Home » ಲೈವ್ ನ್ಯೂಸ್ » ಕರ್ನಾಟಕ ಜಾನಪದ ವಿವಿ ಮುಂದೆ ಎಸ್‌ಎಫ್‌ಐ, ಡಿವೈಎಫ್‌ಐ ಪ್ರತಿಭಟನೆ.

ಕರ್ನಾಟಕ ಜಾನಪದ ವಿವಿ ಮುಂದೆ ಎಸ್‌ಎಫ್‌ಐ, ಡಿವೈಎಫ್‌ಐ ಪ್ರತಿಭಟನೆ.

ಶಿನ್ಗಾವಿ.19.ಸೆಪ್ಟೆಂಬರ್.26:ಹಾವೇರಿ ಜಿಲ್ಲಾ ಶಿನ್ಗಾವಿಯಲ್ಲಿರುವ ಕರ್ನಾಟಕ ಜಾನಪದ ವಿವಿ ಮುಂದೆ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಬೆಂಬಲಿಸಿ ಹಾಗೂ ವಿವಿಯ 8 ಕೋರ್ಸ್‌ಗಳನ್ನು ರದ್ದುಪಡಿಸಿದನ್ನು ವಿರೋಧಿಸಿ ಎಸ್‌ಎಫ್‌ಐ ಹಾಗೂ ಡಿವೈಎಫ್‌ಐ ಹಾವೇರಿ ಜಿಲ್ಲಾ ಸಮಿತಿಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಜಗತ್ತಿನ ಏಕೈಕ ಜಾನಪದ ವಿಶ್ವವಿದ್ಯಾಲಯವನ್ನು ಅಭಿವೃದ್ಧಿ ಮಾಡಬೇಕಾದ ಅಧಿಕಾರಿಗಳೇ ನಾಶ ಮಾಡಲು ಮುಂದಾಗಿರುವುದು ಖಂಡನೀಯ. ಏಕಾಏಕಿ 8 ಕೋರ್ಸ್‌ಗಳನ್ನು ರದ್ದು ಮಾಡುವುದು ಎಷ್ಟರಮಟ್ಟಿಗೆ ಸರಿಯಾ ಗಿದೆ. ಇದಕ್ಕೆಲ್ಲ ಯಾರು ಹೊಣೆ? ಸಂಬಂಧಿಸಿದ ಆಡಳಿತ ಮಂಡಳಿಯ ಕಾರ್ಯವೈಖರಿ ವಿಫಲವಾಗಿವೆ. ರಾಜ್ಯ ಸರ್ಕಾರದ ಯಾವುದೇ ಅಧಿಕಾರಿಗಳು ಗಮನ ನೀಡದೆ. ಅಭಿವೃದ್ಧಿ ಕುಂಠಿತವಾ ಗಿದೆ ಎಂದರು.

ಎಸ್‌ಎಫ್‌ಐ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ.ಎಸ್, ಮಾತ ನಾಡಿ, ಜಾನಪದ ವಿಶ್ವವಿದ್ಯಾಲಯ ಅಭಿವೃದ್ಧಿ ಕಾಣದೆ ಒಂದಿಲ್ಲ ಒಂದು ಸಮಸ್ಯೆಗಳ ಮಧ್ಯೆ ನರಳಾಡುತ್ತಿದೆ. ವಿದ್ಯಾರ್ಥಿಗಳು ದಾಖಲಾತಿ, ಪ್ರವೇಶ ಶುಲ್ಕ, ಅಂಕಪಟ್ಟಿ, ಪರೀಕ್ಷಾ ಶುಲ್ಕ, ಬಸ್‌ ಸಮಸ್ಯೆ, ಹಾಸ್ಟೆಲ್ ಸಮಸ್ಯೆ, ಅತಿಥಿ ಉಪನ್ಯಾಸಕರ ನೇಮಕಾತಿ, ವೇತನ ಹೀಗೆ ಅನೇಕ ಸಮಸ್ಯೆಗಳು ಗೊಂದಲದ ಗೂಡಾಗಿವೆ. ಎಂಟು ಕೋರ್ಸ್‌ ಮುಚ್ಚುತ್ತಿರುವ ಬೆಳವಣಿಗೆ ಖಂಡನೀಯ ಎಂದರು.

ಉಪನ್ಯಾಸಕರಿಗೆ ಯಾವುದೇ ನೋಟೀಸ್ ನೀಡದೇ ಬಿಡುಗಡೆ ಮಾಡುವುದು ಸರಿಯಲ್ಲ. ಕೂಡಲೇ ಅವರನ್ನು ಮುಂದವರೆಸಬೇಕು. ಬಾಕಿ ಉಳಿಸಿಕೊಂಡ ವೇತನವನ್ನು ಬಿಡುಗಡೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಗತಿಪರ ಚಿಂತಕ ಮಂಜುನಾಥ ಕರ್ಜಗಿ, ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಅರುಣ ಕುಮಾರ ನಗವತ ಮಾತನಾಡಿದರು.

Author

ಪ್ರಮುಖ ಸುದ್ದಿ

Stock market

Astrology