|

ಅಗ್ನಿವೀರ್ ಸೇನಾ ಭರ್ತಿ ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೀಶ್ ಕೆ ಭೇಟಿ

ರಾಯಚೂರು.09.ಆಗಸ್ಟ್.25: ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ ಪ್ರಕ್ರಿಯೆಯು ಆಗಸ್ಟ್ 08ರಿಂದ ಆರಂಭವಾಗಿದ್ದು, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಸೇನಾ ಭರ್ತಿ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಅವರು, ಅಗ್ನಿವೀರ ಸೇನಾ ನೇಮಕಾರಿ ರಾಲಿಯ ಪ್ರಕ್ರಿಯೆ ಬಗ್ಗೆ ಸೇನಾ ಅಧಿಕಾರಿ ಎಆರ್‌ಓ ಮನೋಜ್ ಸೇರಿದಂತೆ ಇನ್ನಿತರ ಸೇನಾ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಆಗಸ್ಟ್ 08ರಿಂದ ಆರಂಭವಾಗಿ ಆಗಸ್ಟ್ 26ರವರೆಗೆ ನಡೆಯಲಿರುವ ಶಾರಿರೀಕ ದೇಹದಾರ್ಡ್ಯ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದ್ದು ಎಲ್ಲ ಪ್ರಕ್ರಿಯೆಗಳು ಮುಕ್ತಾಯವಾಗುವವರೆಗೆ ಸೇನಾ ಅಧಿಕಾರಿಗಳಿಗೆ ರಾಯಚೂರ ಜಿಲ್ಲೆಯ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಸ್ಥಳದಲ್ಲಿದ್ದ ಆಯಾ ಸಮಿತಿಗಳ ಅಧ್ಯಕ್ಷರಿಗೆ ಮತ್ತು ಸದಸ್ಯ ಕಾರ್ಯದರ್ಶಿಗಳಿಗೆ ತಿಳಿಸಿದರು.

ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿ: ಸೇನಾ ಭರ್ತಿಗಾಗಿ ಈಗಾಗಲೇ ಬೇರೆ ಬೇರೆ ಜಿಲ್ಲೆಗಳ ಅಭ್ಯರ್ತಿಗಳು ರಾಯಚೂರಗೆ ಆಗಮಿಸುತ್ತಿದ್ದು, ಆಯಾ ಕಡೆಗೆ ಅವರಿಗೆ ಸರಿಯಾದ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಬೇಕು. ಕೃಷಿ ವಿವಿ ಆವರಣದ ಮುಖ್ಯ ರಸ್ತೆಯಲ್ಲಿ ಜನದಟ್ಟಣೆ ತಡೆದು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಸಂಬoಧಿಸಿದ ಅಧಿಕಾರಿಗಳು ಆಗಸ್ಟ್ 26ರವರೆಗೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಈ ವೇಳೆ ಸಹಾಯಕ ಆಯುಕ್ತರಾದ ಗಜಾನನ ಬಾಳೆ, ತಹಸೀಲ್ದಾರ ಅಮರೇಶ ಬಿರಾದಾರ, ಕೃಷ್ಣ ಶಾವಂತಗೇರಿ ಸೇರಿದಂತೆ ಇತರರು ಇದ್ದರು.

Similar Posts

Leave a Reply

Your email address will not be published. Required fields are marked *