ಬೀದರ,06.ಜುಲೈ 26:- ಬೀದರ ಜಿಲ್ಲೆಯ ರೈತ ಬಾಂಧವರಿಗೆ ತಾಂತ್ರಿಕ ಮಾಹಿತಿ ಕ್ರಮ ವಹಿಸಲು ಸಲಹೆ ನೀಡಿಲಾಗಿದೆ ಎಂದು ಬೀದರ ತೋಟಗಾರಿಕೆ ಮಹಾವಿದ್ಯಾಲಯ ಡೀನ್ ತಿಳಿಸಿದ್ದಾರೆ.
ಬೀದರ ಜಿಲ್ಲೆಯಾದ್ಯಂತ ಈ ಬಾರಿ ಮುಂಗಾರು ದುರ್ಬಲವಾಗಿರುವುದರಿಂದ ಬಿತ್ತನೆ ತಡವಾದಾಗ ಅಥವಾ ಈಗಾಗಲೇ ಬಿತ್ತನೆಯಾಗಿ ಮಳೆಯ ಕೊರತೆ ಅನುಭವಿಸುತ್ತಿರುವ ರೈತರು ಕೈಗೊಳ್ಳಬಹುದಾದ ವೈಜ್ಞಾನಿಕ ಕ್ರಮಗಳನ್ನು ಬಾಗಲಕೋಟನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಡಿಯಲ್ಲಿ ಬರುವ ಬೀದರ ತೋಟಗಾರಿಕಾ ಮಹಾವಿದ್ಯಾಲಯ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥರು ರೈತರಿಗೆ ಉಪಯುಕ್ತ ಮಾಹಿತಿಯನ್ನು ಹಂಚಿಕೊAಡಿದ್ದಾರೆ.
ತೇವಾಂಶ ಕೊರತೆ ಪರಿಸ್ಥಿತಿಯಲ್ಲಿ ಬೆಳೆ ನಿರ್ವಹಣಾ ಕ್ರಮಗಳು : ಬಿತ್ತನೆ ಪೂರ್ವ ಬೀಜೋಪಚಾರ-2% ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣ (1 ಲೀ. ನೀರಿಗೆ 20 ಗ್ರಾಂ. ಅಚಿಅಟ2) ತಯಾರಿಸಿ ಬೀಜಗಳನ್ನು (ಸೋಯಾಬಿನ್ ಹೊರತುಪಡಿ) ಅರ್ಧ ಗಂಟೆ ನೆನೆಸಿ ತದನಂತರ ನೆರಳಿನಲ್ಲಿ ಒಣಗಿಸಿ ಬಿತ್ತಿದ್ದರೆ ಮೊಳಕೆ ಒಡೆಯುವಿಕೆ ಪ್ರಮಾಣ ಹೆಚ್ಚಾಗುವುದು. ಜೊತೆಗೆ ಬೆಳೆಗೆ ಬರ ತಡೆದುಕೊಳ್ಳುವ ಗುಣ ಬರುವುದು. ಹೊದಿಕೆ-ಬೆಳೆ ಅವಶೇಷಗಳು ಒಣ ಹುಲ್ಲು ಅಥವಾ ಎಲೆಗಳನ್ನು ಮಣ್ಣಿನ ಮೇಲ್ಮೆöÊಯಲ್ಲಿ ಹರಡಬೇಕು. ಇದರಿಂದ ಮಣ್ಣಿನ ತೇವಾಂಶ ಕಾಪಾಡಲು ಸಹಕಾರಿಯಾಗುವುದು.
ಜೈವಿಕ ಗೊಬ್ಬರಗಳ ಬೀಜೋಪಚಾರ–ಎಕದಳ ಧಾನ್ಯಗಳ ಬೀಜಗಳಿಗೆ ಅಜೋಸ್ಫಿರಿಲ್ಲಂ ಅಥವಾ ಅಜಟೋಬ್ಯಾಕ್ಟರ್–25 ಗ್ರಾಂ.ಪ್ರತಿ ಕೆ.ಜಿ. ಬೀಜಕ್ಕೆ, ದ್ವಿದಳ ಧಾನ್ಯಗಳ ಬೆಳೆಗಳಿಗೆ ರೈಜೋಬಿಯಮ್-25 ಗ್ರಾಂ.ಪ್ರತಿ ಕೆ.ಜಿ.ಬೀಜಕ್ಕೆ, ಎಲ್ಲ ಬೆಳೆಗಳ ಬೀಜಗಳಿಗೆ–ರಂಜಕ ಕರಗಿಸುವ ಜೈವಿಕ ಗೊಬ್ಬರ-25 ಗ್ರಾಂ.ಪ್ರತಿ ಕೆ.ಜಿ.ಬೀಜಕ್ಕೆ, ಬೀಜೋಪಚಾರ ಮಾಡಿ ನೆರಳಿನಲ್ಲಿ ಒಣಗಿಸಿ ಬಿತ್ತಬೇಕು. ಜೈವಿಕ ರೋಗ ನಾಶಕ–ಟ್ರೆöÊಕೋಡರ್ಮ ವಿರಿಡೆ-10 ಗ್ರಾಂ.ಪ್ರತಿ ಕೆ.ಜಿ.ಬೀಜಕ್ಕೆ, ಸುಡೋಮೊನಾಸ್ ಫ್ಲೋರೋಸೆನ್ಸ್-10 ಗ್ರಾಂ.ಪ್ರತಿ ಕೆ.ಜಿ.ಬೀಜಕ್ಕೆ, ಬೀಜೋಪಚಾರ ಮಾಡಿ ಬಿತ್ತಿದ್ದರೆ ಬೀಜ ಮತ್ತು ಮಣ್ಣಿನಿಂದ ಹರಡುವ ರೋಗಗಳನ್ನು ನಿಯಂತ್ರಿಸಬಹುದು.
ಬೆಳೆ ಬೆಳವಣಿಗೆ ಹಂತದಲ್ಲಿ ತೇವಾಂಶದ ಕೊರತೆಯಾದಾಗ : ಬೆಳೆಯ ಬೆಳವಣಿಗೆ ಉತ್ತೇಜಿಸಲು ಶೇ.1 ಪೋಟ್ಯಾಷಿಯಂ ನೈಟ್ರೇಟ್ (10 ಗ್ರಾಂ.ಏಓಔ3 ಅನ್ನು 1 ಲೀ.ನೀರಿಗೆ ಬೆರಸಿ) ಎಲೆಗಳ ಮೇಲೆ ಸಿಂಪಡಿಸಿ.ಅಥವಾ 19:19:19 ನೀರಿನಲ್ಲಿ ಕರಗುವ ರಸಗೊಬ್ಬರವನ್ನು ಶೇ.1ರಂತೆ ಸಿಂಪಡಿಸಿ ಅಥವಾ ಶೇ.3ರ ಪ್ರಮಾಣದಲ್ಲಿ ಜೀವಾಮೃತವನ್ನು 2 ರಿಂದ 3 ಬಾರಿ 15 ದಿನಗಳ ಅಂತರದಲ್ಲಿ ಸಿಂಪಡಿಸಬೇಕು. ಬಿತ್ತಿದ ಬೆಳೆಯಲ್ಲಿ ಮಳೆಯ ಕೊರತೆಯಾದಾಗ ಸಸಿಗಳನ್ನು ತೆಳುವುಗೊಳಿಸುವುದು, ಕೊಳವೆ ಬಾವಿಯ ಲಭ್ಯತೆ ಇದ್ದರೆ ಬೆಳೆಗಳ ಸಂದಿಗ್ದ್ ಹಂತದಲ್ಲಿ ಜೀವರಕ್ಷಕ ನೀರಾವರಿ ಒದಗಿಸುವುದು. 2 ರಿಂದ 3 ಬಾರಿ ಕುಂಟೆ ಹೊಡೆಯುವುದರಿಂದ ಮಣ್ಣಿನಲ್ಲಿರುವ ತೇವಾಂಶ ರಕ್ಷಿಸಬಹುದು.
ರಸಾಯನಿಕ ಕಳೆ ನಿರ್ವಹಣೆ : ಬೆಳೆಗಳ ಬೆಳವಣಿಗೆಗೆ ಕಳೆಗಳು ಬಹಳ ಅಪಾಯಕಾರಿ ಕೈಗಳೆ ಬಹಳ ಖರ್ಚ್ಚುದಾಯಕವಾಗಿರುವುದರಿಂದ ಕಳೆನಾಶಕಗಳನ್ನು ಬಳಸಿ ಸಮಯಕ್ಕೆ ಸರಿಯಾಗಿ ಕಳೆಗಳನ್ನು ನಿರ್ವಹಣೆ ಮಾಡಿ ಹೆಚ್ಚಿನ ಲಾಭವನ್ನು ಪಡೆಯುವುದು. ತೊಗರಿ ಬೆಳೆ ಬಿತ್ತಿದ 3 ದಿನಗಳ ಒಳಗಾಗಿ ಪೆಂಡಿಮಿಥಾಲಿನ್ 30 ಇ.ಸಿ.3.3 ಮೀ.ಲೀ.ಪ್ರತಿ ಲೀ.ನೀರಿಗೆ ಬೆರೆಸಿ ಚನ್ನಾಗಿ ಸಿಂಪಡಿಸಬೇಕು (ಸರಾಸರಿ 750 ಲೀ.ನೀರನ್ನು 1.00 ಹೆ.ಪ್ರದೇಶಕ್ಕೆ ಸಿಂಪಡಿಸಲು ಬಳಸಬೇಕು). ತೊಗರಿ ಬಿತ್ತಿದ 15 ರಿಂದ 20 ದಿನಗಳ ನಂತರ ಇಮೇಜತಾಫೈರ್ 10 ಎಸ್.ಎಲ್.2 ಮೀ.ಲೀ. ಪ್ರತಿ ಲೀ.ನೀರಿಗೆ ಬೆರೆಸಿ ಸಿಂಪಡಿಸಬೇಕು (ಸರಾಸರಿ 500 ಲೀ.ನೀರನ್ನು 1.00 ಹೆ. ಪ್ರದೇಶಕ್ಕೆ ಸಿಂಪಡಿಸಲು ಬಳಸಬೇಕು).
ಗಜ್ಜರಿ ಬೆಳೆಯಲ್ಲಿ ರಸಾಯನಿಕ ಕಳೆ ನಿರ್ವಹಣೆ : ಪೆಂಡಿಮಿಥಾಲಿನ್ 30 ಇ.ಸಿ.3.3 ಮೀ.ಲೀ.ಪ್ರತಿ ಲೀ. ನೀರಿಗೆ ಬೆರೆಸಿ ಅಥವಾ ಆಕ್ಸಿಫ್ಲೋರ್ಫೆನ್ 23.5 ಇ.ಸಿ. 0.5 ಮೀ.ಲೀ.ಪ್ರತಿ ಲೀ.ನೀರಿಗೆ ಬೆರೆಸಿ ಬಿತ್ತಿದ 3 ದಿನಗಳ ಒಳಗೆ ಚನ್ನಾಗಿ ಸಿಂಪಡಿಸಬೇಕು (ಸರಾಸರಿ 750 ಲೀ.ನೀರನ್ನು 1.00 ಹೆ.ಪ್ರದೇಶಕ್ಕೆ ಸಿಂಪಡಿಸಲು ಬಳಸಬೇಕು).
ಉಳ್ಳಾಗಡ್ಡಿ (ಈರುಳ್ಳಿ) ಈರುಳ್ಳಿ ಬೆಳೆಯಲ್ಲಿ ರಾಸಾಯನಿಕ ಕಳೆ ನಿರ್ವಹಣೆ : ಪೆಂಡಿಮಿಥಾಲಿನ್ 30 ಇ.ಸಿ.3.3 ಮೀ.ಲೀ. ಪ್ರತಿ ಲೀ. ನೀರಿಗೆ ಬೆರೆಸಿ ಅಥವಾ ಆಕ್ಸಿಫ್ಲೋರ್ಫೆನ್ 23.5 ಇ.ಸಿ.0.5 ಮೀ.ಲೀ.ಪ್ರತಿ ಲೀ.ನೀರಿಗೆ ಬೆರೆಸಿ ಬಿತ್ತಿದ ಅಥವಾ ನಾಡಿ ಮಾಡಿದ 3.00 ದಿನಗಳೊಳಗಾಗಿ ಚನ್ನಾಗಿ ಸಿಂಪಡಿಸಬೇಕು (ಸರಾಸರಿ 750ಲೀ ನೀರನ್ನು 1.00 ಹೆ.ಪ್ರದೇಶಕ್ಕೆ ಸಿಂಪಡಿಸಲು ಬಳಸಬೇಕು). ಹೆಚ್ಚಿನ ಮಾಹಿತಿಗಾಗಿ ಬೀದರ ತೋಟಗಾರಿಕೆ ಮಹಾವಿದ್ಯಾಲಯ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಕೇಂದ್ರ ಮುಖ್ಯಸ್ಥರು ಮೊ.ಸಂ.7411628470 ಉದ್ಯಾನ ಸಹಾಯವಾಣಿ ಸಂ.18004257910ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





Any questions related to ಬೀದರ ಜಿಲ್ಲೆಯ ರೈತ ಬಾಂಧವರಿಗೆ ತಾಂತ್ರಿಕ ಮಾಹಿತಿ ಕ್ರಮ ವಹಿಸಲು ಸಲಹೆ?