Home » ಲೈವ್ ನ್ಯೂಸ್ » ಲೆಕ್ಕ ಪರಿಶೋಧನೆ ಇಲಾಖಾ ಲೆಕ್ಕ ಪರಿಶೋಧಕರ ನೇಮಕ:ಐದು ದಿನದೊಳಗೆ ಲಿಖಿತ ಮಾಹಿತಿ ಸಲ್ಲಿಸಲು ಸೂಚನೆ

ಲೆಕ್ಕ ಪರಿಶೋಧನೆ ಇಲಾಖಾ ಲೆಕ್ಕ ಪರಿಶೋಧಕರ ನೇಮಕ:ಐದು ದಿನದೊಳಗೆ ಲಿಖಿತ ಮಾಹಿತಿ ಸಲ್ಲಿಸಲು ಸೂಚನೆ

Facebook
X
WhatsApp
Telegram

ಬೀದರ.22.ಫೆಬ್ರವರಿ.26:- ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ-1959 ಕಲಂ 63(1)ಕ್ಕೆ  ತಿದ್ದುಪಡಿಗೊಂಡಿರುವ ಅನುಸಾರ ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ, 1949 (1949 ರ ಕೇಂದ್ರ ಅಧಿನಿಯಮ 10) ರ ಮೂಲಕ ಆಡಳಿತ ನಡೆಸಲಾಗುತ್ತಿರುವ ಸಹಕಾರ ಬ್ಯಾಂಕುಗಳನ್ನು ಹೊರತುಪಡಿಸಿ, “ಪ್ರತಿಯೊಂದು ಸಹಕಾರ ಸಂಘವು ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರ ಮೂಲಕ ತನ್ನ ಲೆಕ್ಕಪತ್ರಗಳ ಲೆಕ್ಕಪರಿಶೋಧನೆಯನ್ನು ಮಾಡಿಸಿಕೊಳ್ಳುವುದಾಗಿ” ಶಾಸನವಾಗಿರುತ್ತದೆ.  ಆದ್ದುದರಿಂದ ಕಳೆದ ಎರಡು ವರ್ಷ ಸನ್ನದು ಲೆಕ್ಕಪರಿಶೋಧಕರು ಲೆಕ್ಕಪರಿಶೋಧನೆ ನಿರ್ವಹಿಸಿರುವ ಬೀದರಜಿಲ್ಲೆಯಎಲ್ಲಾ ಸಹಕಾರ ಸಂಘಗಳನ್ನು ಸನ್ 2025-26ನೇ ಸಾಲಿನ ಲೆಕ್ಕಪರಿಶೋಧನೆಯನ್ನುಕಡ್ಡಾಯವಾಗಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖಾ ನಿರ್ದೇಶಕರಿಂದಲೇ ನಿರ್ವಹಿಸಿಕೊಳ್ಳಬೇಕಾಗಿರುತ್ತದೆ.

ಕರ್ನಾಟಕ ಸೌಹಾರ್ದ ಸಹಕಾರ ಕಾಯ್ದೆ-1997ರ ಕಲಂ 33(1)ಕ್ಕೆ ತಿದ್ದುಪಡಿಗೊಂಡಿರುವ ಅನುಸಾರ ಅರ್ಬನ್ ಕೋಆಪರೇಟಿವ್ ಬ್ಯಾಂಕುಗಳನ್ನು ಹೊರತುಪಡಿಸಿ, “ಪ್ರತಿಯೊಂದು ಸಹಕಾರಿವು ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರ ಮೂಲಕ ತನ್ನ ಲೆಕ್ಕಪತ್ರಗಳ ಲೆಕ್ಕ ಪರಿಶೋಧನೆಯನ್ನು ಮಾಡಿಸಿಕೊಳ್ಳುವುದಾಗಿ ಶಾಸನವಾಗಿರುತ್ತದೆ.  ಆದ್ದುದರಿಂದ ಕಳೆದ ಎರಡು ವರ್ಷ ಸನ್ನದು ಲೆಕ್ಕಪರಿಶೋಧಕರು ಲೆಕ್ಕಪರಿಶೋಧನೆ ನಿರ್ವಹಿಸಿರುವ ಬೀದರ ಜಿಲ್ಲೆಯ ಎಲ್ಲಾ ಸೌಹಾರ್ದ ಸಹಕಾರಿಗಳನ್ನು ಸನ್ 2025-26ನೇ ಸಾಲಿನ ಲೆಕ್ಕಪರಿಶೋಧನೆಯನ್ನು ಕಡ್ಡಾಯವಾಗಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖಾ ನಿರ್ದೇಶಕರಿಂದ ನಿರ್ದೇಶಕರಿಂದಲೇ ನಿರ್ವಹಿಸಿಕೊಳ್ಳಬೇಕಾಗಿರುತ್ತದೆ.

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ-1959 ಕಲಂ 63(2) ಹಾಗೂ ಕರ್ನಾಟಕ ಸೌಹಾರ್ದ ಸಹಕಾರ ಕಾಯ್ದೆ-1997ರ ಕಲಂ 33(2)ರನ್ವಯ ತಮ್ಮ ಸಹಕಾರ/ಸೌಹಾರ್ದ ಸಹಕಾರಿಗಳಿಗೆ
ಸನ್ 2025-26ನೇ ಸಾಲಿನ ಲೆಕ್ಕ ಪರಿಶೋಧನೆಗಾಗಿ ಇಲಾಖಾ ಲೆಕ್ಕ ಪರಿಶೋಧಕರನ್ನು ನೇಮಿಸಲಾಗುವುದು. ಈ ಕುರಿತು ನಿಮ್ಮ ಹೇಳಿಕೆ /ಮಾಹಿತಿ ಏನಾದರೂ ಇದ್ದಲ್ಲಿ ಈ ಪತ್ರ ತಲುಪಿದ 05 ದಿನದೊಳಗೆ ಲಿಖಿತವಾಗಿ ಉಪ ನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಉಪ ನಿರ್ದೇಶಕರ ಕಛೇರಿ, ಬೀದರ ಎಲ್.ಐ.ಜಿ-124 ಕೆ.ಎಚ್.ಬಿ.ಕಾಲೋನಿ, ಬೀದರ-585401 ರವರಿಗೆ ಮಾಹಿತಿ ಸಲ್ಲಿಸಲು ತಿಳಿಸಿದೆ. ಇಲ್ಲವಾದಲ್ಲಿ ತಮ್ಮ ಸಹಮತಿ ಇರುವುದು ಎಂದು ಪರಿಗಣಿಸಿ, ನಿಮ್ಮ ಸಹಕಾರ/ಸೌಹಾರ್ದ ಸಂಘಕ್ಕೆ ಲೆಕ್ಕಪರಿಶೋಧನೆ ನಿರ್ವಹಿಸಲು ಇಲಾಖಾ ವತಿಯಿಂದ ಲೆಕ್ಕಪರಿಶೋಧಕರನ್ನು ನೇಮಿಸಲಾಗುವುದೆಂದು ಬೀದರ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology