Home » ಲೈವ್ ನ್ಯೂಸ್ » ವಿವಿ ಅತಿಥಿ ಉಪನ್ಯಾಸಕರ ಧರಣಿ ನಾಲ್ಕನೇ ದಿನಕ್ಕೆ

ವಿವಿ ಅತಿಥಿ ಉಪನ್ಯಾಸಕರ ಧರಣಿ ನಾಲ್ಕನೇ ದಿನಕ್ಕೆ

Facebook
X
WhatsApp
Telegram

ಬೆಂಗಳೂರು.16.ಜುಲೈ.26: ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಯಂ ನೌಕರರು ಇಲ್ಲದ ಕಾರಣ ಗುತ್ತಿಗೆ ಆಧಾರ್ಮೇಲೆ ಕಾರ್ಯ ನಡೆಸ್ತಿದ್ದಾರೆ ಈದೇರೀತಿ ರಾಜ್ಯಾದ್ಯಂತ ಪ್ರಾಥಮಿಕ ಮಾಧ್ಯಮಿಕ ಪದವಿಪೂರ್ವ ಹಾಗೂ ಪದವಿ ಮಹಾವಿದ್ಯಾಲಯಗಳಲಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರ ಕಾರ್ಯ ನಿರ್ವಹಿಸ್ತಿದ್ದಾರೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರು ಹತ್ತು ತಿಂಗಳ ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ನಡೆಸಿರುವ ಅಹೋರಾತ್ರಿ ಧರಣಿ ಮಂಗಳವಾರ 6ನೇ ದಿನಕ್ಕೆ ಮುಂದುವರೆದಿದೆ.

ಕರ್ನಾಟಕ ಜನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಅವರು ಪ್ರತಿಭಟನಾಕಾರರಿಗೆ ವೇತನ ಪಾವತಿಗೆ ಸಂಬಂಧಿಸಿದ ಆದೇಶ ಪತ್ರ ನೀಡಲು ನಿರ್ಧರಿಸಿದರು.

ಅದರಲ್ಲಿ ಹಲವು ಲೋಪದೋಷಗಳಿದ್ದು, ಬೇಕಾಬಿಟ್ಟಿಯಾಗಿ ಕಾಫಿ-ಪೇಸ್ಟ್ ಮಾಡಿದ ರೀತಿಯಲ್ಲಿ ಆದೇಶ ಸಿದ್ಧಪಡಿಸಲಾಗಿದೆ ಎಂದು ಧರಣಿ ನಿರತ ಅತಿಥಿ ಉಪನ್ಯಾಸಕರು ಆರೋಪಿಸಿದರು.

ಆದೇಶದಲ್ಲಿ ವೇತನ ಪಾವತಿಗೆ ಸಂಬಂಧಿಸಿದ ಸ್ಪಷ್ಟತೆ, ಕ್ರಮಬದ್ಧತೆ ಹಾಗೂ ಆಡಳಿತಾತ್ಮಕ ಮಾನ್ಯತೆ ಇಲ್ಲ. ಈ ಹಿನ್ನೆಲೆಯಲ್ಲಿ ಅದನ್ನು ತಿರಸ್ಕರಿಸಿ, ನಿಯಮಾನುಸಾರ ಹಾಗೂ ಲೋಪರಹಿತ ಆದೇಶ ಹೊರಡಿಸುವಂತೆ ಮನವಿ ಮಾಡಿದರು.

ಪೂರ್ಣ ಪ್ರಮಾಣದಲ್ಲಿ ಸೇವೆ ಸಲ್ಲಿಸಿದ ಸಹಾಯಕ ಪ್ರಾಧ್ಯಾಪಕರನ್ನು ಅರೆಕಾಲಿಕ ಎಂದು ಆದೇಶ ನೀಡಿದ್ದಾರೆ. ಅದಕ್ಕೆ ಹಳೇ ಕುಲಸಚಿವರ ಸಹಿ ಇದೆ. ಅಲ್ಲದೆ, ಕೆಲಸ ಮಾಡಿದವರ ಕೆಲವರ ಹೆಸರುಗಳು ಸಹ ಆದೇಶದಲ್ಲಿ ಕೈಬಿಟ್ಟು ಹೋಗಿದೆ. ಉದ್ದೇಶಪೂರ್ವಕವಾಗಿ ಲೋಪ ಎಸಗಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಅತಿಥಿ ಉಪನ್ಯಾಸಕಿ ಎನ್. ಶಿಲಿನಾ ಕೋಟೆ ತಿಳಿಸಿದರು.

ಮೌಖಿಕ ಭರವಸೆ ನೀಡಿದರೆ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯಲ್ಲ. ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾನಿರತರು ತಿಳಿಸಿದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology