Home » ಲೈವ್ ನ್ಯೂಸ್ » ಕರ್ನಾಟಕ 72000 ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ 32,000 ಹುದ್ದೆಗಳ ಮೀಸಲಾತಿ’

ಕರ್ನಾಟಕ 72000 ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ 32,000 ಹುದ್ದೆಗಳ ಮೀಸಲಾತಿ’

Facebook
X
WhatsApp
Telegram
    Recruitment is already underway for Village Administrative Officers, surveyors, residential school teachers and various posts in the Special Reserve Police Force.

Orders have also been issued to fill 319 Group ‘A’ and Group ‘B’ Gazetted Probationer (KAS) posts for 2026–27.

ಕರುನಾಡಿನಲ್ಲಿ ಉದ್ಯೋಗ ಉತ್ಸವ ಆರಂಭವಾಗಿದೆ. ಒಳಮೀಸಲಾತಿ ಜಾರಿಯಾದ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ಮತ್ತೆ ಆರಂಭಿಸಲಾಗಿದ್ದು, ಮುಂದಿನ ಆರು ತಿಂಗಳಲ್ಲಿ 72,000 ಹುದ್ದೆಗಳು ಭರ್ತಿಯಾಗಲಿದೆ. ಇದರಲ್ಲಿ ಸುಮಾರು 32 ಸಾವಿರ ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಿಡಲಾಗಿದೆ. 4 ತಿಂಗಳೊಳಗೆ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಆರು ತಿಂಗಳೊಳಗೆ ಅರ್ಹ ಅಭ್ಯರ್ಥಿಗಳ ಕೈಗೆ ನೇಮಕಾತಿ ಪತ್ರ ನೀಡುವ ಗುರಿಯನ್ನು ನಮ್ಮ ಸರ್ಕಾರ ಹೊಂದಿದೆ.

ಈಗಾಗಲೇ ಗ್ರಾಮ ಆಡಳಿತಾಧಿಕಾರಿಗಳು, ಭೂಮಾಪಕರು, ವಸತಿ ಶಾಲೆಗಳ ಶಿಕ್ಷಕರು ಹಾಗೂ ವಿಶೇಷ ಮೀಸಲು ಪೊಲೀಸ್ ಪಡೆಯ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ. ಅಲ್ಲದೇ 2026-27 ನೇ ಸಾಲಿನ ಗ್ರೂಪ್‌ ʼಎʼ ಮತ್ತು ಗ್ರೂಪ್‌ ʼಬಿʼ ವೃಂದದ 319 ಗೆಜೆಟೆಡ್‌ ಪ್ರೊಬೇಷನರಿ (ಕೆಎಎಸ್‌) ಹುದ್ದೆಗಳ ಭರ್ತಿಗೂ ಆದೇಶ ನೀಡಲಾಗಿದೆ.

ಆಸಕ್ತ ಉದ್ಯೋಗಾಕಾಂಕ್ಷಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ, ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ನಿಮ್ಮ ಪ್ರತಿಭೆ ಮತ್ತು ಪರಿಶ್ರಮಕ್ಕೆ ಉದ್ಯೋಗದ ಗೌರವವನ್ನು ನೀಡಲು ನಾವು ಬದ್ಧರಿದ್ದೇವೆ.

ಬೆಂಗಳೂರು .17.ಜುಲೈ.26: ರಾಜ್ಯಾದ್ಯಂತ ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ನೇಮಕಾತಿ ಪ್ರಕ್ರಿಯೆಗಳಿಗೆ ಸರ್ಕಾರ  ನೇಮಕಾತಿ ಪ್ರಕ್ರಿಯ  ಪ್ರಯತ್ನಿಸುತ್ತಿದೆ. ಪರಿಶಿಷ್ಟ ಜಾತಿಯೇಲಿ ಒಳಮೀಸಲಾತಿ ಜಾರಿಯಾದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ನೇಮಕಾತಿ ಪ್ರಕ್ರಿಯೆಗಳಿಗೆ ಇದೀಗ ಮತ್ತೆ ಚಾಲನೆ ನೀಡಲಾಗಿದ್ದು, ಕರುನಾಡಿನಲ್ಲಿ ‘ಉದ್ಯೋಗ ಉತ್ಸವ’ ಆರಂಭವಾಗಿದೆ.

ರಾಜ್ಯದ ಸಮಗ್ರ ಹಾಗೂ ಸಮಾನ ಅಭಿವೃದ್ಧಿಯ ದೃಷ್ಟಿಯಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ರಾಜ್ಯ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ. ಒಟ್ಟು 72,000 ಹುದ್ದೆಗಳ ಪೈಕಿ ಕೇವಲ ಕಲ್ಯಾಣ ಕರ್ನಾಟಕ ಭಾಗಕ್ಕಾಗಿಯೇ ಸುಮಾರು 32 ಸಾವಿರ ಹುದ್ದೆಗಳನ್ನು ಮೀಸಲಿಡಲಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.

ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ತ್ವರಿತವಾಗಿ ಮುಗಿಸಲು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕೇವಲ 4 ತಿಂಗಳೊಳಗೆ ಎಲ್ಲಾ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಸಿ, ಮುಂದಿನ ಆರು ತಿಂಗಳೊಳಗೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳ ಕೈಗೆ ನೇಮಕಾತಿ ಪತ್ರ ನೀಡುವ ಗುರಿಯನ್ನ ನಮ್ಮ ಸರ್ಕಾರ ಹೊಂದಿದೆ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology