Home » ಲೈವ್ ನ್ಯೂಸ್ » ಮಾತನಾಡುವ ತುಟಿಗಳಿಗಿಂತ ಸೇವೆ ಮಾಡುವ ಬೆರಳುಗಳು ಶ್ರೇಷ್ಠ”- ಡಾ. ಪದ್ಮರಾಜ*

ಮಾತನಾಡುವ ತುಟಿಗಳಿಗಿಂತ ಸೇವೆ ಮಾಡುವ ಬೆರಳುಗಳು ಶ್ರೇಷ್ಠ”- ಡಾ. ಪದ್ಮರಾಜ*

ಕಲಬುರಗಿ: ದಿನಾಂಕ 24.09.2926 ರಂದು ಹೈ.ಕ.ಶಿ ಸಂಸ್ಥೆಯ,
ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಕಲಬುರ್ಗಿ ಕಾಲೇಜಿನಲ್ಲಿ  ಎನ್.  ಎಸ್.  ಎಸ್ .A, B ಮತ್ತು ಸ್ವಯಂ ನಿಧಿ ಘಟಕದ ವತಿಯಿಂದ ಎನ್.  ಎಸ್ . ಎಸ್. ಸಂಸ್ಥಾಪನಾ ದಿನಾಚರಣೆ ಕಾರ್ಯ ಕ್ರಮ ವನ್ನು ಕೈ ಗೊಳ್ಳಲಾಯಿತ್ತು. ಈ ಕಾರ್ಯಕ್ರಮ ದ ಮುಖ್ಯ ಅತಿಥಿಗಳಾಗಿ ಡಾ. ಪದ್ಮರಾಜ್ ಆರ್.  ಪ್ರಾಂಶುಪಾಲರು ಸರಕಾರಿ  ಪ್ರಥಮ ದರ್ಜೆ ಕಾಲೇಜು ಚಿತ್ತಾಪುರ ರವರು ಮಹಾವಿದ್ಯಾಲಯದ ರಾಷ್ಟ್ರೀಯ ಸ್ವಯಂ ಸೇವಕಿಯರನ್ನು ಉದ್ದೇಶಿಸಿ NSS ಮಹತ್ವ ಮತ್ತು ಅದರ ಉದ್ದೇಶ ಗಳ ಬಗ್ಗೆ ತಿಳಿಹೇಳುತ್ತಾ “ಮಾತನಾಡುವ ತುಟಿಗಳಿಗಿಂತ ಸೇವೆ ಮಾಡುವ ಬೆರಳುಗಳು ಶ್ರೇಷ್ಠ” ಎಂದು ಹೇಳಿದರು. ಈ ಕಾರ್ಯ ಕ್ರಮ ದ ಅದಕ್ಷತೆ ಯನ್ನು ಕಾಲೇಜಿನ ಪ್ರಾಂಶುಪಾಲ ರಾದ ಪ್ರೊ.ಆರ್. ಬಿ. ಕೊಂಡಾ ಸರ್ ರವರು NSS ನಮ್ಮ ಕಾಲೇಜಿನಲ್ಲಿ ನಡೆದು ಬಂದ ದಾರಿ ಮತ್ತು ಮಕ್ಕಳಿಗೆ ರಾಷ್ಟ್ರೀಯತೆ, ಸಹಬಾಳ್ವೆ, ಕುರಿತು ಮಾತನಾಡಿದರು. ಈ ಕಾರ್ಯಕ್ರಮ ದ ಸ್ವಾಗತ ಭಾಷಣವನ್ನು ಶ್ರೀಮತಿ. ಮಂಗಲಾ ಬಿರಾದಾರ ರವರು ನಡೆಸಿಕೊಟ್ಟರು. ಪ್ರಾರ್ಥನಾ ಗೀತೆಯನ್ನು ಕುಮಾರಿ ಸವಿತಾ ಹಾಡಿದರು. ವಂದನಾರ್ಪಣೆಯನು ಡಾ. ಶ್ರೀದೇವಿ ರವರು ಮಾಡಿದರು. ಈ ಕಾರ್ಯ ಕ್ರಮವನ್ನು ಕುಮಾರಿ ದಿವ್ಯಾ ನಿರೂಪಣೆ ಮಾಡಿದರು.ಡಾ. ಸುಭಾಶ್ಚಂದ್ರ ದೊಡ್ಡಮನಿ, ಡಾ. ನಾಗರತ್ನ.  ಶ್ರೀಮತಿ.ಸುಷ್ಮಾ ಕುಲಕರ್ಣಿ. ಶ್ರೀಮತಿ ಕವಿತಾ.A.M. ಶ್ರೀಮತಿ. ಗೀತಾ ಪಾಟೀಲ . ಶ್ರೀಮತಿ. ಬಸಮ್ಮ. ಡಾ. ಜ್ಯೋತಿಪ್ರಕಾಶ್. ಶರಣಪ್ಪ . ಎಂ.ಡಾ. ರಾಜೇಶ . ಬೋಧಕ ಬೋಧಕೇತರರು ಮತ್ತು ವಿಧ್ಯಾರ್ಥಿಗಳು ಉಪಸ್ಥಿತಿ ಇದ್ದರು ಎಂದು ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ ಪತ್ತಾರ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology