Home » ಲೈವ್ ನ್ಯೂಸ್ » ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಮೃತ ರೈತರ ಕುಟುಂಬ ಪರಿಹಾರ ಸೌಲಭ್ಯಕ್ಕೆ ಸೂಚನೆ

ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಮೃತ ರೈತರ ಕುಟುಂಬ ಪರಿಹಾರ ಸೌಲಭ್ಯಕ್ಕೆ ಸೂಚನೆ

Facebook
X
WhatsApp
Telegram

ಬೀದರ,06.ಜುಲೈ .26 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಮೃತ ರೈತರ ಕುಟುಂಬ ಸರ್ಕಾರದ ಪರಿಹಾರ ಸೌಲಭ್ಯಕ್ಕೆ ನಿಗದಿತ ಅವಧಿ ಒಳಗೆ ಅರ್ಜಿಸಲ್ಲಿಸಬೇಕು ಎಂದು ಕಮಲನಗರ ಔರಾದ (ಬಾ) ಸಹಾಯಕ ಕೃಷಿ ನಿರ್ದೇಶಕರು  ತಿಳಿಸಿದ್ದಾರೆ.

     ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಸರ್ಕಾರದ ಪರಿಹಾರ ಪಡೆಯಲು ನಿಗದಿತ ಕಾಲಮಿತಿ ಒಳಗೆ ಅರ್ಜಿಸಲ್ಲಿಸಬೇಕು, ಕೃಷಿ ಇಲಾಖೆಯ ಮನವಿ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಸರ್ಕಾರದ ಮಾರ್ಗಸೂಚಿಗಳನ್ವಯ ಪರಿಹಾರ ಪಡೆಯಲು ಅರ್ಹರಾಗಿರುವ ಮೃತ ರೈತರ ಕಾನೂನು ಬದ್ಧವಾರಸುದಾರರು ನಿಗದಿತ ಕಾಲಮಿತಿಯೊಳಗೆ ಅಗತ್ಯದಾಖಲೆಗಳೊಂದಿಗೆ ಅರ್ಜಿಸಲ್ಲಿಸುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.

    ಇತ್ತೀಚಿನ ದಿನಗಳಲ್ಲಿ ಹಲವು ಪ್ರಕರಣಗಳಲ್ಲಿ ಅಪೂರ್ಣದಾಖಲೆಗಳೊಂದಿಗೆ ಅರ್ಜಿಗಳು ಸಲ್ಲಿಕೆಯಾಗುತ್ತಿರುವುದು ಹಾಗೂ ಸರ್ಕಾರ ನಿಗದಿಪಡಿಸಿರುವ ಕಾಲಮಿತಿ ಒಳಗೆ ಅರ್ಜಿಸಲ್ಲಿಸದ ಕಾರಣ ಅನೇಕ ಅರ್ಜಿಗಳು ತಿರಸ್ಕೃತವಾಗುತ್ತಿರುವುದು ಕಂಡು ಬಂದಿದೆ.

     ಅರ್ಜಿದಾರರು ಅಗತ್ಯ ದಾಖಲೆಗಳೊಂದಿಗೆ ಸಂಪೂರ್ಣ ಅರ್ಜಿಯನ್ನು ನಿಗದಿತ ಅವಧಿಯೊಳಗೆ ಸಲ್ಲಿಸುವುದು ಅತ್ಯಗತ್ಯವಾಗಿದೆ. ಅರ್ಜಿಸಲ್ಲಿಸುವ ಕಾಲಮಿತಿ ರೈತರ ಆತ್ಮಹತ್ಯೆ ಸಂಭವಿಸಿದ ದಿನಾಂಕದಿoದ 03 (ಮೂರು) ತಿಂಗಳೊಳಗೆ ಸಂಬoಧಿತ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಕೃಷಿ ಇಲಾಖೆಗೆ ಅರ್ಜಿಸಲ್ಲಿಸಬೇಕು. ವಿಶೇಷ ಸಂದರ್ಭಗಳಲ್ಲಿ, ಆತ್ಮಹತ್ಯೆ ಸಂಭವಿಸಿದ ದಿನಾಂಕದಿoದ 03 ತಿಂಗಳ ನಂತರ ಹಾಗೂ 06 ತಿಂಗಳೊಳಗೆ ಅರ್ಜಿಯನ್ನು ಸಂಬoಧಿತ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಅವಕಾಶವಿರುತ್ತದೆ.ಆತ್ಮಹತ್ಯೆ ಸಂಭವಿಸಿದ ದಿನಾಂಕದಿoದ 06 ತಿಂಗಳು ಮೀರಿದ ನಂತರ ಸಲ್ಲಿಸುವ ಅರ್ಜಿಗಳನ್ನು ಸರ್ಕಾರದ ನಿಯಮಾನುಸಾರ ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.

     ಮೃತ ರೈತರ ಕುಟುಂಬದವರು ಸರ್ಕಾರ ನಿಗದಿಪಡಿಸಿರುವ ಕಾಲಮಿತಿ ಒಳಗೆ ಅರ್ಜಿಸಲ್ಲಿಸಿ ಸರ್ಕಾರದ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವಂತೆ ಕೃಷಿ ಇಲಾಖೆ ಕೋರಿದೆ. ಅರ್ಜಿಸಲ್ಲಿಸಬೇಕಾದ ಕಚೇರಿ ಸಂಬoಧಿತ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಕೃಷಿಇಲಾಖೆ/ತಹಸೀಲ್ದಾರಕಚೇರಿ. ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕಾದ ದಾಖಲೆಗಳು ಕಾನೂನು ಬದ್ಧ ವಾರಸುದಾರರಿಂದ ಸಲ್ಲಿಸಲಾದ ಅರ್ಜಿ ಮೃತ ರೈತರ ಮರಣ ಪ್ರಮಾಣಪತ್ರ. ಶವಪರೀಕ್ಷೆವರದಿ. ಮರಣೋತ್ತರ ಪರೀಕ್ಷೆ  ವರದಿ.

ಎಫ್.ಐ.ಆರ್.  ಹಾಗೂ ಪೊಲೀಸ್ ಅಂತಿಮ ವರದಿ. ಎಫ್.ಎಸ್.ಎಲ್. ವರದಿ (ಅನ್ವಯಿಸುವಲ್ಲಿ). ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆಯ ಮಹಜರು ವರದಿ. ಜಮೀನಿನ ಆರ್.ಟಿ.ಸಿ./ಪಹಣಿ/ಇತರೆ ಭೂದಾಖಲೆಗಳು. ಮೃತ ರೈತ ಹಾಗೂ ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿಗಳು, ಕಾನೂನು ಬದ್ಧ ವಾರಸುದಾರರ ಪ್ರಮಾಣ ಪತ್ರ, ಕುಟುಂಬ ವೃಕ್ಷ, ರೇಷನ್ ಕಾರ್ಡ್, ಅರ್ಜಿದಾರರ ಬ್ಯಾಂಕ್ ಪಾಸ್‌ಬುಕ್ ಪ್ರತಿ ಸಲ್ಲಿಸಬೇಕು.  ಕೃಷಿ ಸಾಲ, ಬೆಳೆ ಸಾಲ ಹಾಗೂ ಇತರೆ ಸಾಲಗಳಿಗೆ ಸಂಬAಧಿಸಿದ ದಾಖಲೆಗಳು.

     ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅಗತ್ಯ ವಿರುವ ಇತರೆ ದಾಖಲೆಗಳು. ಗಮನಿಸ ಬೇಕಾದ ಅಂಶಗಳು ಅರ್ಜಿಸಲ್ಲಿಸಿದ ಮಾತ್ರಕ್ಕೆ ಪರಿಹಾರ ಮಂಜೂರಾಗುತ್ತದೆ ಎಂದು ಪರಿಗಣಿಸಲಾಗುವುದಿಲ್ಲ. ಪ್ರತಿಯೊಂದು ಪ್ರಕರಣವನ್ನು ಸರ್ಕಾರದ ಜಾರಿಯಲ್ಲಿರುವ ಮಾರ್ಗಸೂಚಿಗಳು ಹಾಗೂ ಆದೇಶಗಳ ಪ್ರಕಾರ ಪರಿಶೀಲಿಸಲಾಗುತ್ತದೆ. ಉಪವಿಭಾಗಮಟ್ಟದ,ಜಿಲ್ಲಾ ಮಟ್ಟದಸಮಿತಿಯ ಶಿಫಾರಸಿನ ಮೇರೆಗೆ ಅರ್ಹ ಪ್ರಕರಣಗಳಿಗೆ ಮಾತ್ರ ಸರ್ಕಾರದ ನಿಯಮಾನುಸಾರ ಪರಿಹಾರ ಮಂಜೂರು ಮಾಡಲಾಗುತ್ತದೆ. ಅರ್ಜಿದಾರರು ಸಲ್ಲಿಸಿದ ಎಲ್ಲಾ ದಾಖಲೆಗಳ ಪ್ರತಿಗಳನ್ನು ತಮ್ಮ ಬಳಿ ಸುರಕ್ಷಿತವಾಗಿ ಸಂರಕ್ಷಿಸಿಕೊಳ್ಳಬೇಕು.

     ಪರಿಶೀಲನೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ಅಗತ್ಯ ಸಹಕಾರ ನೀಡುವುದು. ಇತರೆ ಪರಿಹಾರ ಯೋಜನೆಗಳ ಕುರಿತು ಅದೇ ರೀತಿಯಾಗಿ, ರೈತರು ಹಾಗೂ ಕೃಷಿ ಕಾರ್ಮಿಕರು ಹಾವು ಕಡಿತ, ಕೃಷಿ ಕಾರ್ಯದ ವೇಳೆ ಸಂಭವಿಸುವ ಆಕಸ್ಮಿಕ ಮರಣ, ಮರದಿಂದ ಬಿದ್ದು ಸಂಭವಿಸುವ ಮರಣ ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬoಧಿಸಿದ ಇತರೆ ಆಕಸ್ಮಿಕಗಳಿಂದ ಮರಣಹೊಂದಿದಲ್ಲಿ, ಸರ್ಕಾರದ ಜಾರಿಯಲ್ಲಿರುವ ನಿಯಮಗಳು ಹಾಗೂ ಮಾರ್ಗಸೂಚಿಗಳನ್ವಯ ಪರಿಹಾರ ಪಡೆಯಲು ಸಂಬoಧಿತ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಅರ್ಜಿಸಲ್ಲಿಸಲ್ಲಿಸಬೇಕು.

ಈ ಸಂದರ್ಭದಲ್ಲಿ ಅರ್ಜಿಯೊಂದಿಗೆ ವೈದ್ಯಾಧಿಕಾರಿಗಳ ಮರಣೋತ್ತರ ಪರೀಕ್ಷೆ ವರದಿ, ಮರಣದ ಕಾರಣವನ್ನು ದೃಢೀಕರಿಸುವ ವೈದ್ಯಕೀಯ ದಾಖಲೆಗಳು, ಹಾಗೂ ಕೃಷಿ, ಕಂದಾಯ ಮತ್ತು ಪೊಲೀಸ್ ಇಲಾಖೆಗಳ ಪಂಚನಾಮೆ  ಮಹಜರು ವರದಿಗಳು ಸೇರಿದಂತೆ ಸರ್ಕಾರದ ಮಾರ್ಗಸೂಚಿಗಳಲ್ಲಿ ಸೂಚಿಸಿರುವ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು.

ಅದೇರೀತಿ, ಬೆಂಕಿ ಆಕಸ್ಮಿಕದಿಂದ ಹುಲ್ಲಿನಮೆದೆ, ಬಣವೆಗಳುನಷ್ಟವಾದಲ್ಲಿ,ಪೊಲೀಸ್‌ಇಲಾಖೆ,ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆಯ ಮಹಜರು ವರದಿಗಳೊಂದಿಗೆ ಹಾಗೂ ಇತರೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಂಬoಧಿತ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಅರ್ಜಿಸಲ್ಲಿಸುವಂತೆ ರೈತರಿಗೆ ಕೃಷಿ ಇಲಾಖೆ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರ ಆರ್‌ಎಸ್‌ಕೆ ಕಂದಾಯ ಇಲಾಖೆಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology