Home » ಲೈವ್ ನ್ಯೂಸ್ » ಆತ್ಮೀಯ ನನ್ನ ಆತಿಥಿ ಉಪನ್ಯಾಸಕ ಮಿತ್ರರೇ…ಮನದಾಳದ ಮಾತು!

ಆತ್ಮೀಯ ನನ್ನ ಆತಿಥಿ ಉಪನ್ಯಾಸಕ ಮಿತ್ರರೇ…ಮನದಾಳದ ಮಾತು!

ಆತ್ಮೀಯ ನನ್ನ ಆತಿಥಿ ಉಪನ್ಯಾಸಕ ಭವಿಷ್ ಮತ್ತು ಪ್ರಪಂಚದ *ಪಿರಮಿಡ್‌ಗಳನ್ನು* ಚಿತ್ರ ಪ್ರಪಂಚದಲ್ಲಿ ನೋಡಿದಾಗ  ನನಗೆ ಆಶ್ಚರ್ಯವಾಗುತ್ತದೆ. ಹೊರಗಿನಿಂದ ಅವು ಎಷ್ಟು ಅದ್ಭುತವಾಗಿ, ಭವ್ಯವಾಗಿ ಕಾಣುತ್ತವೆ. ಆದರೆ ಆ ಭವ್ಯತೆಯ ಒಳಗೆ ಅಡಗಿರುವ *ಇತಿಹಾಸ, ಶ್ರಮ, ತ್ಯಾಗ ಮತ್ತು ನೋವು ಯಾರ ಕಣ್ಣಿಗೂ ಕಾಣುವುದಿಲ್ಲ.*

*ಇಂದಿನ ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿ ವ್ಯವಸ್ಥೆ* ಯನ್ನು ನೋಡಿದಾಗ ಕೆಲವೊಮ್ಮೆ ನನಗೆ ಇದೇ *ಪಿರಮಿಡ್* ನೆನಪಾಗುತ್ತದೆ.


*UGC ಅರ್ಹತೆ ಎಂಬ* ಹೆಸರಿನಲ್ಲಿ ಒಂದು ಸುಂದರವಾದ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಹೊರಗಿನಿಂದ ನೋಡಿದಾಗ ಅದು ನ್ಯಾಯಯುತವಾದ, ಶಿಸ್ತಿನ ವ್ಯವಸ್ಥೆಯಂತೆ ಕಾಣಬಹುದು.
ಆದರೆ…


**ಆ *ಪಿರಮಿಡ್‌ನ ಒಳಗೆ ಏನಿದೆ?*
20, 25 ವರ್ಷಗಳಿಗೂ ಹೆಚ್ಚು ಕಾಲ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ *ಅನುಭವಿ ಶಿಕ್ಷಕರ ನೋವು, ಹತಾಶೆ ಇದೆ.


*ಅದೆಷ್ಟು ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಪಾಠ ಹೇಳಿ, ತಮ್ಮ ಕುಟುಂಬದ ಜವಾಬ್ದಾರಿಗಳನ್ನು ಹೊತ್ತು, ಅನೇಕ ಕಷ್ಟಗಳ ನಡುವೆಯೂ ಶಿಕ್ಷಣ ಸೇವೆಯನ್ನು ಮುಂದುವರಿಸಿದ* *ಶಿಕ್ಷಕರಿಗೆ ಇಂದು “ಬೋಧನೆಗೆ ಅನರ್ಹರು” ಎಂಬ* ರೀತಿಯಲ್ಲಿ ನೋಡುವ ಪರಿಸ್ಥಿತಿ ಬಂದಿರುವುದು ಎಷ್ಟು ನೋವಿನ ಸಂಗತಿ!
ಒಮ್ಮೆ ಯೋಚಿಸಿ ನೋಡಿ…
20–25 ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಬೋಧಿಸಿದ ಒಬ್ಬ ಶಿಕ್ಷಕ, ಇಷ್ಟು ವರ್ಷಗಳ ನಂತರ ಏಕಾಏಕಿ ಬೋಧನೆಗೆ ಅನರ್ಹನಾಗಿಬಿಡುತ್ತಾನೆಯೇ?
ಅವರ ವರ್ಷಗಳ ಅನುಭವ, ಸಾವಿರಾರು ವಿದ್ಯಾರ್ಥಿಗಳಿಗೆ ನೀಡಿದ ಜ್ಞಾನ, ಅವರ ಸಮರ್ಪಣೆ ಮತ್ತು ಸೇವೆ—ಇವೆಲ್ಲವನ್ನೂ **ಒಂದೇ ಅರ್ಹತಾ ಮಾನದಂಡದಿಂದ ಸಂಪೂರ್ಣವಾಗಿ ಅಳೆಯಬಹುದೇ?*
*UGC ಅರ್ಹತೆ ಪಡೆದವರನ್ನು ಮುಂದೆ Assistant Professor ಹುದ್ದೆಗೆ ಆಯ್ಕೆ ಮಾಡುವ ಅವಕಾಶವಿದೆ. ಅದು* *ಅವರ ಹಕ್ಕು ಮತ್ತು ಅವರ ಶೈಕ್ಷಣಿಕ ಪ್ರಗತಿಗೆ ಒಳ್ಳೆಯ ಮಾರ್ಗವೂ ಹೌದು. *
*ಆದರೆ ಆ ಸಹಾಯಕ ಅಧ್ಯಪಕರುಗಳ ಹುದ್ದೆಗೆ ಏರಲು ಸಾಧ್ಯವಿಲ್ಲವೆಂದಾಗ,*
ಈಗಾಗಲೇ 20–25 ವರ್ಷಗಳ ಸೇವೆ ಸಲ್ಲಿಸಿರುವ ಅನುಭವಿ Non-UGC ಶಿಕ್ಷಕರನ್ನು ಸಂಪೂರ್ಣವಾಗಿ ಬದಿಗೊತ್ತಿ, ಅವರ ಬದುಕಿನ ದಾರಿಯನ್ನೇ ಮುಚ್ಚುವುದು ನ್ಯಾಯವೇ?

**ಒಬ್ಬರನ್ನು ಮೇಲಕ್ಕೆತ್ತಲು ಮತ್ತೊಬ್ಬರನ್ನು ಕೆಳಗೆ ತಳ್ಳಬೇಕೇ?*
ಒಬ್ಬರ ಅವಕಾಶ ಮತ್ತೊಬ್ಬರ ಬದುಕಿನ ಅಂತ್ಯವಾಗಬೇಕೇ?**
*ಇಲ್ಲಿ ಪ್ರಶ್ನೆ UGC ವಿರುದ್ಧ Non-UGC ಅಲ್ಲ.**
*ಪ್ರಶ್ನೆ ಮಾನವೀಯತೆ, ನ್ಯಾಯ ಮತ್ತು ಅನುಭವಕ್ಕೆ ನೀಡಬೇಕಾದ ಗೌರವದ ಬಗ್ಗೆ.**
UGC ಅರ್ಹತೆ ಮುಖ್ಯ. ಶೈಕ್ಷಣಿಕ ಅರ್ಹತೆಗೂ ಅದರದೇ ಆದ ಮಹತ್ವವಿದೆ. ಆದರೆ *ಒಂದು ಪ್ರಮಾಣಪತ್ರದಿಂದ ಮಾತ್ರ ಒಬ್ಬ ಶಿಕ್ಷಕರ ಜ್ಞಾನ, ಬೋಧನಾ ಸಾಮರ್ಥ್ಯ, ಅನುಭವ, ಸಮರ್ಪಣೆ ಮತ್ತು ವರ್ಷಗಳ ಸೇವೆಯನ್ನು ಅಳೆಯಲು ಸಾಧ್ಯವೇ?*
***_ಶಿಕ್ಷಣ ನಮ್ಮನ್ನು ವಿನಯಶೀಲರನ್ನಾಗಿಸಬೇಕು; ಅಹಂಕಾರಿಗಳನ್ನಲ್ಲ.


ಅರ್ಹತೆ ನಮ್ಮನ್ನು ಜವಾಬ್ದಾರಿಯುತವಾಗಿಸಬೇಕು* ; *ಮತ್ತೊಬ್ಬರ ನೋವಿನ  ಬಗ್ಗೆ ನಿರ್ದಯಿಗಳನ್ನಲ್ಲ.
ಯಶಸ್ಸು ನಮ್ಮನ್ನು ಮಾನವೀಯರನ್ನಾಗಿಸಬೇಕು; ದುರ್ಬಲರನ್ನು ತುಳಿದು ಮೇಲೆ ಏರುವವರನ್ನಲ್ಲ.*
ನಿಜವಾದ *ವಿದ್ಯಾವಂತನು ಮತ್ತೊಬ್ಬರ ಸೋಲಿನಲ್ಲಿ ಸಂತೋಷಪಡುವುದಿಲ್ಲ* ._* *
ನಿಜವಾದ ಯಶಸ್ವಿ ವ್ಯಕ್ತಿ, ಈಗಾಗಲೇ ಕಷ್ಟದಲ್ಲಿರುವವನನ್ನು ಮತ್ತಷ್ಟು ಕೆಳಗೆ ತಳ್ಳಿ ತನ್ನ ಯಶಸ್ಸನ್ನು ಕಟ್ಟಿಕೊಳ್ಳುವುದಿಲ್ಲ.*
ಇಂದು UGC ಅರ್ಹತೆ ಪಡೆದವರು ತಮ್ಮ ಮುಂದಿನ ಹಂತವಾದ Assistant Professor ಹುದ್ದೆಯತ್ತ ಸಾಗಬೇಕಾದರೆ, ಅದು ಉತ್ತಮ ಸಂಗತಿ.


ಆದರೆ ಆ ಅವಕಾಶವನ್ನು ಪಡೆಯಲು ಅನುಭವಿ Non-UGC ಶಿಕ್ಷಕರ ಧ್ವನಿಯನ್ನು ಹತ್ತಿಕ್ಕಿ, ಅವರ ವರ್ಷಗಳ ಸೇವೆಯನ್ನು ಮರೆಮಾಚಿ, ಅವರ ಬದುಕಿನ ಮೇಲೆ ಹೊರೆ ಹಾಕಬೇಕಾಗಿಲ್ಲ.
ಅವಕಾಶಗಳನ್ನು ಹಂಚಿಕೊಳ್ಳುವ ವ್ಯವಸ್ಥೆ ನಿರ್ಮಿಸಬಹುದು.
ಅನುಭವಕ್ಕೆ ಗೌರವ ನೀಡಬಹುದು.


ಹೊಸ ಅರ್ಹತೆಗೆ ದಾರಿ ಮಾಡಿಕೊಡಬಹುದು.
ಹೊಸ ಪೀಳಿಗೆ ಬೆಳೆಯುವುದಕ್ಕಾಗಿ ಹಳೆಯ ಪೀಳಿಗೆಯನ್ನು ತುಳಿಯಬೇಕಾದ ಅವಶ್ಯಕತೆ ಇಲ್ಲ.


ನಾವು ನಮ್ಮ ಜೀವನದಲ್ಲಿ ಎಷ್ಟು ಎತ್ತರಕ್ಕೆ ಏರಿದ್ದೇವೆ ಎಂಬುದಕ್ಕಿಂತ, ನಮ್ಮಿಂದ ಎಷ್ಟು ಜನರ ಜೀವನದಲ್ಲಿ ಒಂದು ಸಣ್ಣ ನಗು ಮೂಡಿದೆ ಎಂಬುದೇ ನಮ್ಮ ನಿಜವಾದ ಯಶಸ್ಸಿನ ಅಳತೆ.
ಇಂದು ನಾವು ಮೇಲಿನ ಹಂತದಲ್ಲಿರಬಹುದು.


ನಾಳೆ ಪರಿಸ್ಥಿತಿ ನಮ್ಮನ್ನೇ ಕೆಳಗಿನ ಹಂತಕ್ಕೆ ತರಬಹುದು.
*ಅಧಿಕಾರ ಕೆಲವು ಕಾಲ ಸತ್ಯದ ಧ್ವನಿಯನ್ನು ಮೌನಗೊಳಿಸಬಹುದು* .
***ಹಣ ಕೆಲವು ಕಾಲ ನಿರ್ಧಾರಗಳನ್ನು ಪ್ರಭಾವಿಸಬಹುದು.
ಪ್ರಭಾವ ಮತ್ತು ಶಕ್ತಿ ಕೆಲವು ಕಾಲ ದುರ್ಬಲರ ಧ್ವನಿಯನ್ನು ಹತ್ತಿಕ್ಕಬಹುದು.**
ಆದರೆ…*
*ಸತ್ಯವನ್ನು ಶಾಶ್ವತವಾಗಿ ಮೌನಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ.*
*ಹಣ ಮಾತನಾಡಿದಾಗ ಸತ್ಯ ಮೌನವಾಗಬಹುದು.
*ಆದರೆ ಒಂದು ದಿನ ಸತ್ಯ ಮಾತನಾಡಲು ಪ್ರಾರಂಭಿಸಿದಾಗ, ಹಣ ಮತ್ತು ಅಧಿಕಾರದ ಧ್ವನಿಗಳು ಮೌನವಾಗಬೇಕಾಗುತ್ತದೆ* .*
ನಾವು ದೇವರನ್ನು ನಂಬುತ್ತೇವೆ.
ದೇವರ ಹೆಸರನ್ನು ಜಪಿಸುತ್ತೇವೆ.


ದೇವರ ಮುಂದೆ ಪ್ರಾರ್ಥಿಸುತ್ತೇವೆ.
ಆದರೆ ಒಂದು ಕ್ಷಣ ನಮ್ಮನ್ನೇ ನಾವು ಕೇಳಿಕೊಳ್ಳೋಣ:
ನಾವು ದೇವರನ್ನು ಪ್ರೀತಿಸುತ್ತೇವೆ… ಆದರೆ ದೇವರು ನಮ್ಮ ಕರ್ಮವನ್ನು ಹೇಗೆ ನೋಡುತ್ತಾನೆ?
ದೇವರು ಎಲ್ಲೆಡೆ ಇದ್ದಾನೆ ಎಂದು ನಾವು ನಂಬುವುದಾದರೆ, ಮತ್ತೊಬ್ಬರ ಕಣ್ಣೀರನ್ನೂ, ಅವರ ಮೌನದ ನೋವನ್ನೂ, ಅವರ ಅನ್ಯಾಯವನ್ನೂ ಮತ್ತು ನಮ್ಮ ಸಣ್ಣದೊಂದು ಸಹಾಯವನ್ನೂ ದೇವರು ನೋಡುತ್ತಿದ್ದಾನೆ ಎಂಬುದನ್ನೂ ನಂಬಬೇಕು.


ದೇವರ ಹೆಸರನ್ನು ಹೇಳುತ್ತಾ ಮತ್ತೊಬ್ಬ ಮನುಷ್ಯನ ನೋವನ್ನು ಮರೆತರೆ, ಆ ಭಕ್ತಿಯ ಅರ್ಥವೇನು?
***ಪದವಿ ಶಾಶ್ವತವಲ್ಲ.
ಅಧಿಕಾರ ಶಾಶ್ವತವಲ್ಲ.
ಹಣ ಶಾಶ್ವತವಲ್ಲ.


ಪ್ರಭಾವವೂ ಶಾಶ್ವತವಲ್ಲ.
ಕೊನೆಯಲ್ಲಿ ನಮ್ಮ ಜೊತೆ ಉಳಿಯುವುದು ನಮ್ಮ ಗುಣ, ನಮ್ಮ ಮಾನವೀಯತೆ ಮತ್ತು ನಮ್ಮ ಕರ್ಮ.**
ಕರ್ಮ ತಕ್ಷಣ ಹಿಂದಿರುಗದಿರಬಹುದು.*
ಆದರೆ ಕರ್ಮ ಎಂದಿಗೂ ಮರೆಯುವುದಿಲ್ಲ.
ನಾವು ಕಾಯಬೇಕಷ್ಟೇ.


ಆದ್ದರಿಂದ…
ನಿಮ್ಮ ಯಶಸ್ಸನ್ನು ಕಟ್ಟಿಕೊಳ್ಳಿ—ಆದರೆ ಮತ್ತೊಬ್ಬರ ಕಣ್ಣೀರಿನ ಮೇಲೆ ಅಲ್ಲ.


ಮೇಲಕ್ಕೆ ಏರಿ—ಆದರೆ ಮತ್ತೊಬ್ಬರನ್ನು ಕೆಳಗೆ ತಳ್ಳಿ ಅಲ್ಲ.
ಗೆದ್ದು—ಆದರೆ ಮತ್ತೊಬ್ಬರ ಬದುಕಿನಲ್ಲಿ ಸೋಲಿನ ಭಾವನೆ ಮೂಡಿಸಿ ಅಲ್ಲ.


ಅರ್ಹತೆ ಪಡೆಯಿರಿ—ಆದರೆ ಅದರ ಜೊತೆಗೆ ಮಾನವೀಯತೆಯನ್ನೂ ಬೆಳೆಸಿಕೊಳ್ಳಿ.
ಯಾಕೆಂದರೆ ಜೀವನದ ಅತ್ಯಂತ ದೊಡ್ಡ ಅರ್ಹತೆ ಯಾವುದೇ ಪ್ರಮಾಣಪತ್ರದಲ್ಲಿ ಬರೆದಿರುವುದಿಲ್ಲ.
ಅದು ನಮ್ಮ ನಡವಳಿಕೆಯಲ್ಲಿ, ನಮ್ಮ ಕರುಣೆಯಲ್ಲಿ ಮತ್ತು ನಮ್ಮಿಂದ ಮತ್ತೊಬ್ಬರ ಮುಖದಲ್ಲಿ ಮೂಡುವ ನಗುವಿನಲ್ಲಿ ಬರೆಯಲ್ಪಟ್ಟಿರುತ್ತದೆ.

ಸುಂದರವಾದ ಪಿರಮಿಡ್ ಕಟ್ಟುವುದು ದೊಡ್ಡ ಸಾಧನೆಯಲ್ಲ.
ಅದರ ಅಡಿಯಲ್ಲಿ ಯಾರ ಕಣ್ಣೀರು ಹೂತುಹೋಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದೇ ನಿಜವಾದ ಮಾನವೀಯತೆ.
ದೇವರು ಎಲ್ಲೆಡೆ ಇದ್ದಾನೆ.

ಸತ್ಯಕ್ಕೆ ತಡವಾಗಬಹುದು—ಆದರೆ ಸೋಲು ಇರುವುದಿಲ್ಲ.
ಕರ್ಮಕ್ಕೆ ಸಮಯ ಬೇಕಾಗಬಹುದು—ಆದರೆ ಅದು ಮರಳುತ್ತದೆ.
ಆದ್ದರಿಂದ, ಮತ್ತೊಬ್ಬರ ಬದುಕನ್ನು ಕತ್ತಲೆಗೆ ತಳ್ಳಿಕೊಂಡು ನಮ್ಮ ಬದುಕಿನಲ್ಲಿ ಬೆಳಕು ಹುಡುಕುವುದು ಸರಿಯೇ?

ಒಬ್ಬ ನಿಜವಾದ ನಾಯಕನ ಲಕ್ಷಣಗಳು ಯಾವುವು ಎಂಬ ಜಿಜ್ಞಾಸೆ ಅಷ್ಟೇ.


“ *ಒಡೆದು ಆಳು”* ಎಂಬುದು ನಿಕೃಷ್ಟ ಮನಸ್ಥಿತಿ.
ಸೇವಾ ಭದ್ರತೆ ಯಾರಿಗಾಗಿ?
ತನ್ನವರಿಗೆ ಮಾತ್ರವೇ? ಅರ್ಹತೆ ಇರುವವರಿಗೆ ಮಾತ್ರವೇ?
ಇಷ್ಟು ವರ್ಷಗಳ ಕಾಲ  *ತಮ್ಮ ಜೊತೆಯೇ* ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದವರನ್ನು “ಅನರ್ಹರು” ಎಂಬ ಪಟ್ಟಿಗೆ ಸೇರಿಸಿದ್ದಲ್ಲದೆ,
ಮುಂಗೈಗೆ ಸಿಹಿ ಮೆತ್ತಿದಂತೆ “ಶೈಕ್ಷಣಿಕ ಸಂಯೋಜಕರು” ಎಂಬ ತಾತ್ಕಾಲಿಕ ಹುದ್ದೆಯನ್ನು ಸೃಷ್ಟಿ ಮಾಡಿ,  ಅವರ ಸೇವೆಯನ್ನು ಕೇವಲ ಮೂರು ವರ್ಷಗಳ ಅವಧಿಗೆ ಸೀಮಿತಗೊಳಿಸಿ, ಅವರ ಸೇವಾ ಭದ್ರತೆಯ ಕುರಿತು ಯಾವುದೇ ಚಕಾರವೆತ್ತದೆ ಅಂದ  ನೋಡುವವರು ನಿಜವಾಗಿಯೂ ನಾಯಕರೇ ಎಂಬ ಅನುಮಾನ ಮೂಡಿತು..


ನಾಯಕತ್ವವೆಂದರೆ ಕೆಲವರ ಪರ ನಿಲ್ಲುವುದಲ್ಲ; ನ್ಯಾಯದ ಪರ ನಿಲ್ಲುವುದು.

ಅರ್ಹತೆಯ ಜೊತೆಗೆ ಅನುಭವಕ್ಕೂ ಗೌರವ ನೀಡುವುದು.
ವರ್ಷಗಳ ಸೇವೆ ಸಲ್ಲಿಸಿದವರ ಬದುಕಿನ ಭದ್ರತೆಯ ಬಗ್ಗೆಯೂ ಕಾಳಜಿ ವಹಿಸುವುದು.


ಇರಲಿ.
ಎಲ್ಲದಕ್ಕೂ ಸಮಯ ಉತ್ತರ ನೀಡುತ್ತದೆ.

ಯಾರ ಕಣ್ಣನ್ನು ತಪ್ಪಿಸಿದರೂ, ಕಾಣದ ಶಕ್ತಿಯ ಕಣ್ಣನ್ನು ತಪ್ಪಿಸಲು ಸಾಧ್ಯವಿಲ್ಲ.


*ಅರ್ಹತೆಯನ್ನು ಅಳೆಯಲು ಪರೀಕ್ಷೆ ಎಂಬ ಮಾನದಂಡ ಮಾತ್ರ ಪರಿಗಣಿಸಿ, ಶಿಕ್ಷಣದ ಬಜೆಟ್ ಅನುದಾನವನ್ನು ನಿರಂತರ ಕಡಿಮೆ ಆದ ಹಾಗೆಯೇ ಉಪನ್ಯಾಸಕರನ್ನು  ಅವರ ಒಳಗಡೆ ವಿಭಜಿಸಿ ಖಾಯಂ, ನೆಟ್ ಸ್ಲೆಟ್ ಇದ್ದವರು, 55 ಶೇಕಡಾಕ್ಕಿಂತ ಮೇಲೆ ಇದ್ದವರು/ ಇಲ್ಲದವರು ಹೀಗೆ ವ್ಯವಸ್ಥೆಯ ಮೂಲ ತರ್ಕಗಳನ್ನು ಪ್ರಶ್ನಿಸದಂತೆ ನಮ್ಮ ನಮ್ಮ ನಡುವೆಯೇ ಸಂಶಯಗಳನ್ನು ಕಂದಕಗಳನ್ನು ಉಂಟು ಮಾಡುವ ರಾಜಕೀಯ ಮನಕೆಡಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ನಡುವೆ ನಾವೇ Survival of the fittest ತರ್ಕಗಳಿಗೆ ಜೋತು ಬೀಳುವ ಮನಸ್ಥಿತಿಯ ಕುರಿತು ಕಳವಳ ಉಂಟಾಗುತ್ತಿದೆ.

Author

ಪ್ರಮುಖ ಸುದ್ದಿ

Stock market

Astrology