ರಾಜ್ಯದ ಸಿ ಎಮ್ ಡಿ.ಕೆ ಶಿವುಕುಮಾರ ಅವರು ಹಡಪದ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಡಬಹುದೇ.? ಬಸವಕಲ್ಯಾಣ ತಾಲ್ಲೂಕಿನಲ್ಲಿ ಇರುವ ಶರಣ ಹಡಪದ ಅಪ್ಪಣ್ಣ ನವರ ಅರಿವಿನ ಮನೆ ಗವಿಯಲ್ಲಿ ಹಡಪದ ಅಪ್ಪಣ್ಣ ನವರ ಮೂರ್ತಿ ಸ್ಥಾಪನೆ ಕುರಿತು. ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ.
*ಕಲಬುರಗಿ*:- ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರು ಹಡಪದ ಸಮಾಜಕ್ಕೆ ನ್ಯಾಯ ದೊರಕಿಸಿಕೊಡುತ್ತಾರೆಯೇ ಎಂಬುದು ಸರ್ಕಾರದ ಮುಂಬರುವ ನಿರ್ಧಾರಗಳು ಮತ್ತು ರಾಜಕೀಯ ಇಚ್ಛಾಶಕ್ತಿಯನ್ನು ಅವಲಂಬಿಸಿದೆ. ಹಡಪದ ಸಮುದಾಯವು ದೀರ್ಘಕಾಲದಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತಾ ಬಂದಿದೆ.
ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರದಿಂದ ಸಮಾಜವು ನಿರೀಕ್ಷಿಸುತ್ತಿರುವ ಪ್ರಮುಖ ಅಂಶಗಳು ಹೀಗಿವೆ:ಮುಖ್ಯ ಬೇಡಿಕೆಗಳು ಮತ್ತು ನಿರೀಕ್ಷೆಗಳು: ಪರಿಶಿಷ್ಟ ಜಾತಿ (SC & ST) ಸೇರ್ಪಡೆ: ಹಡಪದ ಸಮಾಜವನ್ನು ಪರಿಶಿಷ್ಟ SC ಅಥವಾ ST ಪಂಗಡ ಜಾತಿಗೆ ಗೇ ಸೇರಿಸಬೇಕೆಂಬುದು ಸಮುದಾಯದ ದಶಕಗಳ ಪ್ರಮುಖ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಬೇಕಿದೆ. ೨೦೨೩ರಲ್ಲಿ ರಾಜ್ಯ ಬಿಜೆಪಿ ಸರ್ಕಾರ ಬಸವರಾಜ ಭೊಮ್ಮಾಯಿ ಜೀ ಅವರು ಹಡಪದ ಅಪ್ಪಣ್ಣ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಘೋಷಣೆ ಮಾಡಿ ಆದೇಶ ನೀಡಿದರು.
ಸಹ ಈಗೀನ ಮಾಜಿ ಮುಖ್ಯಮಂತ್ರಿ ಸಿ.ಎಮ್ ಸಿದ್ರಾಮಯ್ಯನವರು ಮೂರು ವರ್ಷಗಳ ಕಾಲ ಈ ನಿಗಮಕ್ಕೆ ಪೂರ್ಣಪ್ರಮಾಣದಲ್ಲಿ ಜಾರಿಗೆ ತಂದರು ಸಹ ಹಡಪದ ಅಪ್ಪಣ್ಣ ಸಮಾಜದ ನಿಗಮಕ್ಕೆ ನಯಾ ಪೈಸೆ ನೀಡದೇ ಇರುವುದು ವಿಪರ್ಯಾಸ ವಾಗಿದೆ. ಈಗಲಾದರೊ ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಡಿ.ಕೆ ಶಿವಕುಮಾರ್ ಜೀ ಅವರು ಮತ್ತು ರಾಜ್ಯದ ಉಪ ಮುಖ್ಯಮಂತ್ರಿ ಸನ್ಮಾನ್ಯ ಡಾ.ಜೀ ಪರಮೇಶ್ವರ ಜೀ ಅವರು ಈ ಸಮಾಜದ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ: ‘ಶಿವಶರಣ ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮ’ಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡಿ, ಸಮುದಾಯದ ಯುವಕರಿಗೆ ಸ್ವಯಂ ಉದ್ಯೋಗ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ವಿಸ್ತರಿಸಬೇಕಿದೆ.
ರಾಜಕೀಯ ಪ್ರಾತಿನಿಧ್ಯ: ಹಿಂದುಳಿದ ಮತ್ತು ಅತ್ಯಂತ ಸಣ್ಣ ಸಮುದಾಯವಾಗಿರುವ ಹಡಪದ ಸಮಾಜಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ನೀಡಬೇಕೆಂಬ ಒತ್ತಾಯವಿದೆ. ಸರ್ಕಾರದ ಮುಂದಿರುವ ಸವಾಲುಗಳು:ಮುಖ್ಯಮಂತ್ರಿಯವರು ಸಾರ್ವಜನಿಕವಾಗಿ “ಎಲ್ಲಾ ಸಮುದಾಯಗಳಿಗೂ ಸಮಾನ ನ್ಯಾಯ ಮತ್ತು ಅಭಿವೃದ್ಧಿ ಒದಗಿಸುವುದು ನಮ್ಮ ಗುರಿ” ಎಂದು ಹೇಳುತ್ತಾ ಬಂದಿದ್ದಾರೆ.
ಆದರೆ ರಾಜ್ಯದಲ್ಲಿ ಜಾತಿ ಗಣತಿ ವರದಿ ಜಾರಿಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿದ್ದು, ಅತ್ಯಂತ ಹಿಂದುಳಿದ ವರ್ಗಗಳಿಗೆ (MBCs- Most Backward Classes) ವಿಶೇಷ ಪ್ಯಾಕೇಜ್ ನೀಡುವ ಮೂಲಕ ನಮ್ಮ ಹಡಪದ ಸಮಾಜಕ್ಕೆ ನ್ಯಾಯ ಒದಗಿಸುವ ಅವಕಾಶ ಸರ್ಕಾರದ ಮುಂದಿದೆ. ಸಮುದಾಯದ ಮುಖಂಡರು ಮತ್ತು ಸ್ವಾಮೀಜಿಗಳು ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದು, ಹಾಗೇ ಬೀದರ ಜಿಲ್ಲೆಯ ಬಸವಕಲ್ಯಾಣದ ತ್ರಿಪುರಾಂತ ಕೆರೆ ಸಮೀಪವಿರುವ ಹಡಪದ ಅಪ್ಪಣ್ಣನವರ ಗವಿಯಲ್ಲಿ ಬಸವೇಶ್ವರ ದೇವಸ್ಥಾನದ ಪಂಚಕಮಿಟಿಯವರು ನಿಯಮ ಬಾಹಿರವಾಗಿ ಹಸ್ತಕ್ಷೇಪ ಮಾಡಿದ್ದಾರೆ ಇದರ ವಿರುದ್ಧವಾಗಿ ಈಗಾಗಲೇ ರಾಜ್ಯಾದ್ಯಂತ ಹೋರಾಟ ವ್ಯಾಪಕವಾಗಿ ನಡೆಯುತ್ತಿದೆ.
ಸಮಾಜದ ಪ್ರತಿಭಟನಾಕಾರರು ಈಗಾಗಲೇ ಆರೋಪಿಸಿದ್ದಾರೆ. ಅಪ್ಪಣ್ಣನವರ ಇತಿಹಾಸದ ಕುರುಹುಗಳನ್ನು ಅಳಿಸಿ, ಅನ್ಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವುದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಸಮಾಜದ ಸೇವಕ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮವಾಗಿ ಸ್ಥಾಪಿಸಿದ ಮೂರ್ತಿಗಳನ್ನು ತೇರವು ಮಾಡಿ, ಯಥಾಸ್ಥಿತಿ ಕಾಪಾಡಬೇಕು. ಗವಿಯಲ್ಲಿ ಹಡಪದ ಅಪ್ಪಣ್ಣನವರ ಮೂರ್ತಿಯನ್ನು ಪುನಃ ಪ್ರತಿಷ್ಠಾಪಿಸಿ. ಸ್ಥಳವನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ ಅಭಿವೃದ್ಧಿಪಡಿಸಬೇಕು. ಇತಿಹಾಸ ತಿರುಚಿದ ಪಂಚಕಮಿಟಿ ಮತ್ತು ರ್ನಿಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೇ ಬೀದರ ಜಿಲ್ಲೆಯ ಉಸ್ತುವಾರಿ ಸಚಿವರು ಈ ವಿಷಯಗಳ ಬಗ್ಗೆ ಮಾಹಿತಿ ಕಲೆ ಹಾಕಿ ಅಧಿಕಾರಿಗಳ ಜೊತೆಯಲ್ಲಿ ಹಾಗೂ ಸಮಾಜದ ಮುಖಂಡರ ನೇತೃತ್ವದಲ್ಲಿ ಈ ಬಗೆಹರಿಸಿ ನ್ಯಾಯ ಒದಗಿಸುವ ಮೂಲಕ ಬಸವಾದಿ ಕಾಯಕ ಶರಣರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿದರು. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಐತಿಹಾಸಿಕ ಮೌಲ್ಯಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸಹ ಈ ಕೆಲಸ ಆಮೆ ಗತಿಯಲ್ಲಿ ಸಾಗುತ್ತಿದೆ. ? ಸರ್ಕಾರದ ಮುಂಬರುವ ದಿನಗಳಲ್ಲಿ ಮುಂಗಾರು ಅಧಿವೇಶನ ಮತ್ತು ಬಜೆಟ್ ಹಂಚಿಕೆ ಹಾಗೂ ಕಲ್ಯಾಣ ನಾಡಿನಲ್ಲಿ ಇರುವ ಶರಣ ಹಡಪದ ಅಪ್ಪಣ್ಣ ನವರ ಗವಿಯ ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಡಿ.ಕೆ. ಶಿವಕುಮಾರ್ ಅವರು ಹಡಪದ ಸಮಾಜದ ಬೇಡಿಕೆಗಳಿಗೆ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಎಂದು ಸಮಾಜದ ಸೇವಕ – ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಸಮಾಜದ ಸಂಘಟನೆ ಕುರಿತು ಮೆಲುಕು ಹಾಕುವ ಮೂಲಕ ಮಾತನಾಡಿದರು.





Any questions related to ರಾಜ್ಯದ ಸಿ ಎಮ್ ಡಿ.ಕೆ ಶಿವುಕುಮಾರ ಅವರು ಹಡಪದ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಡಬಹುದೇ.? ?