Home » ಲೈವ್ ನ್ಯೂಸ್ » CBSC 10ನೇ ತರಗತಿ’ಗೆ ತೃತೀಯ ಭಾಷೆಗೆ ಬೋರ್ಡ್ ಪರೀಕ್ಷೆ ಇಲ್ಲ,

CBSC 10ನೇ ತರಗತಿ’ಗೆ ತೃತೀಯ ಭಾಷೆಗೆ ಬೋರ್ಡ್ ಪರೀಕ್ಷೆ ಇಲ್ಲ,

ಹೊಸ ದೆಹಲಿ.14.ಜಿಲ್ಯ.26: ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟ 10ನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ: ತೃತೀಯ ಭಾಷೆಗೆ ಬೋರ್ಡ್ ಪರೀಕ್ಷೆ ಇರಲ್ಲ,  CBSE ಮಂಡಳ್ಳಿ ಪ್ರಕಟಣೆ.

ದ್ರೀಯ ಫ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಅಡಿಯಲ್ಲಿ ಓದುತ್ತಿರುವ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೂ ಹಾಗೂ ಶಿಕ್ಷಕರಿಗೆ ಶಿಕ್ಷಣ ಮಂಡಳಿ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ. ಸಿಬಿಎಸ್‌ಇ ಮಂಡಳಿಯು ತೃತೀಯ ಭಾಷೆಗೆ ಸಂಬಂಧಿಸಿದ ಮೌಲ್ಯಮಾಪನ ಮಾರ್ಗಸೂಚಿಯನ್ನಾ ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಈ ಹೊಸ ನಿಯಮದ ಪ್ರಕಾರ, ಈ ವರ್ಷದಲ್ಲಿ ತೃತೀಯ ಭಾಷೆ (R3) ಯಾವುದೇ ಬೋರ್ಡ್ ಪರೀಕ್ಷೆ ಇರುವುದಿಲ್ಲ. ಬದಲಾಗಿ, ಶಾಲಾ ಮಟ್ಟದಲ್ಲಿಯೇ ಆಂತರಿಕವಾಗಿ ಮೌಲ್ಯಮಾಪನ ಇದ್ದೇ ಇರುತ್ತದೆ. ಹೊಸದೊಂದು ಭಾಷೆಯನ್ನಾ ಕಡ್ಡಾಯವಾಗಿ ಕಲಿಯುವುದರ ಜೊತೆಗೆ ವಿದ್ಯಾರ್ಥಿಗಳ ಮೇಲಿನ ಬೋರ್ಡ್ ಪರೀಕ್ಷೆ ಒತ್ತಡವನ್ನು ಕಡಿಮೆ ಮಾಡುವುದಕ್ಕಾಗಿ ಈ ನಿಯಮ ಜಾರಿಗೆ ತರಲಾಗಿದೆ.

ಈ ಮೂರು ಭಾಷೆಗಳ ಪೈಕಿ ಒಂದನ್ನು R3 ಅಂದರೆ ಮೂರನೇ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಮಂಡಳಿ ಸ್ಪಷ್ಟಪಡಿಸಿದೆ. ಈ ಭಾಷೆಗೆ ಸಿಬಿಎಸ್‌ಸಿಯಿಂದ ಯಾವುದೇ ಬೋರ್ಡ್ ಪರೀಕ್ಷೆ ನಡೆಯುವುದಿಲ್ಲ. ಹಾಗಂತ, ಸುಮ್ಮನ್ನೆ ನೆಗಲೆಟ್ ಮಾಡೋ ಹಾಗಿಲ್ಲ. ಏಕೆಂದರೆ ಶಾಲೆಗಳು ತಮ್ಮ ಹಂತದಲ್ಲಿಯೇ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾಡಲಿವೆ.

10ನೇ ತರಗತಿ ಪಾಸ್ ಮಾಡಲು R3 ಕಡ್ಡಾಯ

ಒಂದು ವೇಳೆ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಈ ತೃತೀಯ ಭಾಷೆಯಲ್ಲಿ ಫೇಲ್ ಆದರೆ, ಅವರನ್ನು ನೇರವಾಗಿ 10ನೇ ತರಗತಿಗೆ ಪಾಸ್‌ ಮಾಡಲಾಗುತ್ತದೆ. ಆದರೆ, 10ನೇ ತರಗತಿಯಲ್ಲಿರುವಾಗ ಆ ವಿದ್ಯಾರ್ಥಿ ಕಡ್ಡಾಯವಾಗಿ ತೃತೀಯ ಭಾಷೆಯಲ್ಲಿ ಪಾಸ್ ಆಗಲೇಬೇಕು.

10ನೇ ತರಗತಿ ವಿದ್ಯಾರ್ಥಿಗಳಿಗೆ ಇದು ಅತ್ಯಂತ ಕಟ್ಟುನಿಟ್ಟಿನ ನಿಯಮವಾಗಿದೆ. ಸಿಬಿಎಸ್‌ಇ ಸೆಕೆಂಡರಿ ಪಾಸ್ ಸರ್ಟಿಫಿಕೇಟ್ ಪಡೆಯಬೇಕಾದರೆ, 10ನೇ ತರಗತಿಯಲ್ಲಿ R3 ವಿಷಯದಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಮೂರನೇ ಭಾಷೆಯಲ್ಲಿ ಫೇಲ್ ಆದರೆ, ಕೊನೆಗೆ ಪಾಸ್‌ ಆಗಿರುವ ಪ್ರಮಾಣಪತ್ರ ಸಿಗುವುದಿಲ್ಲ ಎಂಬುದನ್ನು ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕು.

ಇನ್ನೂ 10ನೇ ತರಗತಿಯಲ್ಲಿ ತೃತೀಯ ಭಾಷೆಯಲ್ಲಿ ಫೇಲ್ ಆಗುವ ವಿದ್ಯಾರ್ಥಿಗಳಿಗೆ ಮಂಡಳಿಯು ಮತ್ತೊಂದು ಅವಕಾಶವನ್ನು ಒದಗಿಸಿದೆ. ಬೋರ್ಡ್ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗುವ ಮುನ್ನವೇ ಇಂತಹ ವಿದ್ಯಾರ್ಥಿಗಳಿಗೆ ಮರು-ಮೌಲ್ಯಮಾಪನ ಅವಕಾಶವನ್ನು ನೀಡಲಾಗುವುದು ಎಂದು ಸಿಬಿಎಸ್‌ಇ ತಿಳಿಸಿದೆ. ಇದರ ಜೊತೆಗೆ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎನ್‌ಸಿಇಆರ್‌ಟಿ ತೃತೀಯ ಭಾಷೆ ಗೆ ಸಂಬಂಧಿಸಿದ ಕಲಿಕೆಗೆ ಬೇಕಾಗಿರುವ ಸಂಪನ್ಮೂಲಗಳನ್ನಾ ಎನ್‌ಸಿಇಆರ್‌ಟಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.

ಸಿಬಿಎಸ್‌ಇಯ ಈ ಹೊಸ ನಿಯಮವು ವಿದ್ಯಾರ್ಥಿಗಳಿಗೆ ಮೂರನೇ ಭಾಷೆಯನ್ನು ಕಲಿಯಲು ಪ್ರೋತ್ಸಾಹಿಸುವ ಜೊತೆಗೆ ಬೋರ್ಡ್ ಪರೀಕ್ಷೆಯ ಭಯವನ್ನಾ ದೂರ ಮಾಡಿದೆ. ಸರ್ಕಾರ ಭಾಷಾ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ಕಾರಣ, ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಲಭ್ಯವಿರುವ ಎನ್‌ಸಿಇಆರ್‌ಟಿ ನೀಡುವ ಕಲಿಕೆಯ ವಸ್ತುಗಳನ್ನಾ ಬಳಸಿಕೊಂಡು ಪರೀಕ್ಷೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಬೇಕು.

Author

ಪ್ರಮುಖ ಸುದ್ದಿ

Stock market

Astrology