Home » ಲೈವ್ ನ್ಯೂಸ್ » 4,699 ಹುದ್ದೆಗಳ ಭರ್ತಿಗೆ ಕರ್ನಾಟಕ KEA ಅಧಿಸೂಚನೆ ಪ್ರಕಟ!

4,699 ಹುದ್ದೆಗಳ ಭರ್ತಿಗೆ ಕರ್ನಾಟಕ KEA ಅಧಿಸೂಚನೆ ಪ್ರಕಟ!

ಬೆಂಗಳೂರು.01.ಸೆಪ್ಟೆಂಬರ.26: ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬರೋಬ್ಬರಿ 4,699 ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಭರ್ಜರಿ ಸಿದ್ಧತೆ ನಡೆಸಿದೆ. ಪದವಿ, ಪಿಯುಸಿ ಹಾಗೂ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲು ಅಧಿಕೃತ ಪ್ರಕಟಣೆ ಮಾಡಲಾಗಿದೆ.

ಈ ಸಂಬಂಧ ಅಧಿಸೂಚನೆಯು ಸೆಪ್ಟೆಂಬರ್ ತಿಂಗಳಲ್ಲಿ ಪ್ರಕಟವಾಗಲಿದ್ದು, ನವೆಂಬರ್ ಮತ್ತು ಡಿಸೆಂಬರ್ ಮಾಹೆಯಲ್ಲಿ ಲಿಖಿತ ಪರೀಕ್ಷೆಗಳನ್ನು ನಡೆಸಲು ಪ್ರಾಧಿಕಾರ ತೀರ್ಮಾನಿಸಿದೆ.

ಪದವಿ ಪೂರ್ಣಗೊಂಡವರಿಗೆ ಮುಖ ಹುದ್ದೆಗಳ ವಿವರ

ಲೆಕ್ಕ ಸಹಾಯಕರು (ರಾಜ್ಯ ಲೆಕ್ಕಪರಿಶೋಧನೆ ಇಲಾಖೆ) – 502
ವಾರ್ಡನ್ / ನಿಲಯ ಮೇಲ್ವಿಚಾರಕರು (ಹಿಂದುಳಿದ ವರ್ಗಗಳ/ಸಮಾಜ ಕಲ್ಯಾಣ ಇಲಾಖೆ) – 705+
ಗ್ರಾಮ ಪಂಚಾಯತಿ ಕಾರ್ಯದರ್ಶಿ & ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್-1) – 184
ಪ್ರಥಮ ದರ್ಜೆ ಸಹಾಯಕರು (ವಿವಿಧ ಇಲಾಖೆಗಳು) – 500ಕ್ಕೂ ಹೆಚ್ಚು
ವಾಣಿಜ್ಯ ತೆರಿಗೆ ಪರಿವೀಕ್ಷಕರು – 50
ಸಚಿವಾಲಯ ಸಹಾಯಕರು – 42
ಸಹಕಾರ ಸಂಘಗಳ ಲೆಕ್ಕಪರಿಶೋಧಕರು – 502.

ಪಿಯುಸಿ ಮಟ್ಟದ ಹುದ್ದೆಗಳು

ದ್ವಿತೀಯ ದರ್ಜೆ ಸಹಾಯಕರು (ವಾಣಿಜ್ಯ ತೆರಿಗೆ ಇಲಾಖೆ) – 590
ಗ್ರಾ.ಪಂ. ಕಾರ್ಯದರ್ಶಿ ಹಾಗೂ ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್-2) – 322
ದ್ವಿತೀಯ ದರ್ಜೆ ಸಹಾಯಕರು ( ಗ್ರಾಮೀಣಾಭಿವೃದ್ಧಿ ಇಲಾಖೆ) – 309
ಕಿರಿಯ ಲೆಕ್ಕ ಸಹಾಯಕರು – 223
ವಿವಿಧ ಇಲಾಖೆಗಳ ಎಸ್‌ಡಿಎ ಹುದ್ದೆಗಳು

ಡಿಪ್ಲೊಮಾ ತಾಂತ್ರಿಕ ಹುದ್ದೆಗಳು – 216
ಸಹಾಯಕ ನಗರ ಯೋಜಕರು (ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ) – 119
ಜೂನಿಯರ್ ಇಂಜಿನಿಯರ್ ಸಿವಿಲ್ – ಗ್ರೇಟರ್ ಬೆಂಗಳೂರು ಪ್ರಾಧಿಕಾರ/KHB/KRIDL ಇತ್ಯಾದಿ – 85
2 ಪರೀಕ್ಷೆಗಳು

ಪದವಿ ಮತ್ತು ಪಿಯುಸಿ ಮಟ್ಟದ ತಾಂತ್ರಿಕೇತರ ಹುದ್ದೆಗಳಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಗಳು-2021 ರಂತೆ ಪತ್ರಿಕೆ-1 (ಸಾಮಾನ್ಯ ಜ್ಞಾನ) ಮತ್ತು ಪತ್ರಿಕೆ-2 (ಸಂವಹನ/ವಿಷಯಾಧಾರಿತ) ಪರೀಕ್ಷೆಗಳು ನಡೆಯಲಿವೆ. ಡಿಪ್ಲೊಮಾ ತಾಂತ್ರಿಕ ಹುದ್ದೆಗಳಿಗೆ ಪತ್ರಿಕೆ-1 ಸಾಮಾನ್ಯ ಪತ್ರಿಕೆಯಾಗಿದ್ದು, ಪತ್ರಿಕೆ-2 ನಿರ್ದಿಷ್ಟ ವಿಷಯಾಧಾರಿತ ಪರೀಕ್ಷೆಯಾಗಿರಲಿದೆ. ಹೆಚ್ಚಿನ ವಿವರಗಳಿಗಾಗಿ ಮತ್ತು ಅಧಿಕೃತ ಅಧಿಸೂಚನೆಗಾಗಿ ಅಭ್ಯರ್ಥಿಗಳು

Source: KEA Web Portal

Author

ಪ್ರಮುಖ ಸುದ್ದಿ

Stock market

Astrology