Home » ಲೈವ್ ನ್ಯೂಸ್ » ಉ.ಚು. ನಂತರ ವಿಧಾನಸಭೆ ಬಲಾಬಲ:

ಉ.ಚು. ನಂತರ ವಿಧಾನಸಭೆ ಬಲಾಬಲ:

Facebook
X
WhatsApp
Telegram

ಬೆಂಗಳೂರು.05.ಏಪ್ರಿಲ್.26: ರಾಜ್ಯದಲ್ಲಿ ಉಪ ಚುನಾವಣೆನಂತೆರ್ ಶೃಂಗೇರಿ ಅಂಚೆಮತಗಳ ಮರುಎಣಿಕೆ ಹಾಗೂ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣಾ ಫಲಿತಾಂಶಗಳಿಂದಾಗಿ ರಾಜ್ಯ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಹಾಗೂ ವಿಪಕ್ಷ ಬಿಜೆಪಿಯ ಬಲಾಬಲದಲ್ಲಿ ಸ್ವಲ್ಪ ಬದಲಾವಣೆ ಕಾಣುಬರುತ್ತಿದೆ.

ಕಾಂಗ್ರೆಸ್‌ 134, ಬಿಜೆಪಿ 63, ಜೆಡಿಎಸ್‌ 18

ವಿನಯ್ ಕುಲಕರ್ಣಿ, ರಾಜೇಗೌಡ ಸ್ಥಾನ ತೆರವು:
ಆದರೆ, ಧಾರವಾಡ ಕ್ಷೇತ್ರದಿಂದ ಗೆದ್ದಿದ್ದ ವಿನಯ್ ಕುಲಕರ್ಣಿ ಶಾಸಕ ಸ್ಥಾನವು ನ್ಯಾಯಾಲಯದ ಆದೇಶದಿಂದ ರದ್ದಾಗಿದ್ದು, ಇದರಿಂದ ಒಂದು ಸ್ಥಾನವನ್ನು ಕಾಂಗ್ರೆಸ್‌ ಕಳೆದುಕೊಂಡಿದೆ. ಜತೆಗೆ ಶೃಂಗೇರಿಯಿಂದ ಗೆದ್ದಿದ್ದ ಟಿ.ಡಿ. ರಾಜೇಗೌಡ ಅವರು ಮರು ಎಣಿಕೆಯಿಂದ ಸೋತಿದ್ದು, ಒಟ್ಟು ಎರಡು ಸ್ಥಾನವನ್ನು ಕಾಂಗ್ರೆಸ್‌ ಕಳೆದುಕೊಂಡಂತಾಗಿದೆ. ಹೀಗಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಬಲವು 134ಕ್ಕೇ ಬಂದು ನಿಲ್ಲಲಿದೆ.

ಬಿಜೆಪಿಗೆ ಒಂದು ಸ್ಥಾನ ಬಂಪರ್‌ :
ಸಾರ್ವತ್ರಿಕ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರವನ್ನು ಕಳೆದುಕೊಂಡಿದ್ದ ಬಿಜೆಪಿ ಪಾಲಿಗೆ ಅಂಚೆಮತಗಳ ಮರುಎಣಿಕೆ ವರದಾನವಾಗಿದ್ದು, ಬಿಜೆಪಿಯ ಜೀವರಾಜ್‌ ಗೆಲುವಿಗೆ ಕಾರಣವಾಗಿದೆ. ಇದರಿಂದ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯಬಲವು 62 ರಿಂದ 63ಕ್ಕೆ ಏರಿಕೆಯಾಗಿದೆ. ಈ ಹಿಂದೆ 2023ರ ಸಾರ್ವತ್ರಿಕ ಚುನಾವಣೆ ವೇಳೆ ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಗೆದ್ದಿದ್ದ ಕ್ಷೇತ್ರ ಕಾಂಗ್ರೆಸ್‌ ಪಾಲಾಗಿದ್ದರಿಂದ ಶೃಂಗೇರಿಯ ಗೆಲುವು ಕೂಡ ಬಿಜೆಪಿಗೆ ಲಾಭವೂ ಅಲ್ಲ, ನಷ್ಟವೂ ಅಲ್ಲ ಎಂಬಂತಾಗಿದೆ. ಸಾಲದ್ದಕ್ಕೆ ಬಸನಗೌಡ ಪಾಟೀಲ್‌ ಯತ್ನಾಳ್, ಎಸ್.ಟಿ.ಸೋಮಶೇಖರ್, ಶಿವರಾಮ್‌ ಹೆಬ್ಬಾರ್‌ ಅವರನ್ನು ಹೊರಗಿಟ್ಟಿರುವುದರಿಂದ ವಿಧಾನಸಭೆಯಲ್ಲಿ ಬಿಜೆಪಿಯ ಸದಸ್ಯಬಲ ಕುಸಿದಂತೆಯೇ ಆಗಿದೆ.

ಪಕ್ಷ ಸದಸ್ಯ ಬಲ
ಕಾಂಗ್ರೆಸ್ 134

ಬಿಜೆಪಿ 63

ಬಿಜೆಪಿಯಿಂದ ಹೊರಗುಳಿದವರು 03

ಜೆಡಿಎಸ್‌ 18

ಕೆಆರ್‌ಪಿಪಿ 01

ಎಸ್‌ಕೆಪಿ 01

ಸ್ವತಂತ್ರ 02

ಸ್ಪೀಕರ್‌ 01

ಖಾಲಿ (ವಿನಯ್ ಕುಲಕರ್ಣಿ) 01

ಒಟ್ಟು 224

ಇವತ್ತಿನ ವಿಧಾನಸಭೆಯಲ್ಲಿ 134 ಸದಸ್ಯಬಲ ಹೊಂದಿರುವ ಆಡಳಿತಾರೂಢ ಕಾಂಗ್ರೆಸ್‌, ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಗೆಲ್ಲುವ ಮೂಲಕ ತನ್ನ ಸದಸ್ಯ ಬಲವನ್ನು136ಕ್ಕೆ ಹೆಚ್ಚಿಸಿಕೊಂಡಿದೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology