ಬಂಟ್ವಾಳ.19.ಸೆಪ್ಟೆಂಬರ್.26: ಕಾಲೇಜು ಶಿಕ್ಷಣ ಇಲಾಖೆಯ ಯುಜಿಸಿ ಅರ್ಹತೆ ಹೊಂದಿರುವವರಿಗೆ ಮಾತ್ರ ಅತಿಥಿ ಉಪನ್ಯಾಸಕರಾಗಲು ಈ ವರ್ಷ ಅವಕಾಶ ನೀಡಲಾಗಿದೆ. ಆದರೆ ಇಷ್ಟು ವಿದ್ಯಾರ್ಹತೆ ಹೊಂದಿರುವವರು ಉತ್ತಮ ವೇತನದ ಅನ್ಯ ಉದ್ಯೋಗ ಆರಿಸಿಕೊಳ್ಳುತ್ತಿರುವ ಕಾರಣ ವಿವಿಧ ವಿಷಯಗಳಿಗೆ ಪಾಠ ಪ್ರವಚನ ಮಾಡಲು ಅತಿಥಿ ಉಪನ್ಯಾಸಕರ ಕೊರತೆ ಉಂಟಾಗಿದೆ.
ರಾಜ್ಯದಲ್ಲಿ ಈ ಬಾರಿ ಯುಜಿಸಿ ವಿದ್ಯಾರ್ಹತೆ ಪ್ರಕಾರವೇ ಅತಿಥಿ ಉಪನ್ಯಾಸಕರ ನೇಮಕ ಮಾಡಲು ಸೂಚನೆ ಇದೆ. ಆದರೆ ಮುಖ್ಯವಾಗಿ ಕಂಪ್ಯೂಟರ್‌ಸೈನ್ಸ್ ಸಹಿತ ವಿಜ್ಞಾನ ವಿಭಾಗದ ವಿಷಯಗಳು, ಉದ್ಯಮಾಡಳಿತದಂತಹ ಕೆಲವು ವಿಷಯಗಳಿಗೆ ಇದರಿಂದಾಗಿ ಅತಿಥಿ ಉಪನ್ಯಾಸಕರು ಸಿಗುತ್ತಿಲ್ಲ. ಕಳೆದ ವರ್ಷ ಇದೇ ಸಮಸ್ಯೆಯಿಂದಾಗಿ “ಅನಿ ವಾರ್ಯ’ ಎಂಬಂತೆ “ಯುಜಿಸಿ ಅರ್ಹತೇ ತರ’ರಿಗೂ ಕೊನೆಗೆ ಅನುಮತಿ ನೀಡಲಾಗಿತ್ತು. ಈ ಬಾರಿ ಮೂರ್ನಾಲ್ಕು ಬಾರಿ ಕೌನ್ಸೆಲಿಂಗ್ ಆಗಿದ್ದರೂ ಕೆಲವು ವಿಷಯ ಬೋಧನೆಗೆ ನೇಮಕಾತಿ ಆಗಿಲ್ಲ.
ಕಳೆದ ಬಾರಿ ನ್ಯಾಯಾಲಯದ ಅನುಮತಿ
ಹೋದ ಬಾರಿ ನ್ಯಾಯಾಲಯದ ಅನುಮತಿ ಕೇಳಿ ಕೊನೆಗೆ ವಿನಾಯಿತಿ ನೀಡಲಾಗಿತ್ತು. ಇದನ್ನೇ ಈ ಬಾರಿ ಮುಂದುವರಿಸಲು ಆಗುವುದಿಲ್ಲ. ಹೀಗಾಗಿ ಇಲಾಖೆ ಮತ್ತೆ ನ್ಯಾಯಾಲಯದ ಅನುಮತಿ ಪಡೆಯಲು ಮುಂದಾಗುತ್ತದೆಯೇ ಎಂಬ ಪ್ರಶ್ನೆ ಇದೆ. ಅನುಮತಿ ನೀಡಿದರೆ, ಈ ಪ್ರಕ್ರಿಯೆ ಮುಗಿದು ಅತಿಥಿ ಉಪನ್ಯಾ ಸಕರು ಕಾಲೇಜಿಗೆ ಬರಲು ಸಮಯ ಹಿಡಿಯುತ್ತದೆ.
ಯಾರಿಗೆಲ್ಲ ಸಮಸ್ಯೆ?
ಬಿಸಿಎ, ಬಿಬಿಎ, ಇಂಗ್ಲಿಷ್, ಕ್ರಿಮಿನಾಲಜಿ, ಕಂಪ್ಯೂಟರ್‌ಸೈನ್ಸ್‌ನಂತಹ ವಿಜ್ಞಾನ ಮತ್ತು ಉದ್ಯಮಾಡಳಿತ ದಂತಹ ವಿವಿಧ ವಿಷಯಗಳ ಬೋಧನೆಗೆ ಸಮಸ್ಯೆ ಎದುರಾಗಿದೆ. ಸಾಮಾನ್ಯವಾಗಿ 30 ವಿದ್ಯಾರ್ಥಿಗಳಿರುವ ಕಂಪ್ಯೂಟರ್‌ಸೈನ್ಸ್ ತರಗತಿಗೆ ಕನಿಷ್ಠ 3 ಅತಿಥಿ ಉಪನ್ಯಾಸಕರು ಬೇಕು. ಕೆಲವು ಕಾಲೇಜುಗಳಲ್ಲಿ ಒಂದಿಬ್ಬರ ನೇಮಕವಾಗಿದ್ದರೆ, ಕೆಲವು ಕಡೆ ಒಬ್ಬರ ನೇಮಕವೂ ಆಗಿಲ್ಲ.
13 ಇರುವಲ್ಲಿ 3 ಮಂದಿ ಮಾತ್ರ!
ಅತಿಥಿ ಉಪನ್ಯಾಸಕರೊಬ್ಬರು ಮಾತ ನಾಡಿ, “ನಮ¬¾ ಸರಕಾರಿ ಕಾಲೇ ಜಿಗೆ ಕಂಪ್ಯೂಟರ್ ಸೈನ್ಸ್ ವಿಷಯಕ್ಕೆ 13 ಉಪನ್ಯಾಸಕರ ಅಗತ್ಯವಿದೆ. ಖಾಯಂ ಹುದ್ದೆ ಇಲ್ಲದೆ ಅತಿಥಿ ಉಪನ್ಯಾಸಕರನ್ನೇ ಇಲ್ಲಿ ನಿಯೋಜಿಸ ಲಾಗುತ್ತದೆ. ಈಗ ನೆಟ್, ಸ್ಲೆಟ್ ಆಗಿರುವ ಕೇವಲ 3 ಮಂದಿ ಮಾತ್ರ ನೇಮಕವಾಗಿ ಬಂದಿ ದ್ದಾರೆ. ಇನ್ನೂ 10 ಮಂದಿಯ ಅಗತ್ಯವಿದೆ. ಆದರೆ ಸಿಗುತ್ತಿಲ್ಲ. ಉಳಿದ ಕಾರ್ಯಭಾರದ ಒತ್ತಡ ನಮ¬¾ ಮೇಲೆ ಬೀಳುತ್ತಿದೆ’ ಎನ್ನುತ್ತಾರೆ.
ಮೊದಲ ಸೆಮಿಸ್ಟರ್ ಮುಕ್ತಾಯ; ಇನ್ನೂ ಸ್ಪಷ್ಟತೆ ಇಲ್ಲ
ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ ರೊಬ್ಬರು “ಉದಯ ವಾಣಿ’ಗೆ ಪ್ರತಿಕ್ರಿಯಿಸಿ, “ಇಂತಹ ಸಮಸ್ಯೆ ಎದುರಾಗುತ್ತದೆ ಎಂಬ ಬಗ್ಗೆ ಕಳೆದ ವರ್ಷದಿಂದಲೇ ಇಲಾಖೆಗೆ ತಿಳಿದಿತ್ತು. ಹೀಗಾಗಿ ಮೊದಲೇ ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕಿತ್ತು. ಪ್ರಸ್ತುತ ಮೊದಲ ಸೆಮಿಸ್ಟರ್‌ಮುಗಿಯುವ ಹಂತದಲ್ಲಿದ್ದೇವೆ. ಇನ್ನೂ ಕೆಲವು ವಿಷಯ ಬೋಧನೆಗೆ ಅರ್ಹ ಅತಿಥಿ ಉಪನ್ಯಾಸಕರು ಸಿಕ್ಕಿಲ್ಲ. ಸ್ಪಷ್ಟತೆಯೂ ಇಲ್ಲ. ಹೀಗಾದರೆ ಸರಕಾರಿ ಪದವಿ ಕಾಲೇಜುಗಳ ಬಗ್ಗೆ ಪೋಷಕರು, ಮಕ್ಕಳಿಗೆ ಬೇಸರ ಮೂಡುತ್ತದೆ’ ಎಂದರು.
ಯಾಕೆ ಕೊರತೆ? ಯುಜಿಸಿ ನಿಯಮ ಪ್ರಕಾರ ರಾಷ್ಟ್ರೀಯ ಅರ್ಹತೆ ಪರೀಕ್ಷೆ (NET), ರಾಜ್ಯ ಅರ್ಹತೆ ಪರೀಕ್ಷೆ (SLET/KSET) ಅಥವಾ ಪಿಎಚ್.ಡಿ (Ph.D) ಪದವಿ ಹೊಂದಿರುವ ಅಭ್ಯರ್ಥಿಗಳನ್ನು ಮಾತ್ರ ಅತಿಥಿ ಉಪನ್ಯಾಸಕರಾಗಿ ನೇಮಿಸಬೇಕು. ಕೆಲವು ವಿಷಯಗಳಿಗೆ ಈ ಅರ್ಹತೆಯವರು ಸಿಗುತ್ತಾರೆ. ಆದರೆ ಇತರ ವಿಷಯಗಳಲ್ಲಿ ಹೆಚ್ಚು ವೇತನದ ಅನ್ಯ ಉದ್ಯೋಗಗಳತ್ತ ತೆರಳುತ್ತಾರೆ. ಜತೆಗೆ ನೇಮಕಾತಿ ವಿಳಂಬ, ಸರಕಾರಿ ಕಾಲೇಜಿನಲ್ಲಿ ಭದ್ರತೆ ಇಲ್ಲ ಎಂಬ ಕಾರಣದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೋಗುತ್ತಾರೆ.
ಪ್ರೊ| ಪಿ.ಎಲ್. ಧರ್ಮ, ಕುಲಪತಿ, ಮಂಗಳೂರು ವಿ.ವಿ.
– ದಿನೇಶ್ ಇರಾ





Any questions related to ಸರಕಾರಿ ಕಾಲೇಜುಗಳಿಗೆ ಅತಿಥಿಗಳ ಕೊರತೆ?