಣದಲ್ಲಿಡಬಹುದು.






Any questions related to ಎಸ್. ಎಸ್. ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸಂಶೋಧನ ಕೇಂದ್ರ, ದಾವಣಗೆರೆ…<br>?