Home » ಲೈವ್ ನ್ಯೂಸ್ » 19 ರಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರಿಂದ ದೂರುಗಳ ವಿಚಾರಣೆ

19 ರಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರಿಂದ ದೂರುಗಳ ವಿಚಾರಣೆ

Facebook
X
WhatsApp
Telegram

ಬೀದರ.17.ಜೂನ್.26: ಬೀದರ ಜಿಲ್ಲೆಯಲ್ಲಿ ಕರ್ನಾಟಕ ಉಪಲೋಕಾಯುಕ್ತ-2 ಹಾಗೂ ನ್ಯಾಯಮೂರ್ತಿಗಳಾದ ಗೌರಾವಾನ್ವಿತ ಶ್ರೀ ಬಿ.ವೀರಪ್ಪ ಅವರು ಜಿಲ್ಲೆಯಲ್ಲಿ ಎರಡು ದಿನ ಪ್ರವಾಸ ಕೈಗೊಳ್ಳಲಿದ್ದಾರೆ, 2026ರ ಜೂನ್ 19 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ಬೀದರ ಪೂಜ್ಯ ಶ್ರೀ ಚನ್ನಬಸವ ಪಟ್ಟದೇವರ ರಂಗಮoದಿರದಲ್ಲಿ ದೂರುದಾರರಿಂದ ದಾಖಲಾಗಿರುವ ದೂರುಗಳ ವಿಚಾರಣೆ ನಡೆಸಲಿದ್ದಾರೆ ಎಂದು ಕಲಬುರಗಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಸಿ.ಸಿದ್ದರಾಜು ಅವರು ತಿಳಿಸಿದ್ದಾರೆ.

     ಸಾರ್ವಜನಿಕರು ಈಗಾಗಲೆ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಿಸಿರುವ ದೂರುಗಳಿಗೆ ಸಂಬAಧಿಸಿದAತೆ ವಿಚಾರಣೆ ಹಿನ್ನೆಲೆ ದೂರುದಾರರಿಗೆ ಹಾಗೂ ಎದುರುದಾರ ಸರ್ಕಾರಿ ನೌಕರರಿಗೆ ನೊಟೀಸ್‌ಗಳನ್ನು ಜಾರಿ ಮಾಡಲಾಗಿದ್ದು, ಎಲ್ಲಾ ದೂರುದಾರರು 2026ರ ಜೂನ್ 19 ರಂದು ತಾವು ನೀಡಿರುವ ದೂರಿಗೆ ಸಂಬAಧಿಸಿದ ಎಲ್ಲಾ ಸೂಕ್ತ ದಾಖಲೆಗಳೊಂದಿಗೆ ಗೌರವಾನ್ವಿತರ ಸಭೆಗೆ ಸಮಯಕ್ಕೆ ಸರಿಯಾಗಿ ಹಾಜರಾಗಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದೆ.

     ಸಭೆಯಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರು ದೂರುಗಳ ಕುರಿತು ವಿಚಾರಣೆಗಳು ಕೈಕೊಳ್ಳುವ ಸಭೆಯಾಗಿರುವುದರಿಂದ ಅಂದು ಗೌರವಾನ್ವಿತರು ಸಾರ್ವಜನಿಕರಿಂದ ಯಾವುದೇ ರೀತಿಯ ದೂರುಗಳನ್ನು ಸ್ವೀಕರಿಸುವುದಿಲ್ಲ, ಸಾರ್ವಜನಿಕರು ದೂರು ದಾಖಲಿಸುವದಿದ್ದಲ್ಲಿ, ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ, ಕೆ.ಎಚ್.ಬಿ ಕಾಲೋನಿ ಬಾಲಭವನ ಎದುರುಗಡೆ ಬೀದರ ಪಿನ್ ಕೋಡ್ 585 401ಗೆ ಹಾಜರಾಗಿ ದೂರು ಸಲ್ಲಿಸುವಂತೆ ಸೂಚಿಸಿದೆ.

     ಹೆಚ್ಚಿನ ಮಾಹಿತಿಗಾಗಿ ಎಸ್‌ಪಿ ಮೊ.ನಂ.9364062519, ಡಿಎಸ್‌ಪಿ ಮೊ.ನಂ.9364062571, ಪಿಐ-1 ಮೊ.ನಂ.9364062672, ಪಿಐ-2 ಮೊ.ನಂ.9364062673, ಪಿಐ-3 ಮೊ.ನಂ.9364062674, ಪಿಐ-4 ಮೊ.ನಂ.9364062675ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology