Home » ಲೈವ್ ನ್ಯೂಸ್ » ನೊಂದ ಕುಟುಂಬಗಳಿಗೆ ಶಾಸಕ ಪ್ರಭು ಚವ್ಹಾಣ ಸಾಂತ್ವನ,

ನೊಂದ ಕುಟುಂಬಗಳಿಗೆ ಶಾಸಕ ಪ್ರಭು ಚವ್ಹಾಣ ಸಾಂತ್ವನ,

ಔರಾದ(ಬಿ).04. ಅ: ಇಂದು ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಅ.4ರಂದು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಇತ್ತೀಚೆಗೆ ಆಕಸ್ಮಿಕವಾಗಿ ಮೃತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.



ಕಪ್ಪಿಕೇರಿ ಗ್ರಾಮದ ಅರವಿಂದ ಮಲ್ಲಿಕಾರ್ಜುನ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕುಟುಂಬಸ್ಥರು ಮೃತರನ್ನು ನೆನೆಸಿಕೊಂಡು ತೀವ್ರ ಭಾವುಕರಾದರು. ಶಾಸಕರು ಮೃತರ ಪತ್ನಿ ಹಾಗೂ ಕುಟುಂಬಸ್ಥರನ್ನು ಸಮಾಧಾನಪಡಿಸಿ, ಧೈರ್ಯದಿಂದ ಇರುವಂತೆ ತಿಳಿಸಿದರು. ಕುಟುಂಬಕ್ಕೆ ಆಧಾರವಾಗಿದ್ದವರೇ ಅಗಲಿರುವುದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಒಬ್ಬಳು ಮಗಳಿದ್ದು, ಆಕೆಯ ಭವಿಷ್ಯದ ಬಗ್ಗೆಯೂ ಕುಟುಂಬಸ್ಥರು ತಮ್ಮ ನೋವನ್ನು ಶಾಸಕರೊಂದಿಗೆ ಹಂಚಿಕೊoಡರು.



ಕುಟುoಬಸ್ಥರಿಗೆ ಧೈರ್ಯ ತುಂಬಿದ ಪ್ರಭು ಬಿ.ಚವ್ಹಾಣ ಅವರು, ವಿಧಿಯಾಟದ ಮುಂದೆ ಏನು ನಡೆಯುವುದಿಲ್ಲ. ಈಗ ಮಗುವಿನ ಭವಿಷ್ಯದ ಕುರಿತು ಯೋಚಿಸಬೇಕು. ಮಗುವಿನ ಶಿಕ್ಷಣ, ಮದುವೆ ಸೇರಿದಂತೆ ಯಾವುದೇ ಸಮಸ್ಯೆ ಎದುರಾದರೂ ನಾನು ನಿಮ್ಮ ಕುಟುಂಬದೊoದಿಗೆ ಇರುತ್ತೇನೆ. ಸರ್ಕಾರದಿಂದಲೂ ಅಗತ್ಯ ನೆರವು ಕಲ್ಪಿಸಲು ಪ್ರಯತ್ನಿಸುತ್ತೇನೆ. ಧೈರ್ಯದಿಂದ ಇರಿ ಎಂದು ಹೇಳಿದರು.

ಇದೇ ವೇಳೆ ಜೊನ್ನಿಕೇರಿ ಗ್ರಾಮದ ಶಿವರಾಯ ಮಾದಪ್ಪ ಕುಣಿಕೇರೆ, ಶಂಬೆಳ್ಳಿ ಗ್ರಾಮದ ಶಿವರಾಜ ಎಕಲಾರೆ, ಧೂಪತಮಹಾಗಾಂವ ಗ್ರಾಮದ ಶಿವಾನಂದ ಸ್ವಾಮಿ ಹಾಗೂ ಬಾಬಳಿ ಗ್ರಾಮದ ಶರಣು ಬಾಬಶೆಟ್ಟಿ ಮಾಲೀಪಾಟೀಲ ಅವರ ಮನೆಗಳಿಗೆ ಭೇಟಿ ನೀಡಿದ ಪ್ರಭು ಬಿ.ಚವ್ಹಾಣ ಅವರು ಕುಟುಂಬಸ್ಥರೊoದಿಗೆ ಮಾತನಾಡಿ ದುಃಖದಲ್ಲಿ ಭಾಗಿಯಾದರು. ಮೃತರ ಕುಟುಂಬಗಳಿಗೆ ಧೈರ್ಯ ತುಂಬಿ, ಸಂಕಷ್ಟದ ಸಂದರ್ಭದಲ್ಲಿ ತಾವು ಕುಟುಂಬದೊAದಿಗೆ ಇರುವುದಾಗಿ ಭರವಸೆ ನೀಡಿದರು.

ಇನ್ನು ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಶೆಂಬೆಳ್ಳಿ ಗ್ರಾಮದ ಸಂತೋಷ ಹಾವಗಿರಾವ ಅವರನ್ನು ಭೇಟಿ ಮಾಡಿದ ಶಾಸಕರು, ಅವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ಕುಟುಂಬಸ್ಥರೊoದಿಗೆ ಮಾತನಾಡಿ ಚಿಕಿತ್ಸೆ ಹಾಗೂ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡರು.

ಜನಸೇವಕನಾಗಿ ನನ್ನನ್ನು ಆಯ್ಕೆ ಮಾಡಿದ ಜನತೆಯ ಕಷ್ಟ-ಸುಖಗಳಲ್ಲಿ ಪಾಲ್ಗೊಳ್ಳುವುದು ನನ್ನ ಜವಾಬ್ದಾರಿ. ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ನನ್ನನ್ನು ಭೇಟಿ ಮಾಡಿ. ಜನರಿಗೆ ಸಂಕಷ್ಟ ಎದುರಾದಾಗ ಅವರೊಂದಿಗೆ ನಿಲ್ಲುವ ಹಾಗೂ ಸಾಧ್ಯವಾದಷ್ಟು ನೆರವು ನೀಡುವ ಪ್ರಯತ್ನವನ್ನು ಸದಾ ಮುಂದುವರಿಸುತ್ತೇನೆ ಎಂದು ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಬಿರಾದಾರ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ಖಂಡೋಬಾ ಕಂಗಟೆ, ರಾಜಕುಮಾರ ಸೋರಾಳೆ, ನಾಗಶೆಟ್ಟಿ ಗಾದಗೆ, ಸಚಿನ ರಾಠೋಡ, ಪ್ರಕಾಶ ಜೀರ್ಗೆ, ಮಂಜು ಸ್ವಾಮಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Author

ಪ್ರಮುಖ ಸುದ್ದಿ

Stock market

Astrology