ಅಗ್ನಿವೀರ್ ಸೇನಾ ಭರ್ತಿ ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೀಶ್ ಕೆ ಭೇಟಿ
ರಾಯಚೂರು.09.ಆಗಸ್ಟ್.25: ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ ಪ್ರಕ್ರಿಯೆಯು ಆಗಸ್ಟ್ 08ರಿಂದ ಆರಂಭವಾಗಿದ್ದು, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಸೇನಾ ಭರ್ತಿ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದರು. ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಅವರು, ಅಗ್ನಿವೀರ ಸೇನಾ ನೇಮಕಾರಿ ರಾಲಿಯ ಪ್ರಕ್ರಿಯೆ ಬಗ್ಗೆ ಸೇನಾ ಅಧಿಕಾರಿ ಎಆರ್‌ಓ ಮನೋಜ್ ಸೇರಿದಂತೆ ಇನ್ನಿತರ ಸೇನಾ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಆಗಸ್ಟ್ 08ರಿಂದ ಆರಂಭವಾಗಿ ಆಗಸ್ಟ್ 26ರವರೆಗೆ ನಡೆಯಲಿರುವ ಶಾರಿರೀಕ ದೇಹದಾರ್ಡ್ಯ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದ್ದು…