ಬೆಂಗಳೂರು.10.ಅ: ಉನ್ನತ ಶಿಕ್ಷಣ ಇಲಾಖೆಯ, ಸರ್ಕಾರಿ ಪದವಿ, ಇಂಜಿನಿಯರಿಂಗ್, ಐಟಿಐ ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ತರಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಈ ಸುದ್ದಿಗೆ ಸಂಬಂಧಿಸಿದ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ:
• ಪರೀಕ್ಷೆಗೆ ಲಿಂಕ್: ವಿದ್ಯಾರ್ಥಿಗಳ ಬಯೋಮೆಟ್ರಿಕ್ ಹಾಜರಾತಿಯನ್ನು ಅವರ ಮುಖ್ಯ ಪರೀಕ್ಷೆಯ ಹಾಜರಾತಿ ಅರ್ಹತೆಗೆ ಲಿಂಕ್ ಮಾಡಲು ಇಲಾಖೆ ಯೋಜಿಸುತ್ತಿದೆ.
• ಉದ್ದೇಶ: ವಿದ್ಯಾರ್ಥಿಗಳು ತರಗತಿಗಳಿಗೆ ಚಕ್ಕರ್ ಹಾಕಿ ಹೊರಗಡೆ ಸುತ್ತಾಡುವುದಕ್ಕೆ ಬ್ರೇಕ್ ಹಾಕುವುದು ಮತ್ತು ಕಾಲೇಜುಗಳಲ್ಲಿ ಶಿಸ್ತು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
• ವ್ಯಾಪ್ತಿ: ಈ ನಿಯಮವು ಕೇವಲ ಪದವಿ ಕಾಲೇಜುಗಳಿಗಷ್ಟೇ ಸೀಮಿತವಾಗಿರದೆ, ರಾಜ್ಯದ ಎಲ್ಲಾ ಸಾರ್ವಜನಿಕ ವಿಶ್ವವಿದ್ಯಾಲಯಗಳು, ಐಟಿಐ ಮತ್ತು ಇಂಜಿನಿಯರಿಂಗ್ ಕಾಲೇಜುಗಳಿಗೂ ಅನ್ವಯಿಸಲಿದೆ.
ನೀವು ನೀಡಿದ ಈ ಲೇಖನದ ಮುಂದಿನ ಭಾಗ ಅಥವಾ ಇದಕ್ಕೆ ಸಂಬಂಧಿಸಿದಂತೆ ಯಾವ ನಿರ್ದಿಷ್ಟ ಮಾಹಿತಿಯನ್ನು ತಿಳಿಯಲು ಬಯಸುತ್ತೀರಿ?
• ಈ ಯೋಜನೆಯ ಅನುಷ್ಠಾನದ ಪ್ರಸ್ತುತ ಸ್ಥಿತಿಯನ್ನು ತಿಳಿಯಬೇಕೇ?
• ಅಥವಾ ವಿದ್ಯಾರ್ಥಿಗಳಿಗೆ ಬೇಕಾಗುವ ಕನಿಷ್ಠ ಹಾಜರಾತಿ ನಿಯಮಗಳ ಬಗ್ಗೆ ಮಾಹಿತಿ ಬೇಕೇ?
ನಿಮ್ಮ ಅಗತ್ಯವನ್ನು ತಿಳಿಸಿದರೆ ಹೆಚ್ಚಿನ ವಿವರ ನೀಡಲು ಸಹಾಯವಾಗುತ್ತದೆ.
ರಾಜ್ಯದಲ್ಲಿ ಪ್ರತಿ ಒಂದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಬೈಲ್ ಆ್ಯಪ್ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಿರುವ ರಾಜ್ಯ ಸರ್ಕಾರ ಇದೀಗ ಸರ್ಕಾರಿ ವಿಶ್ವವಿದ್ಯಾಲಯಗಳು, ಪದವಿ, ಐಟಿಐ ಹಾಗೂ ಎಂಜಿ ನಿಯರಿಂಗ್ ಕಾಲೇಜುಗಳಲ್ಲೂ ವಿದ್ಯಾರ್ಥಿಗಳಿಗೆ ಬಯೋ ಮೆಟ್ರಿಕ್ ಹಾಜರಾತಿ ವ್ಯವಸ್ಥೆ ತರಲು ಚಿಂತನೆ.
ಈ ವ್ಯವಸ್ಥೆ ಜಾರಿಯಾದರೆ ಸಾರ್ವಜನಿಕ ವಿಶ್ವವಿದ್ಯಾಲಯಗಳು, ಕಾಲೇಜುಗಳ ವಿದ್ಯಾರ್ಥಿ ಗಳು ಅನಗತ್ಯವಾಗಿ ತರಗತಿಗಳಿಗೆ ಚಕ್ಕರ್ ಹೊಡೆಯುವುದು, ಮನೆಯಿಂದ ಕಾಲೇಜಿಗೆಂದು ಬಂದರೂ ಸ್ನೇಹಿತರೊಂದಿಗೆ ಸುತ್ತುವಂತಹ ಚಟುವಟಿಕೆಗಳಿಗೆ ಬ್ರೇಕ್ ಬೀಳಲಿದೆ. ಕೆಲ ವರ್ಷಗಳಿಂದ ಉನ್ನತಶಿಕ್ಷಣ ಇಲಾಖೆಯಲ್ಲಿ ಈ ಸಂಬಂಧಪ್ರಸ್ತಾವನೆ ಇದೆಯಾದರೂ ಅನುಷ್ಠಾನಗೊಂಡಿರಲಿಲ್ಲ.
ಇತ್ತೀಚೆಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಸಾಮಾನ್ಯ ಸಭೆಯಲ್ಲಿ ಈಗಾಗಲೇ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಇರುವ ಬಯೋ ಮೆಟ್ರಿಕ್ ಹಾಜರಾತಿಯನ್ನು ವಿವಿ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೂ ಜಾರಿಗೊಳಿಸುವ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಮುಂದಿನ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಎಲ್ಲಾ ಅಂದುಕೊಂಡಂತೆ ನಡೆದರೆ 2026-27ನೇ ಸಾಲಿನಿಂದಲೇ ಇದನ್ನು ಅನುಷ್ಠಾನಗೊಳಿಸಲು ಟೆಂಡರ್ ಆಹ್ವಾನಿಸಲಾಗುತ್ತದೆ. ಸಾಧ್ಯವಾಗದೆ ಇದ್ದರೆ ಮುಂದಿನ ಶೈಕ್ಷಣಿಕ ವರ್ಷದಿಂದಜಾರಿಗೆತರಲಾಗುತ್ತದೆ ಎಂಬುದು ಅಧಿಕಾರಿಗಳ ಹೇಳಿಕೆ.
ರಾಜ್ಯದಲ್ಲಿ ಸುಮಾರು 40 ಸಾರ್ವಜನಿಕ ವಿವಿಗಳು, 400ಕ್ಕೂ ಹೆಚ್ಚು ಪ್ರಥಮ ದರ್ಜೆ ಕಾಲೇಜುಗಳು, 280ಕ್ಕೂ ಹೆಚ್ಚು ಐಟಿಐ ಕಾಲೇಜುಗಳಿವೆ. ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿಯುವುದರೊಳಗೆ ಎಲ್ಲ ಪದವಿ ಕಾಲೇಜುಗಳಲ್ಲಿ ಬಯೋ ಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಇಲಾಖೆ ಸೂಚನೆ ನೀಡಲಿದೆ.
ಹೇಗಿರಲಿದೆ ಬಯೋಮೆಟ್ರಿಕ್?: ಸರ್ಕಾರಿ ಶಾಲಾ
ಮಕ್ಕಳಿಗೆ ‘ನಿರಂತರ’ ಎಂಬ ಆ್ಯಪ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ. ಅದರಲ್ಲಿ ಮಕ್ಕಳ ಮುಖಚರ್ಯೆ ಅಳವಡಿಸಲಾಗಿದೆ. ಇದೇ ಮಾದರಿ ವ್ಯವಸ್ಥೆಯನ್ನು ವಿವಿ ಕಾಲೇಜುಗಳಲ್ಲೂ ಜಾರಿಗೊಳಿಸುವ ಕುರಿತು ಚರ್ಚೆ ನಡೆಯಿತಾದರೂ ಅಂತಿಮವಾಗಿ ಬೆರಳಚ್ಚು ಆಧಾರಿತ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಸಾಕು ಎನ್ನುವ ನಿರ್ಧಾರಕ್ಕೆ ಬರಲಾಗಿದೆ.
ಪ್ರತಿ ತರಗತಿ ಕೊಠಡಿಯ ಹೊರಗೆ ಬಯೋಮೆಟ್ರಿಕ್ ಯಂತ್ರ ಅಳವಡಿಸಿ ಅದರಲ್ಲಿ ಸಂಬಂಧಿಸಿದ ಎಲ್ಲಾ ವಿದ್ಯಾರ್ಥಿಗಳ ಬೆರಳು ಗುರುತು ಸಹಿತ ಹೆಸರು, ಸೆಕ್ಷನ್ ಮಾಹಿತಿಯನ್ನು ದಾಖಲಿಸಲಾಗುತ್ತದೆ.
ಪ್ರತಿ ದಿನ ವಿದ್ಯಾರ್ಥಿ ತರಗತಿಗೆ ಹಾಜರಾಗುವ ಮುನ್ನ ಅಥವಾ ನಿರ್ಗಮಿಸುವ ಮುನ್ನ ಪಂಚ್ ಮಾಡುವ ಸಂದರ್ಭದಲ್ಲಿ ಅದರ ಡೇಟಾ ಸರ್ವ‌್ರನಲ್ಲಿ ದಾಖಲಾಗಲಿದೆ. ವಿಶ್ವವಿದ್ಯಾಲಯ ಹಾಗೂ ಕಾಲೇಜಿನ ಹಿರಿಯ ಅಧಿಕಾರಿಗಳು ಅಥವಾ ತಾಂತ್ರಿಕ ತಂಡಕ್ಕೆ ದತ್ತಾಂಶ ಲಭ್ಯವಾಗುವ ರೀತಿಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ.
ಇನ್ನು, ಬಯೋಮೆಟ್ರಿಕ್ ಹಾಜರಾತಿ ಪದ್ಧತಿಯನ್ನು ಪರೀಕ್ಷಾ ವ್ಯವಸ್ಥೆಗೂ ಲಿಂಕ್ ಮಾಡುವ ಚಿಂತನೆ ನಡೆದಿದೆ. ಇದರಿಂದ ವಿದ್ಯಾರ್ಥಿ ನಿಗದಿತ ಪ್ರಮಾಣದ ಹಾಜರಾತಿ ಪಡೆಯುವುದು ಕಡ್ಡಾ ಯವಾಗಲಿದೆ. ಇಲ್ಲದಿದ್ದಲ್ಲಿ ವಿದ್ಯಾರ್ಥಿಗೆ ಹಾಲ್ ಟಿಕೆಟ್ ಕೂಡ ಲಭ್ಯವಾಗುವುದಿಲ್ಲ ಎಂದು ಸಭೆಯಲ್ಲಿದ್ದ ಮೂಲಗಳು ತಿಳಿಸಿವೆ.





Any questions related to ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ!?