Home » ಲೈವ್ ನ್ಯೂಸ್ » ರಾಷ್ಟ್ರೀಯ ಅಹಿಂದ ಸಂಘಟನೆ ರೀ ರಾಜ್ಯ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಆಗಿ ಅಬ್ಬಾಸ ಅಲಿ ರಾಣೆಬೆನ್ನೂರು ನೇಮಕ

ರಾಷ್ಟ್ರೀಯ ಅಹಿಂದ ಸಂಘಟನೆ ರೀ ರಾಜ್ಯ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಆಗಿ ಅಬ್ಬಾಸ ಅಲಿ ರಾಣೆಬೆನ್ನೂರು  ನೇಮಕ

ಹಾವೇರಿ.20.ಸೆಪ್ಟೆಂಬರ್.26:ರಾಜ್ಯದಲ್ಲಿ ಸುಮಾರು 8 .ವರ್ಷಗಳ ಕಾಲ ನಿರಂತರ ಕಾರ್ಮಿಕರ ಬಗ್ಗೆ ಹೋರಾಟ,.ಸಾಮಾಜಿಕ ಸೇವೆ ಹಾಗೂ ಜನರ ಪರವಾಗಿ ಕೆಲಸ-ಕಾರ್ಯಗಳನ್ನು ಗುರುತಿಸಿ ನನ್ನನ್ನು ರಾಷ್ಟ್ರೀಯ ಅಹಿಂದ ಸಂಘಟನೆ(ರಿ)ಯ ರಾಜ್ಯ ಕಾರ್ಮಿಕ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಹಾವೇರಿ ಜಿಲ್ಲಾ  ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ ಮುತ್ತಣ್ಣ ಎಸ್ ಶಿವಳ್ಳಿ ಅವರು ಹಾಗೂ ರಾಜ್ಯದ ಎಲ್ಲಾ ಪದಾಧಿಕಾರಿಗಳಿಗೂ ಸಹಕಾರ ನೀಡಿ ಸರ್ವರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ರಾಜ್ಯ ಕಾರ್ಮಿಕ  ಸಮಿತಿಯ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಅಬ್ಬಾಸ್ ಅಲಿ ರಾಣೆಬೆನ್ನೂರು ಹೇಳಿದರು.



ಸಾಮಾಜಿಕ ನ್ಯಾಯಕ್ಕಾಗಿ ಅಹಿಂದ ಜನ ಜಾಗೃತಿ ಸಂಕಲ್ಪ ವೇದಿಕೆಯಡಿ ಬೆಂಗಳೂ-ರಿನ ಗಾಂಧಿ ಭವನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಮಿಕ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನೇಮಕ ಮಾಡಿದಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆಯ ( ರಿ )ರಾಜ್ಯಾಧ್ಯಕ್ಷರಾದ ಶ್ರೀ ಮುತ್ತಣ್ಣ ಎಸ್ ಶಿವಳ್ಳಿ, ಸರ್ ಮಾಜಿ ಕೇಂದ್ರ ಸಚಿವ ಸಿ ಎಂ ಇಬ್ರಾಹಿಂ,ರಾಜ್ಯ ಹಾಗೂ ರಾಜ್ಯ ಕಾರ್ಮಿಕ ಸಮಿತಿಯ ರಾಜ್ಯ ಅಧ್ಯಕ್ಷರಾದ ಶ್ರೀಮತಿ ಸುಶೀಲಾ ಕೆಎಂ ಕಾರ್ಯಾಧ್ಯಕ್ಷರಾದ ಗುರುನಗೌಡ ಪಾಟೀಲ.ರಾಜ್ಯ ಪ್ರಧಾನ ಕಾರ್ಯದರ್ಶಿ ಬೀರಲಿಂಗೇಶ್ವರ ಪೂಜಾರಿ ಅವರಿಂದ ಪ್ರಮಾಣ ಪತ್ರವನ್ನು ಸ್ವೀಕರಿಸಿ ಅವರು ಹಾವೇರಿ ಹಾಗೂ ರಾಜ್ಯದ ಜನತೆಗೆ ಧನ್ಯತೆಯನ್ನು ಪ್ರಕಟಣೆಯ ಮೂಲಕ ತಿಳಿಸಿದರು.

ಸಂವಿಧಾನಾತ್ಮಕವಾಗಿ ನಮ್ಮ ಹಕ್ಕುಗಳನ್ನು ಹಾಗೂ ಸೌಲಭ್ಯಗಳನ್ನು ಪಡೆಯಲು ಪ್ರಜಾಪ್ರಭುತ್ವದಲ್ಲಿ ಕಾರ್ಮಿಕರ ಬಗ್ಗೆ ಒಳ್ಳೆಯ ಕೆಲಸ ಕಾರ್ಯಗಳನ್ನು ಹೋರಾಟ ಆಗ್ಲಿ ಅನೇಕ ಸಂಬಂಧಪಟ್ಟ ಕಾರ್ಯಗಳಿಗೆ  ನಿರಂತರವಾಗಿ ಕೆಲಸ ಮಾಡಿಕೊಡಬೇಕೆಂದು

ಎಲ್ಲಾ ವರ್ಗದ ಜನರನ್ನು ಬದುಕಿನ ಮುಖ್ಯವಾಹಿನಿಗೆ ತರಲು ಸರ್ಕಾರಗಳ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ  ರಾಷ್ಟ್ರೀಯ ಅಹಿಂದ ಸಂಘಟನೆ ( ರಿ ) ಕಾರ್ಮಿಕ ಸಮಿತಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಧೈಯದೊಂದಿಗೆ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತಿದೆ.ಈ ಭಾಗವಾಗಿ ಹೋರಾಟ ಸಮಿತಿ ಪಾತ್ರ ಬಹುಮುಖ್ಯವಾಗಿದೆ. ಇದರ ಜವಾಬ್ದಾ-ರಿಯನ್ನು ನನಗೆ ನೀಡಿದ್ದು ಇನ್ನೂ ಹೆಚ್ಚು ಕೆಲಸ ಮಾಡುವ ಅವಕಾಶ ಸಿಕ್ಕಂತಾಗಿದೆ. ರಾಷ್ಟ್ರೀಯ ಅಹಿಂದ ಸಂಘಟನೆಯಲ್ಲಿ ರಾಜ್ಯ ಪದಾಧಿಕಾರಿಗಳ ಹಾಗೂ ರಾಜ್ಯದ ಜನತೆಯ ಸಹಕಾರದೊಂದಿಗೆ ಸಂಘಟನೆ

ಹಾಗೂ ಹೋರಾಟಕ್ಕೆ ಮುನ್ನಡೆಯಬೇಕಾಗಿದೆ. ಜನರ ಧ್ವನಿಯಾಗಿ ಕೆಲಸ ಮಾಡೋಣ ಎಂದು ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಾಸ ಅಲ್ಲಿ  ರಾಣೇಬೆನ್ನೂರು  ತಿಳಿಸಿದ್ದಾರೆ

ಕಾರ್ಯಕ್ರಮದಲ್ಲಿ ರಾಷ್ಟ್ರೀಯ  ಅಹಿಂದ ಸಂಘಟನೆಯ  ಚಿಂತಕರಾದ ಸಮೃದ್ಧ ಸೂರಜ್ ಹೆಗಡೆ, ಲೋಹಿತ್ ನಾಯಕ,ಕನ್ನಡ ಚಿತ್ರರಂಗದ ನಿರ್ಮಾಪಕರಾದ ಡಾ.ಮದನ್ ಪಟೇಲ,ಮುಖಂಡರಾದ ಗಣೇಶ ಪೂಜಾರ, ರಾಷ್ಟ್ರೀಯ ಅಹಿಂದ  ಸಂಘಟನೆ ರೀ ರಾಜ್ಯ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ  ಹಾಗೂ ಪ್ರಚಾರ ಸಮಿತಿಯ ರಾಜ್ಯ ಅಧ್ಯಕ್ಷರಾದ ಬಾಬಾಜಾನ್ ಮುಧೋಳ್ ಸರ್ ಹಾಗೂ
ಹಾವೇರಿ ಜಿಲ್ಲಾ ಕಾರ್ಮಿಕ ಘಟಕದ ಕಾನೂನು ಸಲಹೆಗಾರು ಶ್ರೀ ವಿಜಯ್ ತೋಟಗೇರ್  ಕಾರ್ಮಿಕ ಘಟಕದ ಜಿಲ್ಲಾ ಉಪಾಧ್ಯಕ್ಷ ರಾಧಾ ನೀಲಪ್ಪ ದೊಡ್ಮರಿಯಮ್ಮನವರ್
ಜಿಲ್ಲಾ ಪ್ರಧಾನ ಕಾರ್ಯದರ್ಶಿ
ರಿಯಾಜ್ ಅಹಮದ್ ಕಾಲಶೆಕೆರ್  ಹಾವೇರಿ ಜಿಲ್ಲಾ ಕಾರ್ಮಿಕ ಸಂಚಾಲಕರಾದ ಮೊಹಮ್ಮದ್ ಸಾಧಿಕ್ ಅಬ್ದುಲ್ ಹಮೀದ್ ಸಾಬ್ ಮುಲ್ಲಾ  ಹಾಗೂ ಜಿಲ್ಲಾ ಸಂಚಾಲಕರಾದ ದೇವಪ್ಪ ಮಡ್ಡಿ ಕಾರ್ಮಿಕ ತಾಲೂಕ ಅಧ್ಯಕ್ಷರಾದ ಅಬ್ದುಲ್ ಖಾದರ್ ಅ ಖಾದ್ರಿ ಸಾಬೀರ್ ಕನವಳ್ಳಿ ಸಂಚಾಲಕರು  ರಾಣೆಬೆನ್ನೂರು ತಾಲೂಕು ಗೌರವ ಅಧ್ಯಕ್ಷರಾದ ಮೋಹಿದೀನ್ ಖಾನ್ ಬ್ಯಾಡಗಿ  ಕಂಚಾರಗಟ್ಟಿ ಗ್ರಾಮ ಘಟಕದ ಅಧ್ಯಕ್ಷರಾದ ಮುಸ್ತು ಸಾಬ್ ನೂರ ಸಾಬ್ ಕಲಾರಿ ಗ್ರಾಮ ಘಟಕ ಸಂಚಾಲಕರು ಇಮಾಮ್  ಹುಸೇನ್ ಗುಲಗುಂದಿ ಹಾಗೂ ಕಾರ್ಮಿಕ ಇನ್ನೋರ್ವ ಸಂಚಾಲಕರಾದ ಅಶ್ವಾಕ್ ಬಾಲೆ ಬಾಯಿ 
ಪುನೀತ್ ಅಶೋಕ್ ಹ್ ಸೇರಿದಂತೆ ರಾಜ್ಯ ಪದಾಧಿಕಾರಿಗಳು ಹಾಗೂ ಮುಖಂಡರು ಪಾಲ್ಗೊಂಡಿದ್ದರು.

ರಾಜ್ಯ ಸಮಿತಿಯ ಎಲ್ಲಾ ಮುಖಂಡರಿಗೂ ಹೃದಯಪೂರ್ವಕ ಧನ್ಯವಾದ ತಿಳಿಸಿದರು  ಅಬ್ಬಾಸ್ ಅಲಿ ರಾಣೆಬೆನ್ನೂರು

Author

ಪ್ರಮುಖ ಸುದ್ದಿ

Stock market

Astrology