ಜೈ ಭವಾನಿ ರಂಗಭೂಮಿ ಕಲಾವಿದರ ಸಂಘದಿAದ ಸಾಂಸ್ಕೃತಿಕ ಜಾನಪದ ಸಂಭ್ರಮ
ಕಲೆಯೇ ನಮ್ಮ ಸಂಸ್ಕೃತಿಯ ಕನ್ನಡಿಯಾಗಿದೆ -ಡಾ. ಜಗನ್ನಾಥ್ ಹೆಬ್ಬಾಳೆ
ಬೀದರ್ ಮೇ 18ಃ ಜಾನಪದ ಸಂಗೀತವು ಸಮಾಜದ ಬದುಕಿನ ಪ್ರತಿಬಿಂಬವಾಗಿದ್ದು, ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಗ್ರಾಮೀಣ ಜೀವನದ ನೈಜ ಚಿತ್ರಣವನ್ನು ಜನತೆಗೆ ಪರಿಚಯಿಸುವ ಶಕ್ತಿಯುತ ಮಾಧ್ಯಮವಾಗಿದೆ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷರಾದ ಡಾ. ಜಗನ್ನಾಥ್ ಹೆಬ್ಬಾಳೆ ಅವರು ಹೇಳಿದರು.
ಸೋಮವಾರ ಬೆಳಿಗ್ಗೆ ಬೀದರ್ ನಗರದ ಸರಸ್ವತಿ ಶಾಲೆ ಹತ್ತಿರದಲ್ಲಿರುವ ಸವಿತಾ ಸಮುದಾಯ ಭವನದಲ್ಲಿ ನಡೆದ ಜೈ ಭವಾನಿ ರಂಗಭೂಮಿ ಕಲಾವಿದರ ಸಂಘ(ರಿ) ಚಿಟ್ಟಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರದಲ್ಲಿ 2025-26ನೇ ಸಾಲಿನ ಸಂಘ ಸಂಸ್ಥೆಗಳ ಧನ ಸಹಾಯದ ವಿಶೇಷ ಘಟಕ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ “ಜಿಲ್ಲಾ ಮಟ್ಟದ ರಂಗಭೂಮಿ ಕಲಾವಿದರ ಸಾಹಿತ್ಯ ಸಾಂಸ್ಕೃತಿಕ ಜಾನಪದ ಸಂಭ್ರಮ” ಕಾರ್ಯಕ್ರಮವು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಮಾತನಾಡುತ್ತಾ, ಕಲಾವಿದರು ವೇದಿಕೆಗೆ ಬಂದಾಗ ತಮ್ಮ ಕಲಾತಂಡದ ಉಡುಪುಗಳನ್ನು ಆಕರ್ಷಕವಾಗಿ ಹಾಗೂ ಸಂಪ್ರದಾಯಬದ್ಧವಾಗಿ ಧರಿಸಬೇಕು, ಕಲಾವಿದರೊಳಗಿನ ಭಿನ್ನಾಭಿಪ್ರಾಯ, ಟೀಕೆ ಟಿಪ್ಪಣಿಗಳನ್ನು ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಸಾಗಬೇಕೆಂದು ಸಲಹೆ ನೀಡಿದರು.
ನಮ್ಮೊಳಗಿನ ಏಕತೆಯೇ ಕಲೆಯನ್ನು ಉಳಿಸುವ ದೊಡ್ಡ ಶಕ್ತಿ. ಪರಸ್ಪರ ಪ್ರೋತ್ಸಾಹ ನೀಡಿದಾಗ ಮಾತ್ರ ಜಾನಪದ ಕಲೆಗಳು ಇನ್ನಷ್ಟು ಬೆಳೆಯುತ್ತವೆ ಎಂದು ಹೇಳಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ.ಸಂಜೀವಕುಮಾರ್ ಅತಿವಾಳೆ ಅವರು ಮಾತನಾಡಿ, ಗಡಿ ಜಿಲ್ಲೆ ಬೀದರನಲ್ಲಿ ವೈವಿಧ್ಯಮಯ ಕಲೆ, ಸಂಸ್ಕೃತಿ ಹಾಗೂ ಪ್ರತಿಭಾವಂತ ಕಲಾವಿದರ ತಾಣವಾಗಿದ್ದು, ಇಲ್ಲಿ ಅನೇಕ ರೀತಿಯ ಜಾನಪದ, ಸಾಂಸ್ಕೃತಿಕ ಹಾಗೂ ಪರಂಪರೆಯ ಕಲೆಯನ್ನು ಉಳಿಸಿಕೊಂಡು ಬಂದಿರುವ ಕಲಾವಿದರು ಇದ್ದಾರೆ ಎಂದು ಅವರು ಹೇಳಿದರು.
ಕಲಾವಿದರಿಗೆ ಲಭಿಸಿರುವ ಪ್ರಶಸ್ತಿಗಳು, ಸನ್ಮಾನಗಳು, ಭಾಗವಹಿಸಿದ ಕಾರ್ಯಕ್ರಮಗಳ ವಿವರಗಳು ಹಾಗೂ ಪ್ರಮಾಣ ಪತ್ರಗಳನ್ನು ಸರಿಯಾದ ರೀತಿಯಲ್ಲಿ ದಾಖಲಾತಿ ಮಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು. ಇಂತಹ ದಾಖಲೆಗಳು ಮುಂದಿನ ದಿನಗಳಲ್ಲಿ ಕಲಾವಿದರಿಗೆ ಸರ್ಕಾರದಿಂದ ದೊರೆಯುವ ಮಾಶಾಸನ, ಸೌಲಭ್ಯಗಳು ಹಾಗೂ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ತುಂಬಾ ಅನುಕೂಲವಾಗುತ್ತವೆ ಎಂದು ಅಭಿಪ್ರಾಯ ಪಟ್ಟರು.
ಹಿರಿಯ ಸಾಹಿತಿ ಎಂ.ಜಿ.ದೇಶಪಾAಡೆ, ಎಂ.ಎಸ್.ಮನೋಹರ್, ಶಂಭುಲಿAಗ್ ವಾಲ್ದೊಡ್ಡಿ, ನಾಗರಾಜ್ ಕರ್ಪೂರ್ ಇತರರು ಮಾತನಾಡಿದರು, ಜೈ ಭವಾನಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷರಾದ ಶೇಷಪ್ಪಾ ಚಿಟ್ಟಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವ ಮುಖಂಡರ ಶೇಕ್ ಖಾಲೇದ್, ಇತರರು ವೇದಿಕೆ ಮೇಲಿದ್ದರು.
ಪ್ರಾರಂಭದಲ್ಲಿ ಸುಬ್ಬಣ್ಣ ಕರಕನಳ್ಳಿ ಸ್ವಾಗತಿಸಿದರು, ಸುನೀತಾ ಬಿಕ್ಲೆ ನಿರೂಪಿಸಿ, ದೇವಿದಾಸ್ ಚಿಮಕೋಡ ವಂದಿಸಿದರು.
ಭಾಗವಹಿಸಿದ ಕಲಾತಂಡಗಳು ಃ
ಕು. ಶ್ರೇಯಾ ಸುನೀಲ ತಂಡದಿAದ ನಾಡಗೀತೆ, ಶ್ರೀಮತಿ ಅರ್ಚನಾ ಸಂತೋಷ ಸ್ವಾಮಿ ತಂಡದಿAದ ಭಕ್ತಿ ಗೀತೆ, ಶ್ರೀಮತಿ ಶಾರದಾಬಾಯಿ ತಂಡದಿAದ ಲಮಾಣಿ ನೃತ್ಯ, ಶ್ರೀಮತಿ ಚಿನ್ನಮ್ಮ ಲಾಧಾ ತಂಡದಿAದ ಮಹಿಳಾ ಡೊಳ್ಳು ಕುಣಿತ, ಶ್ರೀಮತಿ ಜಗದೇವಿ ತಂಡದಿAದ ಪರಶುರಾಮ ನಾಟಕ, ಶ್ರೀಮತಿ ಜೂಲಿ ತಂಡದಿAದ ಜಾನಪದ ಗೀತೆ, ಉಮೇಶ ತಂಡದಿAದ ಹಲಗಿ ನೃತ್ಯ, ಶ್ರೀಮತಿ ಲಕ್ಷಿö್ಮÃ ತಂಡದಿAದ ಶ್ರೀಮತಿ ಮಾರ್ತಾ ನಾಗೇಶ ಕನ್ನಡ ಗೀತೆ, ಅಫ್ರಾಜ್ ಶೇರಿಕಾರ್ ತಂಡದಿದ ರಂಗಗೀತೆ, ಮಾರುತಿ ಅಲ್ಲಾಪೂರೆ ತಂಡದಿAದ ಮೊಹರಂ ಪದ, ರಾಚಯ್ಯಾ ಸ್ವಾಮಿ ತಂಡದಿAದ ಏಕಭಿನಯ ಪಾತ್ರ, ಮಾಡಿ ನೋಡುಗರ ಕಣ್ಮನ ಸೆಳೆದವು.
ಅದೇ ಸಂದರ್ಭದಲ್ಲಿ ಕಲಾವಿದರಾದ ಸುನೀಲ್ ಕಡ್ಡೆ, ಸಿದ್ದಲಿಂಗ, ಯಲ್ಲಾಲಿಂಗ, ಹಿರಿಯರು, ಮಹಿಳೆಯರು, ಮಕ್ಕಳು ಉಪಸ್ಥಿತರಿದ್ದರು.






Any questions related to ಜೈ ಭವಾನಿ ರಂಗಭೂಮಿ ಕಲಾವಿದರ ಸಂಘದಿoದ ಸಾಂಸ್ಕೃತಿಕ ಜಾನಪದ ಕಾರ್ಯಕ್ರಮ?