Home » ಲೈವ್ ನ್ಯೂಸ್ » ಸಿಎಂ ಕಾರ್ಯಕ್ರಮ ಪೂರ್ವಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ‌ ‌ ‌

ಸಿಎಂ ಕಾರ್ಯಕ್ರಮ ಪೂರ್ವಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ    ಫೌಜಿಯಾ ತರನ್ನುಮ್,     ‌   ‌  ‌                             

ನಾಡಿನ ಭಕ್ತರಿಗೆ ಕೈಬೀಸಿ ಕರೆಯುತ್ತಿದೆ ಶ್ರೀ ಭೋಜಲಿಂಗೇಶ್ವರ ಮಠದ ವಿನೂತನ ಕಟ್ಟಡ ನಿರ್ಮಾಣ ಕಾರ್ಯ ಮುಗಿದು  ಲೋಕಾರ್ಪಣೆ ಸಿದ್ದಗೊಂಡಿದೆ.                        ‌            ‌   ‌  ‌ ‌   ‌             

ಚಿತ್ತಾಪೂರ:-  ತಾಲೂಕಿನ ಸೂಗೂರ ಎನ್ ಗ್ರಾಮದಲ್ಲಿ  ಸಚ್ಚಿದಾನಂದ     ನಿತ್ಯ ನಿರಂಜನ ಮೂರ್ತಿ ಸ್ವಯಂ ಸಿದ್ದ ಶರಣ   ಪವಾಡ ಪುರುಷ  ಸದ್ಗುರು ಶ್ರೀ ಬೋಜಲಿಂಗೇಶ್ವರರ ನೂತನ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ, ಮತ್ತು  ನೂತನವಾಗಿ  ಬೆಳ್ಳಿ ರಥೋತ್ಸವ ಚಾಲನೆ ಹಾಗೂ ಭವ್ಯವಾದ  ಕಲ್ಯಾಣ ಮಂಟಪ ಉದ್ಘಾಟನಾ ಸಮಾರಂಭದ  ಅಂಗವಾಗಿ ಏಪ್ರಿಲ್ 11, 2026ರಂದು ನಡೆಯಲಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸುಗೂರ ಎನ್ ಶ್ರೀಮಠದ ಸ್ಥಳ  ಪರಿಶೀಲಿಸಿದರು. ಈ ಕಾರ್ಯಕ್ರಮ ಸ್ಥಳದಲ್ಲಿ ನಡೆಯುತ್ತಿರುವ ಮೂಲಸೌಕರ್ಯ,ವ್ಯವಸ್ಥೆ ಹಾಗೂ ಭದ್ರತಾ ಸಿದ್ಧತೆಗಳನ್ನು ಅವಲೋಕಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು.ಇದೇ  ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ –  (CEO) ಶ್ರೀ ಭಂವರ್ ಸಿಂಗ್ ಮೀನಾ, ಐ.ಎ.ಎಸ್..
ಕಲಬುರಗಿ ಜಿಲ್ಲೆ
ಕಲಬುರಗಿ ಜಿಲ್ಲೆ.
ಪೋಲಿಸ್ ವರಿಷ್ಠಾಧಿಕಾರಿ, ಸೇಡಂ ಸಹಾಯಕ ಆಯುಕ್ತ  ಪೋಲಿಸ್ ವರಿಷ್ಠಾಧಿಕಾರಿ (SP)
ಶ್ರೀ ಅಡ್ಡೂರು ಶ್ರೀನಿವಾಸುಲು, ಭಾ.ಪೊ.ಸೇ. (IPS) .   ಡಿ.ವೈ ಎಸ್ ಪಿ  ಶಂಕರಗೌಡ ಪಾಟೀಲ.    ಚಿತ್ತಾಪೂರ ತಹಸೀಲ್ದಾರರಾದ   ನಾಗಯ್ಯ ಹಿರೇಮಠ,  ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಪಿಎಸ್‌ಐ ,  ವಾಡಿ ಪಿ.ಎಸ್ ಐ  ತಿರುಮಲ್ಲೆಶೈ‌. ಹಾಗೂ ಪಿಡಬ್ಲ್ಯೂಡಿ, ಪಿಆರ್‌ಇ, ಜೆಇಸ್ಕಾಂ ಇಲಾಖೆಯ ಇಂಜಿನಿಯರ್ ಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪೂರ್ವ ವಿಧಿಗಳು  ಹೀಗಿವೆ-  ಏಪ್ರಿಲ್
08/04/2026 ಬುಧವಾರ: ಜಲಾಧಿವಾಸ, ದಾನ್ಯಾಧಿವಾಸ (ಕುಂಭ ಮೆರವಣಿಗೆ)
ಏಪ್ರಿಲ್
09/04/2026 ಗುರುವಾರ: ಕ್ಷೀರಾಧಿವಾಸ, ಪುಷ್ಪಾಧಿವಾಸ, ಶಯನಾಧಿವಾಸ
ಏಪ್ರಿಲ್
10/04/2026 ಶುಕ್ರವಾರ: ಪ್ರಾಣಪ್ರತಿಷ್ಠಾಪನೆ ‌.  ಕಳಸಾರೋಹಣ. (ಕಲಾಸಾಹೋರಣ) .
   ಏಪ್ರಿಲ್
11/04/2026 ಶನಿವಾರ ಮಧ್ಯಾಹ್ನ 12:30: ಮುಖ್ಯಮಂತ್ರಿ ಕಾರ್ಯಕ್ರಮ ಜರುಗುವುದು. ಈ ಕಾರ್ಯಕ್ರಮದಲ್ಲಿ ಶ್ರೀ ಭೋಜಲಿಂಗೇಶ್ವರ ಸಿದ್ಧ ಸಂಸ್ಥಾನ  ಮಠದ  ಪೀಠಾದಿಪತಿಗಳಾದ ಪರಮ ಪೂಜ್ಯ ಶ್ರೀ ಶ್ರೀ ಹಿರಗಪ್ಪ ತಾತನವರು .ಮತ್ತು ಕಿರಿಯ ಪೀಠಾದಿಪತಿಗಳಾದ ಪರಮ ಪೂಜ್ಯ  ಅಭಿನವ  ಶ್ರೀ ಡಾ.ಕುಮಾರ ಭೋಜರಾಜರು   ದಿವ್ಯ ಸಾನಿಧ್ಯ ವಹಿಸಲಿದ್ದಾರೆ.   ನೂತನ ದೇವಸ್ಥಾನ ಉದ್ಘಾಟನೆ ಮತ್ತು ಕಾರ್ಯಕ್ರಮಕ್ಕೆ ರಾಜ್ಯದ  ಗೌರವಾನ್ವಿತ  ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ  ಸಿದ್ರಾಮಯ್ಯನವರು  ಆಗಮಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ವಹಿಸಲಿದ್ದಾರೆ. ಪ್ರಮುಖವಾಗಿ ಭೈರತಿ ಸುರೇಶ್, ರಾಮಲಿಂಗಾರೆಡ್ಡಿ, ಶರಣಪ್ರಕಾಶ ಪಾಟೀಲ. ಬಸವರಾಜ ಮತ್ತಿಮೂಡ. ಬಿ. ಜಿ. ಪಾಟೀಲ. ಅವಿನಾಶ್ ಜಾಧವ್. ಕನೀಜ್ ಪಾತೀಮಾ.  ಸೇರಿದಂತೆ ಹಲವಾರು ಸಂಪುಟ ದರ್ಜೆಯ ಸಚಿವರು. ಶಾಸಕರು. ಮತ್ತು ಮಂತ್ರಿಗಳು. ಈ ನಾಡಿನ ಅನೇಕ  ಗಣ್ಯರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಶರಣಬಸಪ್ಪ ದರ್ಶನಾಪೂರ, ಸತೀಶ್ ಜಾರಕಿಹೊಳಿ, ಶಿವರಾಜ್ ತಂಗಡಗಿ, ಜಮೀರ್ ಅಹ್ಮದ್ ಖಾನ್, ರಾಧಾಕೃಷ್ಣ ದೊಡ್ಡಮನಿ, ಜಿ. ಕುಮಾರ್ ನಾಯಕ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಉಪಸ್ಥಿತರಿರುವರು. ಈ ಕಾರ್ಯಕ್ರಮ ಅತ್ಯಂತ ಹೆಚ್ಚು ನಿಗಾ ವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಂಡು ಹೋಗಬೇಕು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ: ಶ್ರೀಮತಿ ಬಿ. ಫೌಜಿಯಾ ತರನ್ನುಮ್, ಐ.ಎ.ಎಸ್. ಅಧಿಕಾರಿಗಳು ತಿಳಿಸಿದರು. ಇದೇ ಸಂಧರ್ಭದಲ್ಲಿ –  ಮತ್ತು    ಹೆಚ್ಚುವರಿ ಜಿಲ್ಲಾಧಿಕಾರಿ (ADC): ಶ್ರೀ ರಾಯಪ್ಪ ಹುಣಸಗಿ ಕೆ.ಎ.ಎಸ್.  ಸೇರಿದಂತೆ ಸುಗೂರ ಎನ್ ಗ್ರಾಮದ ಮುಖಂಡರಾದ  ಶರಣಗೌಡ ಬೆನಕನಹಳ್ಳಿ.  ಪರ್ವತರೆಡ್ಡಿ ಪಾಟೀಲ.ಭೀಮರೆಡ್ಡಿ ಗೌಡ ಕುರಾಳ. ವಿಶ್ವನಾಥ ರೆಡ್ಡಿ ಪಾಟೀಲ. ಸಂಗಾರೆಡ್ಡಿ ಗೌಡ ಮಾಲಿ ಪಾಟೀಲ ‌ ಶರಣಗೌಡ ವಕೀಲರು.ನಿವೃತ್ತಿ ತಹಶಿಲ್ದಾರ ನಹಸಿಂಗ್ ರಾವ್. ಮಹಿಪಾಲ್ ರೆಡ್ಡಿ ಕರಣಗಿ. ಸಿದ್ದು ಗೌಡ ಬೆನಕನಹಳ್ಳಿ. ರಾಮರೆಡ್ಡಿಗೌಡ ಕೊಳ್ಳಿ.ಮಹಾದೇವ ರೆಡ್ಡಿ ತುಮಕೂರು. ಬಸವರಾಜ ಹಡಪದ ಸುಗೂರ ಎನ್.ಬಾಬು ಪಾಟೀಲ. ಪ್ರವೀಣ್ ಪಾಟೀಲ ತುಮಕೂರು. ಸಿದ್ದು ಗೌಡ  ಕುರಾಳ. ಶಂಕರಗೌಡ ಮಾಸ್ತರ ಯಾದಗಿರ. ರೆಡ್ಡಿ ಬಂದಳ್ಳಿ. ಸಾಬ್ಬಣ್ಣ ಬೇನಿಗಿಡ. ಮಲ್ಲಿಕಾರ್ಜುನ  ಹೊಳಮಾರಡಗಿ.ಸಾಬ್ಬಣ್ಣ ಹಂಗನಹಳ್ಳಿ.ಯಮನಪ್ಪ ತಳವಾರ.ಈರಪ್ಪ ಗೋಗಿ.ಶಂಕರ ಚವ್ಹಾಣ.ಶೇಖಪ್ಪ ವಾಲಿಕಾರ.ವಿರೂಪಾಕ್ಷಿ ಬಾವಿ. ಭಾಷುಮೀಯಾ ಬಂಟ್ನಳ್ಳಿ. ಮಹಿಬೂಬ. ಮೋಹನ್ ರಾಠೋಡ್ ಯಾದಗಿರ. ರಾಜು ರಾಠೊಡ್ ಅಲ್ಲಿಪೂರ್.  ಊರಿನ  ಗ್ರಾಮಸ್ಥರು. ಮತ್ತು ಸುತ್ತಮುತ್ತಲಿನ ಭಕ್ತರು  ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಎಂದು  ಶ್ರೀಮಠದ ಸಂದ್ಬಕ್ತರಾದ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದರು.

Author

ಪ್ರಮುಖ ಸುದ್ದಿ

Stock market

Astrology