Home » ಲೈವ್ ನ್ಯೂಸ್ » ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ (ಅಚ್ಚುಕಲೆ), ಕೋರ್ಸ್ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ (ಅಚ್ಚುಕಲೆ), ಕೋರ್ಸ್ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

Facebook
X
WhatsApp
Telegram

ಬೀದರ, ಜುಲೈ 09, (ಕರ್ನಾಟಕ ವಾರ್ತೆ):- ಮೈಸೂರು ವಿಶ್ವವಿದ್ಯಾನಿಲಯದ ಪ್ರವೇಶಾತಿ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಎಂ.ವಿ.ಎ ಸ್ನಾತಕೋತ್ತರ ಪದವಿ ಪ್ರವೇಶಾತಿಗಾಗಿ ಬಿ.ವಿ.ಎ/ಸಮಾನಾಂತರ ಕೋರ್ಸ್ಗಳಲ್ಲಿ   (UUCMS) ಉತ್ತೀರ್ಣರಾಗಿರುವ  uucms.karnataka.gov.in ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಮೈಸೂರು ಸಿದ್ದಾರ್ಥನಗರ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು (ಕಾವಾ) ಡೀನ್ ತಿಳಿಸಿದ್ದಾರೆ.

     ಎಂ.ವಿ.ಎ.ಸ್ನಾತಕೋತ್ತರ ಪದವಿಯು ದೃಶ್ಯಕಲೆಯಲ್ಲಿ ಎರಡು ವರ್ಷಗಳ ನಾಲ್ಕು ಸೆಮಿಸ್ಟರ್‌ಗಳ “ಸಿಬಿಸಿಎಸ್”  ಪದ್ಧತಿಯ ಕೋರ್ಸ್ ಆಗಿದ್ದು, ಈ ಸ್ನಾತಕೋತ್ತರ ಪದವಿಯು ಚಿತ್ರಕಲೆ, ಶಿಲ್ಪಕಲೆ, ಮತ್ತು ಗ್ರಾಫಿಕ್ಸ್ (ಅಚ್ಚುಕಲೆ), ವಿಷಯಗಳಲ್ಲಿ ವಿಶೇಷ ಅಧ್ಯಯನವನ್ನು ಒಳಗೊಂಡಿರುತ್ತದೆ. ಪ್ರವೇಶಾತಿ ಕೋರಿ ಅರ್ಜಿಸಲ್ಲಿಸಿದ ಅಭ್ಯರ್ಥಿಗಳನ್ನು ಆಯ್ಕೆಮಾಡಲು ಅರ್ಹತಾ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ದಿನಾಂಕವನ್ನು ನಂತರ ತಿಳಿಸಲಿದೆ. ವೆಬ್‌ಸೈಟ್  UUCMS:Khttps://uucms.karnataka.gov.in ನಲ್ಲಿ 2026ರ ಜುಲೈ 18ರ ಒಳಗೆ ಅರ್ಜಿಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ  cavamysore.karnataka.gov.in ಅಥವಾ 0821-2438931ಗೆ ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology