ಆ. 20 ರಂದು ಕೊಪ್ಪಳ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ
ಕೊಪ್ಪಳ.18.ಆಗಸ್ಟ್25: 2025-26ನೇ ಸಾಲಿನ ಕೊಪ್ಪಳ ತಾಲೂಕಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಆಗಸ್ಟ್ 20 ರಂದು ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಯೊಂದಿಗೆ ಕ್ರೀಡಾಕೂಟವನ್ನು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಈ ಕ್ರೀಡಾ ಸ್ಪರ್ಧೆಗಳು ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿರುತ್ತವೆ. ಈ ಕ್ರೀಡಾಕೂಟದಲ್ಲಿ ಸಮವಸ್ತçದಾರಿ ಸೇವೆಗೆ ಸೇರಿದ, ರಕ್ಷಣಾಪಡೆ, ಅರೆ ರಕ್ಷಣಾ ಪಡೆ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಲ್ಲ. ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವ ವಯಸ್ಸಿನ ನಿರ್ಬಂಧವಿಲ್ಲ. ತಾಲೂಕು ಮಟ್ಟದಲ್ಲಿ ನಡೆಯುವ ಕ್ರೀಡೆಗಳಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ…