Home » ಲೈವ್ ನ್ಯೂಸ್ » ನಾನು ಹಿಂದೂ ಧರ್ಮಕ್ಕೆ ಲೆಕ್ಕ ಕೇಳ್ತಿಲ್ಲ, ಸಂಘದ ಲೆಕ್ಕ ಕೇಳ್ತಿದ್ದೇನೆ, ತಪ್ಪೇನಿದೆ: ಪ್ರಿಯಾಂಕ್ ಖರ್ಗೆ

ನಾನು ಹಿಂದೂ ಧರ್ಮಕ್ಕೆ ಲೆಕ್ಕ ಕೇಳ್ತಿಲ್ಲ, ಸಂಘದ ಲೆಕ್ಕ ಕೇಳ್ತಿದ್ದೇನೆ, ತಪ್ಪೇನಿದೆ: ಪ್ರಿಯಾಂಕ್ ಖರ್ಗೆ

Facebook
X
WhatsApp
Telegram

ಬೆಂಗಳೂರು.16.ಜೂನ್.26: ನಾನು ಹಿಂದೂ ಧರ್ಮದ ಲೆಕ್ಕ ಕೇಳಿಲ್ಲ. ಅರ್ ಎಸ್‌ಎಸ್ ಸಂಘದ ಲೆಕ್ಕ ಕೇಳಿದ್ದೇನೆ, ಇದರಲ್ಲಿ ತಪ್ಪೇನಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಒಬ್ಬ ಜವಾಬ್ಧಾರಿಯುತ ಸ್ಥಾನದಲ್ಲಿ ಕುಳಿತು ಲೆಕ್ಕ ಕೇಳುವುದು ತಪ್ಪಾ? ನಮ್ಮ ದೇಶದಲ್ಲಿ ಸಫಾಯಿ ಕರ್ಮಚಾರಿಗೂ ಲೆಕ್ಕವಿದೆ.

ಅಂತಹದ್ದರಲ್ಲಿ ನಿತ್ಯ ನೂರಾರು ಶಾಖಾ ಸಭೆಗಳನ್ನು ಮಾಡ್ತಾರೆ. ಪಥಸಂಚಲನ ಮಾಡ್ತಾರೆ. ಅವರ ಲೆಕ್ಕ ಕೇಳಬಾರದಾ? ಎಂದಿದ್ದಾರೆ.

ಇನ್ನು ಆರ್ ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗೆ ಲೆಕ್ಕ ಕೊಡಿ ಎಂದು ಪತ್ರ ಬರೆದಿದ್ದಕ್ಕೆ ಬಿಜೆಪಿ ನಾಯಕರು ಇದು ಹಿಂದೂಗಳ ವಿರುದ್ಧ ಮಾಡುತ್ತಿರುವ ಷಡ್ಯಂತ್ರ ಎಂದಿದ್ದಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ನನ್ನ ಪತ್ರದಲ್ಲಿ ಹಿಂದೂ ಎಂಬ ಪದ ಎಲ್ಲಿದೆ ಹೇಳಿ. ನಾನು ಧರ್ಮದ ವಿಚಾರ ಮಾತನಾಡಲ್ಲ. ಸಂಘದ ಲೆಕ್ಕ ಕೇಳಿದ್ದೇನೆ. ನಮ್ಮ ದೇಶದಲ್ಲಿ ಶ್ರೀರಾಮನೇ ಲೆಕ್ಕ ಕೊಡುತ್ತಾನೆ. ಅಂತಹದ್ದರಲ್ಲಿ ಶ್ರೀರಾಮನ ಹೆಸರು ಹೇಳಿಕೊಂಡು ರಾಜಕೀಯ ಮಾಡುವವರ ಲೆಕ್ಕ ಕೇಳಬಾರದಾ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು, ತಮ್ಮ ಪತ್ರಕ್ಕೆ ಮೋಹನ್ ಭಾಗವತ್ ನೀಡಿರುವ ಉತ್ತರ ಎಂದು ಹೇಳಲಾಗಿರುವ ವಿಡಿಯೋ ಕೂಡಾ ತಿರುಚಿದ ವಿಡಿಯೋ ಎಂದು ಅವರು ಹೇಳಿದ್ದಾರೆ. ನಾನು ಪತ್ರ ಬರೆದಿದ್ದು ನಿನ್ನೆ. ಆದರೆ ಮೋಹನ್ ಭಾಗವತ್ ಅವರು ಜೂನ್ 13 ರಂದು ನೀಡಿದ ಹೇಳಿಕೆಯನ್ನೇ ಇದಕ್ಕೆ ಉತ್ತರ ಎಂದು ತಿರುಚಲಾಗಿದೆ ಎಂದಿದ್ದಾರೆ.

ಸೋರ್ಚ್: ವೆಬ್ದುನಿಯಾ

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology