ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು.
ಪ್ರಮುಖ ನಿರ್ಣಯಗಳು ಇಂತಿವೆ. ಬೆಂಗಳೂರು.20.ಜುಲೈ.26: ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿನ ರೈತರಿಗೆ ಕೃಷಿ/ ತೋಟಗಾರಿಕೆ/ಪಶು ವೈದ್ಯಕೀಯ ಮತ್ತು ಇತರೆ ಸಂಬಂಧಿತ ಬೆಳೆ ಮೇಲ್ವಿಚಾರಣೆ ಮತ್ತು ಸಂಯೋಜಿತ ಡಿಜಿಟಲ್ ಸಲಹೆಗಳು, ಬೆಳೆ ಸಮೀಕ್ಷೆಯನ್ನು ಕೈಗೊಳ್ಳುವ ಕರ್ನಾಟಕ ಅಗ್ರಿಟೆಕ್ ಮಿಷನ್-2026ನ್ನು ರೂ.35.99 ಕೋಟಿಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಹೊಸದಾಗಿ ಮಂಜೂರು ಮಾಡಿರುವ ವಿದ್ಯಾರ್ಥಿನಿಲಯಗಳಿಗೆ 7,500 ಟೂ-ಟಯರ್ ಕಾಟ್ಗಳನ್ನು ಹಾಗೂ 15,000…
Any questions related to prajaprabhat.com?