Home » ಲೈವ್ ನ್ಯೂಸ್ » ೩೭೧(ಜೆ) ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಸೆ.೦೭ ರಂದು ಕೊಪ್ಪಳದಲ್ಲಿ ಧರಣಿ ಸತ್ಯಾಗ್ರಹ

೩೭೧(ಜೆ) ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಸೆ.೦೭ ರಂದು ಕೊಪ್ಪಳದಲ್ಲಿ ಧರಣಿ ಸತ್ಯಾಗ್ರಹ

ಕೊಪ್ಪಳ, ೩- ಕಲ್ಯಾಣ ಕರ್ನಾಟಕಕ್ಕೆ ೩೭೧(ಜೆ) ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಸೆ.೦೭ ಸೋಮವಾರದಂದು ಕೊಪ್ಪಳದ ಅಶೋಕ ವೃತ್ತದ ಬಳಿ ಒಂದು ದಿನ ಸಾಂಕೇತಿಕ ಧರಣಿ ನಡೆಸಲು ನಿರ್ಧರಿಸಲಾಯಿತು.


ಗುರುವಾರ ಸಂಜೆ ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಕಲಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾ ಘಟಕ ಕೊಪ್ಪಳ ಹಮ್ಮಿಕೊಂಡಿದ್ದ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಕಲಾಣ ಕರ್ನಾಟಕದ ಏಳು ಜಿಲ್ಲೆಗಳ ಅಭಿವೃದ್ಧಿಯ ಹಿನ್ನಡೆ ಹಾಗೂ ೩೧೭(ಜೆ) ಸಮರ್ಪಕ ಅನುಷ್ಠಾನ , ನೇಮಕಾತಿ ಮತ್ತು ಬಡ್ತಿ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಆಗುತ್ತಿರುವ ತೊಂದರೆಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.


ಸೆ.೦೭ ರಂದು ಏಳು ಜಿಲ್ಲೆಗಳಲ್ಲಿ ಒಂದು ದಿನದ ಸಾಂಕೇತಿಕ ಧರಣಿ ಮತ್ತು ಸೆ.೧೭ ರಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಕೊಡಲು ನಿರ್ಧರಿಸಲಾಯಿತು.
ಸಭೆಯಲ್ಲಿ ಹಿರಿಯರಾದ ಅಲ್ಲಮಪ್ರಭು ಬೆಟ್ಟದೂರು, ಡಿಎಂ ಬಡಿಗೇರ, ಜಿಲಲಾಧ್ಯಕ್ಷ ಸಂತೋಷ ದೇಶಪಾಂಡೆ, ಕೇಂದ್ರ ಸಮಿತಿಯ ರಮೇಶ ತುಪ್ಪದ, ಶಿವಕುಮಾರ ಕುಕನೂರ, ಜಿಲ್ಲಾ ಮುಖಂಡರಾದ ಮಂಜುನಾಥ ಅಂಗಡಿ, ಮಂಜುನಾಥ ಗೊಂಡಬಾಳ, ಸಾವಿತ್ರಿ ಮುಜುಮದಾರ, ಆನಂದ ಹಳ್ಳಿಗುಡಿ, ಹುಲಗಪ್ಪ ಕಟ್ಟಿಮನಿ, ಸೈಯದ್ ಹಯಾತ್, ಶರಣು ಡೊಳ್ಳಿನ್ ಇತರರು ಉಪಸ್ಥಿತರಿದ್ದರು.

Author

ಪ್ರಮುಖ ಸುದ್ದಿ

Stock market

Astrology