Home » ಲೈವ್ ನ್ಯೂಸ್ » ಹಿಂದೂ ಸಂಸ್ಕೃತಿ ಉಳಿವಿಗಾಗಿ ದಹಿ ಹಂಡಿ ಆಯೋಜನೆ : ಶಾಸಕ ಚೌಹಾಣ್‌

ಹಿಂದೂ ಸಂಸ್ಕೃತಿ ಉಳಿವಿಗಾಗಿ ದಹಿ ಹಂಡಿ ಆಯೋಜನೆ : ಶಾಸಕ ಚೌಹಾಣ್‌

Facebook
X
WhatsApp
Telegram

ಔರಾದ.23.ಆಗಸ್ಟ್.26: ಭಾರತೀಯ ಸಂಸ್ಕೃತಿ ಮತ್ತು ಸನಾತನ ಪರಂಪರೆಯನ್ನು ಉಳಿಸಿ ಬೆಳೆಸಲು ದಹಿ ಹಂಡಿ (ಮೊಸರುಕುಡಿಕೆ) ಉತ್ಸವಗಳು ಅತ್ಯಂತು ಪ್ರಮುಖವಾಗಿವೆ ಎಂದು ಶಾಸಕರು ತಿಳಿಸಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಆಯೋಜಿಸುವ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಯುವಜನರಲ್ಲಿ ಒಗ್ಗಟ್ಟು, ಧೈರ್ಯ ಮತ್ತು ಧಾರ್ಮಿಕ ಭಾವನೆಯನ್ನು ಮೂಡಿಸುತ್ತವೆ. ಶಾಸಕರಾದ ಶ್ರೀ ಪ್ರಭು ಬಿ.ಚವ್ಹಾಣ ಅವರು ಹೇಳಿದರು.

ಇಂದು ನಡೆಸಿದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು:

• ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿಹಂಡಿ ಉತ್ಸವ ಸಮಿತಿ ವತಿಯಿಂದ ಸೆಪ್ಟೆಂಬರ್ 4 ರಂದು ಔರಾದ ಪಟ್ಟಣದಲ್ಲಿ ಭವ್ಯ ದಹಿಹಂಡಿ ಉತ್ಸವ ಆಯೋಜನೆ
• ಮಧ್ಯಾಹ್ನ 2 ಗಂಟೆಗೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅದ್ದೂರಿ ಕಾರ್ಯಕ್ರಮ
• ದಹಿ ಹಂಡಿ (ಮಡಿಕೆ ಒಡೆಯುವ ಸ್ಪರ್ಧೆ) ಎರಡು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತವೆ.
• ವಿದ್ಯಾರ್ಥಿಗಳ ವಿಭಾಗದಲ್ಲಿ 19 ವರ್ಷ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು
• ಸಾಮಾನ್ಯ ವಿಭಾಗದಲ್ಲಿ 19 ವರ್ಷ ಮೇಲ್ಪಟ್ಟ ಸದಸ್ಯರ ತಂಡಗಳು ಭಾಗವಹಿಸಬಹುದು
• ತಂಡಗಳ ನೋಂದಣಿಗೆ 23.08.2026 ರಿಂದ 31.08.2026 ರವರೆಗೆ ಅವಕಾಶ
• ಒಂದು ತಂಡದಲ್ಲಿ ಕನಿಷ್ಠ 12 ಹಾಗೂ ಗರಿಷ್ಠ 25 ಸದಸ್ಯರು ಇರಬೇಕು.
• ಔರಾದ(ಬಿ) ಮತ್ತು ಕಮಲನಗರ ತಾಲೂಕಿನವರು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
• ನಿಗದಿತ ಅವಧಿಯೊಳಗೆ ನೋಂದಣಿ ಮಾಡಿಕೊಳ್ಳಬೇಕು. ನಂತರ ಬರುವ ತಂಡಗಳಿಗೆ ಅವಕಾಶ ಇರುವುದಿಲ್ಲ.
• ತಂಡದ ಸದಸ್ಯರು ಸರಿಯಾಗಿ ಅಭ್ಯಾಸ ಮಾಡಿ ಭಾಗವಹಿಸಬೇಕು.
• ತಂಡದ ಮುಖ್ಯಸ್ಥರು ತಂಡದ ಜವಾಬ್ದಾರಿ ವಹಿಸಿಕೊಳ್ಳಬೇಕು.

ನೋಂದಣಿಗಾಗಿ:
• ಶ್ರೀ ಶಿವರಾಜ್ ಅಲ್ಮಾಜೆ: 9448605300
• ಶ್ರೀ ಬಸವರಾಜ ಹಳ್ಳೆ: 8123979550
• ಶ್ರೀ ದಯಾನಂದ ಘೂಳೆ: 9901705826
• ಶ್ರೀ ಕೇರಬಾ ಪವಾರ: 9916330099
ಅವರನ್ನು ಸಂಪರ್ಕಿಸಬಹುದು

ವಿಜೇತ ತಂಡಗಳಿಗೆ ಬಹುಮಾನ:
ಪ್ರಥಮ ಬಹುಮಾನ – ₹51,000/-
ದ್ವಿತೀಯ ಬಹುಮಾನ – ₹31,000/-
ತೃತೀಯ ಬಹುಮಾನ – ₹21,000/-
• ಪುಟಾಣಿ ಮಕ್ಕಳು ಕೃಷ್ಣ-ರುಕ್ಮಿಣಿ ವೇಷದಾರಿಗಳಾಗಿ ಗಮನ ಸೆಳೆಯುವರು.

* ದೇಶದ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಬೇಕೆಂದ ಸದಾಶಯದೊಂದಿಗೆ ನಿರಂತರ ಒಂದಿಲ್ಲೊAದು ಕಾರ್ಯಕ್ರಮಗಳ ಆಯೋಜನೆ
* ಎಲ್ಲ ಹಬ್ಬಗಳನ್ನು ಸಂಭ್ರಮದಿAದ ಆಚರಿಸುತ್ತೇನೆ. ನಮ್ಮ ಸನಾತನ ಸಂಸ್ಕೃತಿಯನ್ನು ಉಳಿಸಲು ನನ್ನಿಂದ ಸಾಧ್ಯವಾದಷ್ಟು ಪ್ರಯತ್ನ
* ದಹಿ ಹಂಡಿ ಉತ್ಸವ ನಮ್ಮಲ್ಲಿ ಅಷ್ಟೊಂದು ಪ್ರಚಲಿತವಿಲ್ಲ. ನಮ್ಮಲ್ಲಿಯೂ ಕೂಡ ಈ ಕಾರ್ಯಕ್ರಮ ಮಾಡಬೇಕೆಂಬ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ವರ್ಷವೂ ಅದ್ದೂರಿ ಕಾರ್ಯಕ್ರಮ ನಡೆಯಲಿದೆ.

• ಶ್ರೀಕೃಷ್ಣ ಜನ್ಮಾಷ್ಟಮಿಯ ಪಾವನ ಸಂದರ್ಭದಲ್ಲಿ ಆಯೋಜಿಸಲಾಗಿರುವ ದಹಿ ಹಂಡಿ ಉತ್ಸವವು ನಮ್ಮ ಸಂಸ್ಕೃತಿ, ಸಂಪ್ರದಾಯ, ಭಕ್ತಿ, ಸ್ನೇಹ ಹಾಗೂ ಒಗ್ಗಟ್ಟಿನ ಪ್ರತೀಕವಾಗಿದೆ. ಬಾಲಕೃಷ್ಣನ ತುಂಟಾಟ ಮತ್ತು ಗೋಪಾಲರೊಂದಿಗೆ ಬೆರೆತು ಸಂಭ್ರಮಿಸಿದ ಶ್ರೀಕೃಷ್ಣನ ಲೀಲೆಗಳನ್ನು ಸ್ಮರಿಸುವ ಈ ಉತ್ಸವವು ಯುವಜನರಲ್ಲಿ ಏಕತೆ, ಸಹಕಾರ, ಧೈರ್ಯ ಮತ್ತು ತಂಡದ ಮನೋಭಾವವನ್ನು ಬೆಳೆಸುವ ವಿಶೇಷ ಆಚರಣೆಯಾಗಿದೆ.

• ದಹಿ ಹಂಡಿ ಉತ್ಸವದಲ್ಲಿ ಸಾರ್ವಜನಿಕರು ಕುಟುಂಬ ಸಮೇತರಾಗಿ ಭಾಗವಹಿಸಿ, ಉತ್ಸವದ ಸಂಭ್ರಮವನ್ನು ಹೆಚ್ಚಿಸಲು ಮನವಿ.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ಧೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ರಾಮಶೆಟ್ಟಿ ಪನ್ನಾಳೆ, ಪ್ರಕಾಶ ಅಲ್ಮಾಜೆ, ದಯಾನಂದ ಘೂಳೆ, ಬಸವರಾಜ ಹಳ್ಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾ ಪ್ರಭಾತ ಸುದ್ಧಿ 24X7

ವರದಿಗಾರ: ಡಾ ಮಿಲಿಂದ ಸೋಮವಂಶಿ

Author

Leave a Reply

ಪ್ರಮುಖ ಸುದ್ದಿ

Stock market

Astrology