Home » ಲೈವ್ ನ್ಯೂಸ್ » ಕಾಣೆಯಾದ ಪುರುಷ ವ್ಯಕ್ತಿಯ ಪತ್ತೆಗೆ ಮನವಿ

ಕಾಣೆಯಾದ ಪುರುಷ ವ್ಯಕ್ತಿಯ ಪತ್ತೆಗೆ ಮನವಿ

Facebook
X
WhatsApp
Telegram

ಬೀದರ.17.ಜೂನ್.26 : ಬೀದರ ಜಿಲ್ಲೆಯ ಲಾಳವಾಡಿ 24 ವರ್ಷ ಪುರುಷ ಸೈಯದ ಇಬ್ರಾಹಿಂ ಶಾ @ ಪಿಂಟು ಬೀದರ ಗಾಂಧಿ ಗಂಜ ಪೊಲೀಸ್ ಠಾಣೆಯ ಕಾಣೆ ಪ್ರಕರಣದಲ್ಲಿ ದಿನಾಂಕ 16.05.2025 ರಂದು ಕಾಣೆಯಾದ ಪುರುಷ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ ಎಂದು ಬೀದರ್ ಗಾಂಧಿ ಗಂಜ ಪೊಲೀಸ್ ಠಾಣೆಯ ಠಾಣಾಧಿಕಾರಿ ಅವರು ತಿಳಿಸಿದ್ದಾರೆ.

     ಫಿರ್ಯಾದಿ ಶ್ರೀಮತಿ ಕರಿಶ್ಮಾ ಬೇಗಂ ಗಂಡ ಸೈಯದ ಇಬ್ರಾಹಿಂ ಶಾ @ ಪಿಂಟು, ವಯಸ್ಸು 24 ವರ್ಷ ಸಾ, ಲಾಳವಾಡಿ, ಬೀದರ ರವರು ಗಾಂಧಿ ಗಂಜ ಪೊಲೀಸ್ ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರು ಹಾಜರ ಪಡಿಸಿದ್ದು ಸಾರಾಂಶವೇನೆAದರೆ, ನನ್ನ ಗಂಡನಾದ ಸೈಯದ ಇಬ್ರಾಹಿಂ ಶಾ @ ಪಿಂಟು ಗಿಲಾವಾ ಕೆಲಸ ಮಾಡಿಕೊಂಡಿರುತ್ತಾರೆ.

     ಹೀಗಿರುವಾಗ ದಿನಾಂಕ 16/05/2025 ರಂದು ಅಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ನನ್ನ ಗಂಡ ಸೈಯದ ಇಬ್ರಾಹಿಂ ಶಾ @ ಪಿಂಟು ರವರು ಮನೆಯಿಂದ ಹೊರಗಡೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿ ರಾತ್ರಿ 12:40 ಗಂಟೆ ಸುಮಾರಿಗೆ ಫೋನ ಕರೆ ಮಾಡಿ 10 ನಿಮಿಷದಲ್ಲಿ ಮನೆಗೆ ಬರುತ್ತೇನೆ ಅಂತಾ ಹೇಳಿ ಕರೆ ಕಟ್ ಮಾಡಿ ಬೆಳಿಗ್ಗೆ ಆದರು ನನ್ನ ಗಂಡ ಮರಳಿ ಮನೆಗೆ ಬಾರದೇ ಇದ್ದಾಗ ಬೀದರ ನಗರದಲ್ಲಿ, ಬಗದಲ, ಮನ್ನಾಯಖೇಳಿ, ರಾಜೋಳಾ  ಹಾಗೂ ಇತರೆ ಕಡೆ ಹುಡುಕಾಡಲಾಗಿ ಎಲ್ಲಿಯು ಕಾಣಲಿಲ್ಲ. ನಮ್ಮ ಸಂಬAಧಿಕರಿಗೆ ಫೋನ ಮಾಡಿ ವಿಚಾರಿಸಿದರು ಕೂಡ ಎಲ್ಲಿಯು ಪತ್ತೆಯಾಗಲಿಲ್ಲ, ಪತ್ತೆ ಮಾಡಿ ಕೊಡಲು ವಿನಂತಿಸಿದ್ದಾರೆ.  

     ಕಾಣೆಯಾದ ವ್ಯಕ್ತಿಯ ವಿವರ : ಸೈಯದ ಇಬ್ರಾಹಿಂ ಶಾ @ ಪಿಂಟು ತಂದೆ ಸೈಯದ ಅಜೀಜ್ ಶಾ,  36 ವರ್ಷ, 5 ಫೀಟ್ 6 ಇಂಚು ಎತ್ತರ, ಗೊದಿ ಬಣ್ಣ, ಸಾದಾರಣ ಮೈಕಟ್ಟು ಹೊಂದಿದ್ದು, ಚಾಕಲೇಟ್ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟು ಧರಿಸಿದ್ದಾನೆ, ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾನೆ. ಬೀದರ ಗಾಂಧಿ ಗಂಜ ಪೊಲೀಸ್ ಠಾಣೆ ದೂ.ಸಂ.08482226233, 9480803448, ಬೀದರ ಕಂಟ್ರೋಲ ರೂಂ.08482 200396ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology