ಬೀದರ.11.ಜುಲೈ 26 : ಕೃಷಿ ಭೂಮಿಯ ಫಲವತ್ತತೆಯನ್ನು ಕಾಪಾಡುವುದು ಹಾಗೂ ರೈತರಲ್ಲಿ ಸುಸ್ಥಿರ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತ ಸರ್ಕಾರದ ವತಿಯಿಂದ ಹಮ್ಮಿಕೊಂಡಿದ್ದ ಖೇತ್ ಬಚಾವೋ ಅಭಿಯಾನವನ್ನು ಬೀದರ್ ಕೃಷಿ ವಿಜ್ಞಾನ ಕೇಂದ್ರದ (ಏಗಿಏ) ವತಿಯಿಂದ ಜೂನ್ ತಿಂಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಯಿತು.
ಅಭಿಯಾನದಡಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ರೈತರಿಗೆ ಮಣ್ಣಿನ ಆರೋಗ್ಯ, ಸಮತೋಲನ ರಸಗೊಬ್ಬರ ಬಳಕೆ, ಮಣ್ಣಿನ ಪರೀಕ್ಷೆ, ನೀರಿನ ಸಂರಕ್ಷಣೆ, ನೈಸರ್ಗಿಕ ಕೃಷಿ ಹಾಗೂ ಹವಾಮಾನಸ್ನೇಹಿ ಕೃಷಿ ಪದ್ಧತಿಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ರಾಜಶೇಖರ್ ಬಸನಾಯಕ ಅವರ ಮಾರ್ಗದರ್ಶನದಲ್ಲಿ ಈ ಅಭಿಯಾನ ನಡೆಯಿತು. ಈ ಕುರಿತು ಮಾತನಾಡಿದ ಅವರು ರೈತರು ಮಣ್ಣಿನ ಪರೀಕ್ಷೆ ಆಧರಿಸಿ ರಸಗೊಬ್ಬರಗಳನ್ನು ಬಳಸಿದರೆ ಉತ್ಪಾದನಾ ವೆಚ್ಚ ಕಡಿಮೆಯಾಗುವುದರ ಜೊತೆಗೆ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ರೈತರಲ್ಲಿ ಮಣ್ಣಿನ ಆರೋಗ್ಯದ ಮಹತ್ವದ ಕುರಿತು ಅರಿವು ಮೂಡಿಸುವುದು, ಮಣ್ಣಿನ ಪರೀಕ್ಷೆ ಆಧಾರಿತ ಸಮತೋಲಿತ ರಸಗೊಬ್ಬರ ಬಳಕೆಯನ್ನು ಉತ್ತೇಜಿಸುವುದು ಹಾಗೂ ಅವೈಜ್ಞಾನಿಕ ರಾಸಾಯನಿಕ ಗೊಬ್ಬರಗಳ ಬಳಕೆ ತಗ್ಗಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಒಂದು ತಿಂಗಳ ಕಾಲ ನಡೆದ ಈ ಅಭಿಯಾನದಲ್ಲಿ 3,752ಕ್ಕೂ ಹೆಚ್ಚು ರೈತರು ಮತ್ತು ಮಹಿಳಾ ರೈತರು ಭಾಗವಹಿಸಿದ್ದು, 19 ತರಬೇತಿ ಕಾರ್ಯಕ್ರಮಗಳು, 34 ಗ್ರಾಮ ಮಟ್ಟದ ಜಾಗೃತಿ ಸಭೆಗಳು, ಪ್ರಾತ್ಯಕ್ಷಿಕೆಗಳು ಹಾಗೂ 4 ರೈತ ಸಂವಾದಗಳನ್ನು ಆಯೋಜಿಸಲಾಯಿತು. ಅಲ್ಲದೆ, 22 ಸ್ವಸಹಾಯ ಸಂಘಗಳ ಸದಸ್ಯರು ಸಹ ಭಾಗವಹಿಸಿ ಕೃಷಿಯ ನವೀನ ತಂತ್ರಜ್ಞಾನಗಳ ಕುರಿತು ಮಾಹಿತಿ ಪಡೆದರು.
ಹೆಚ್ಚಿನ ಮಾಹಿತಿಗಾಗಿ ಡಾ. ರಾಜಶೇಖರ್ ಬಸನಾಯಕ್, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್–ಕೃಷಿ ವಿಜ್ಞಾನ ಕೇಂದ್ರ, ಬೀದರ್ ಮೊ. 9480696318, 9711330755 ಅವರನ್ನು ಸಂಪರ್ಕಿಸಬಹುದಾಗಿದೆ.






Any questions related to ಖೇತ್ ಬಚಾವೋ ಅಭಿಯಾನ ಯಶಸ್ವಿ: ಬೀದರ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಸುಸ್ಥಿರ ಕೃಷಿ ಜಾಗೃತಿ?