Home » ಲೈವ್ ನ್ಯೂಸ್ » ಹಿಂದೂ ಸಂಸ್ಕೃತಿ ಉಳಿವಿಗಾಗಿ ದಹಿ ಹಂಡಿ ಆಯೋಜನೆ : ಶಾಸಕ ಚೌಹಾಣ್‌

ಹಿಂದೂ ಸಂಸ್ಕೃತಿ ಉಳಿವಿಗಾಗಿ ದಹಿ ಹಂಡಿ ಆಯೋಜನೆ : ಶಾಸಕ ಚೌಹಾಣ್‌

Facebook
X
WhatsApp
Telegram
ಕೃಷ್ಣ ಜನ್ಮಾಷ್ಟಮಿಯ ಆಚರಿಸಲಾಗುವ ದಹಿ ಹಂಡಿ ಉತ್ಸವವು ಶ್ರೀಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ಜಾನಪದ ಸಾಂಸ್ಕೃತಿಕ ಕ್ರೀಡೆಯಾಗಿದೆ. 

ಮೊಸರು, ಬೆಣ್ಣೆ ತುಂಬಿದ ಮಡಕೆಯನ್ನು ಎತ್ತರದಲ್ಲಿ ಕಟ್ಟಿ, ಯುವಕರ ತಂಡಗಳು ಮಾನವ ಪಿರಮಿಡ್ ರಚಿಸಿ ಅದನ್ನು ಒಡೆಯುವ ಮೂಲಕ ಐಕ್ಯತೆ ಹಾಗೂ ಧರ್ಮ ಸಂಸ್ಕೃತಿಯ ಸಂಭ್ರಮವನ್ನು ಇದು ಸಾರುತ್ತದೆ.

ದಹಿ ಹಂಡಿ ಉತ್ಸವದ ವಿಶೇಷತೆಗಳುಶ್ರೀಕೃಷ್ಣನ ಗೋಕುಲದ ಬಾಲ್ಯದ ನೆನಪು ಹಾಗೂ ಬೆಣ್ಣೆ ಕಳ್ಳತನದ ಲೀಲೆಯನ್ನು ಸಂಕೇತಿಸುತ್ತದೆ.

ಯುವಕರು ("ಗೋವಿಂದರು") ಒಗ್ಗೂಡಿ ಎತ್ತರದ ಮಡಕೆ ತಲುಪಲು ಮಾನವ ಗೋಪುರ ಅಥವಾ ಪಿರಮಿಡ್ ನಿರ್ಮಿಸುತ್ತಾರೆ.

ಇದು ಯುವ ಜನತೆಯಲ್ಲಿ ಸಾಮೂಹಿಕ ಒಗ್ಗಟ್ಟು, ಸಾಹಸ ಪ್ರವೃತ್ತಿ ಮತ್ತು ತಂಡದ ಸ್ಪೂರ್ತಿಯನ್ನು ಬೆಳೆಸುತ್ತದೆ.

ಹಬ್ಬದ ಸಮಯದಲ್ಲಿ "ಗೋವಿಂದ ಆಲಾ ರೇ" ಎಂಬ ಘೋಷಣೆಗಳೊಂದಿಗೆ ಭಕ್ತಿ ಹಾಗೂ ಸಂಭ್ರಮ ಮನೆಮಾಡಿರುತ್ತದೆ.

ಔರಾದ.23.ಆಗಸ್ಟ್.26: ಔರಾದ ಪಟ್ಟಣದಲ್ಲಿ ಸೆಪ್ಟೆಂಬರ್ 4 ರಂದು ದಹಿ ಹಂಡಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹಿಂದೂ ಸಂಸ್ಕೃತಿಯು ಪ್ರಪಂಚದ ಅತ್ಯಂತ ಪ್ರಾಚೀನ ಜೀವಂತ ಸಂಸ್ಕೃತಿಗಳಲ್ಲಿ ಒಂದಾಗಿದ್ದು, ಇದು ಧರ್ಮ, ಕರ್ಮ, ಮೌಲ್ಯಗಳು, ಕಲೆ, ಉತ್ಸವಗಳು ಮತ್ತು ಆಧ್ಯಾತ್ಮಿಕ ಚಿಂತನೆಗಳ ಆಧಾರದ ಮೇಲೆ ರೂಪುಗೊಂಡಿದೆ.  ಈ ಹಬ್ಬ ಹಿಂದೂಗಳ ಸಂಸ್ಕೃತಿಯನ್ನು  ಉಳಿವೆಗಾಗಿ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಸೆ.4ರಂದು ಮಧ್ಯಾಹ್ನ 2ಕ್ಕೆ ಔರಾದ್ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಅದ್ದೂರಿಯಾಗಿ ದಹಿ ಹಂಡಿ ಉತ್ಸವ ಹಾಗೂ ಶ್ರೀಕೃಷ್ಣನ ಬಾಲ್ಯದ ಜೀವನದ ಸಂಬಂಧಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಶಾಸಕರಾದ ಶ್ರೀ ಪ್ರಭು ಬಿ ಚವ್ಹಾಣ್ ಅವರು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಕೃಷ್ಣ ಅಸ್ತಮಿ ನಿಮಿತ್ಯ ದಹಿ ಹಂಡಿ ಉತ್ಸವದಲ್ಲಿ ಎರಡು ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಪಿಯುಸಿ, ಪದವಿ, ಡಿಪ್ಲೊಮಾ, ಐಟಿಐ ಸೇರಿದಂತೆ 19 ವರ್ಷ ಮೇಲ್ಪಟ್ಟ ವಿದ್ಯಾ ರ್ಥಿಗಳಿಗೆ ಒಂದು ವಿಭಾಗ ಹಾಗೂ ಎಲ್ಲ ರಿಗೂ ಮುಕ್ತವಾದ ಮತ್ತೊಂದು ವಿಭಾಗ ದಲ್ಲಿ ಸ್ಪರ್ಧೆ ನಡೆಯಲಿದೆ. ಸುಮಾರು 25ರಿಂದ 30 ತಂಡಗಳು ಭಾಗವಹಿಸುವ ನಿರೀಕ್ಷೆಯಿದ್ದು, ಎರಡೂ ವಿಭಾಗಗಳ ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 51 ಸಾವಿರ, ದ್ವಿತೀಯ 31 ಸಾವಿರ ಹಾಗೂ ತೃತೀಯ 21 ಸಾವಿರ ನೀಡಲಾಗುವುದು ಎಂದು ತಿಳಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸಲು ಆ.23 ರಿಂದ ನೋಂದಣಿ ಆರಂಭವಾಗಲಿದ್ದು, ಆ.31 ಕೊನೆಯ ದಿನವಾಗಿದೆ.

ಪ್ರತಿ ತಂಡಕ್ಕೆ 51 ರೂಪಾಯಿ ನೋಂದಣಿ ಶುಲ್ಕ ನಿಗದಿ ಪಡಿಸಲಾಗಿದೆ. ಸೆ.4ರಂದು ಶುಕ್ರ ವಾರ ಮಧ್ಯಾಹ್ನ 2 ಗಂಟೆಗೆ ಔರಾದ್ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಅದ್ದೂರಿಯಾಗಿ ದಹಿ ಹಂಡಿ ಉತ್ಸವ ನಡೆಯಲಿದೆ ಎಂದು ಹೇಳಿದರು.

ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡ ಗಳು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡ ಬೇಕು. ಸ್ಪರ್ಧೆಯ ಸಂದರ್ಭದಲ್ಲಿ ಯಾವುದೇ ರೀತಿಯ ಹೆಚ್ಚು-ಕಡಿಮೆ ಅಥವಾ ಅವಘಡ ಸಂಭವಿಸಿದಲ್ಲಿ ಸಮಿತಿ ಜವಾಬ್ದಾರಿಯಾಗುವುದಿಲ್ಲ. ಹೀಗಾಗಿ ಸ್ಪಧಿ ೯ಗಳು ಅಗತ್ಯ ತರಬೇತಿ ಪಡೆದುಕೊಂಡು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಅಲ್ಲದೆ, ಭಾಗವಹಿಸುವ ಪ್ರತಿಯೊಂದು ತಂಡದ ವರು ಮುಚ್ಚಳಿಕೆ ಪತ್ರ ನೀಡುವುದು

ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಿದರು.

ಕೃಷ್ಣ ವೇಷಧರಿಸಿ ಬನ್ನಿ:

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆಯಲಿರುವ ದಹಿ ಹಂಡಿ ಉತ್ಸವದಲ್ಲಿ ಮಕ್ಕಳು ಹಾಗೂ ಯುವಕರು ಕೃಷ್ಣನ ವೇಷ ಧರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ ಕರೆ ನೀಡಿದರು. ಕೃಷ್ಣನ ವೇಷ ಧರಿಸುವ ಮೂಲಕ ಹಬ್ಬದ ಸಂಭ್ರಮ ಹೆಚ್ಚಿಸುವುದರ ಜತೆಗೆ ಮಕ್ಕಳಿಗೆ ನಮ್ಮ ಹಿಂದೂ ಸಂಸ್ಕೃತಿ, ಪರಂಪರೆ ಹಾಗೂ ಧಾರ್ಮಿಕ ಅಚರಣೆಗಳ

ಪರಿಚಯವಾಗಲಿದೆ.

ಯುವ ಪೀಳಿಗೆಗೆ ಸಂಸ್ಕಾರ ಹಾಗೂ ನಮ್ಮ ಸಂಪ್ರದಾಯದ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿವೆ. ವೇಷ

ಉತ್ಸವದ ಕರಪತ್ರ ಬಿಡುಗಡೆ :

ಅಮರೇಶ್ವರ ಉತ್ಸವ ಸಮಿತಿ ವತಿಯಿಂದ ಆಯೋಜಿಸಿರುವ ಅದ್ದೂರಿ ದಹಿ ಹಂಡಿ ಉತ್ಸವದ ಕರಪತ್ರವನ್ನು ಶಾಸಕ ಪ್ರಭು ಚವ್ಹಾಣ ಬಿಡುಗಡೆ ಮಾಡಿದರು. ಗ್ರಾಮೀಣ ಜನರಿಗೆ ಕಾರ್ಯಕ್ರಮ ಬಗ್ಗೆ ಪ್ರಚಾರ ಮಾಡುವಂತೆ ಕಾರ್ಯಕರ್ತರಿಗೆ ತಿಳಿಸಿದರು. ನೋಂದಣಿಗೆ ಶಿವರಾಜ ಅಲಮಾಜೆ 7406787374, ಕೆರೋಬಾ ಪವಾರ 99163 30099, ಬಸವರಾಜ ಹಳ್ಳಿ 8123979550 ಅವರನ್ನು ಸಂಪರ್ಕಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಶಿವರಾಜ್ ಅಲ್ಲಾಜೆ, ಪ್ರಕಾಶ್ ಅಲ್ದಾಜೆ, ಶಿವಾಜಿರಾವ ಪಾಟೀಲ್, ಧೋಂಡಿಬಾ ನರೋಟೆ, ದಯಾನಂದ ಘಳೆ ಸೇರಿದಂತೆ ಅನೇಕರಿದ್ದರು.

  

Author

Leave a Reply

ಪ್ರಮುಖ ಸುದ್ದಿ

Stock market

Astrology